»   » ಪ್ರಭುದೇವ ಇನ್ ಕನ್ನಡದ ಕೋಟ್ಯಾಧಿಪತಿ: ಹೈಲೈಟ್ಸ್

ಪ್ರಭುದೇವ ಇನ್ ಕನ್ನಡದ ಕೋಟ್ಯಾಧಿಪತಿ: ಹೈಲೈಟ್ಸ್

Posted By:
Subscribe to Filmibeat Kannada

ಕನ್ನಡದ ಕೋಟ್ಯಾಧಿಪತಿ ಮತ್ತು ಕನ್ನಡ ಬಿಗ್ ಬಾಸ್ ಈ ಎರಡು ರಿಯಾಲಿಟಿ ಶೋಗಳು ಕನ್ನಡ ಕಿರುತೆರೆಗೆ ಹೊಸ ಆಯಾಮ ನೀಡಿದ ಕಾರ್ಯಕ್ರಮಗಳು.

ಸರಿಯಾಗಿ ಕನ್ನಡ ಬರದವರು, ಕನ್ನಡ ಎಂದರೆ ಎನ್ನಡ ಅನ್ನುವವರು ಮತ್ತು ಕನ್ನಡ ಎಂದರೆ ಬಲುದೂರ ಸಾಗುವ ಕೆಲ ನಮ್ಮವರು ಸೇರಿ ಈ ರಿಯಾಲಿಟಿ ಶೋ ನೋಡಲಾರಂಭಿಸಿರುವುದರಿಂದ ಸುವರ್ಣ ಮತ್ತು ಈಟಿವಿ ಕನ್ನಡದ ನಡುವೆ TRP ಯಲ್ಲಿ ಪೈಪೋಟಿ ಉಂಟಾಗಿರುವುದು ಸಜಜ.

ಬುಧವಾರ (ಏ 3) ನಡೆದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಲೆಜೆಂಡ್ ಪ್ರಭುದೇವ ಭಾಗವಹಿಸಿದ್ದರು. ಅವರ ಜೊತೆ ಪ್ರಭು ತಂದೆ ಮೂಗೂರು ಸುಂದರಂ ಮತ್ತು ಅವರ ತಾಯಿ ಕೂಡಾ ಇದ್ದರು. ಅಸ್ಪಷ್ಟ ಕನ್ನಡದಲ್ಲಿ ಲವಲವಿಕೆಯಿಂದ ಕಾರ್ಯಕ್ರಮದುದ್ದಕ್ಕೂ ಮಾತನಾಡಿದ ಪ್ರಭುದೇವಾ ಅಜ್ಜಿ ಜೊತೆ ಕಳೆದ ಜೀವನವನ್ನು, ಡಾ. ರಾಜ್, ಉಪೇಂದ್ರ ಬಗ್ಗೆ ಒಡನಾಟವನ್ನು ಕಾರ್ಯಕ್ರಮದ ನಿರೂಪಕ ಪುನೀತ್ ರಾಜಕುಮಾರ್ ಜೊತೆ ಮೆಲುಕು ಹಾಕಿಕೊಂಡರು.

ಕಾರ್ಯಕ್ರಮದ ಮಧ್ಯೆ ಹುಟ್ಟಿದ ಹಬ್ಬ ಆಚರಿಸಿಕೊಂಡ ಪ್ರಭು ಇದುವರೆಗೆ ಎರಡು ಲೈಫ್ ಲೈನ್ ಬಳಸಿಕೊಂಡು 3.20 ಲಕ್ಷ ರೂಪಾಯಿ ಗೆದ್ದಿದ್ದಾರೆ. ಫೋನ್ ಎ ಫ್ರೆಂಡ್ ಆಯ್ಕೆ ಉಳಿಸಿಕೊಂಡಿರುವ ಪ್ರಭು, ಇದಕ್ಕೆ ಹಿಂದಿ ಚಿತ್ರರಂಗದ ಖ್ಯಾತ ನಟ ಅಕ್ಷಯ್ ಕುಮಾರಿಗೆ ಫೋನ್ ಗುಜರಾಯಿಸಲಿದ್ದಾರೆ.

ಕಾರ್ಯಕಮ ಗುರುವಾರವೂ (ಏ 4) ಮುಂದುವರಿಯಲಿದೆ. ಬುಧವಾರದ ಕಾರ್ಯಕ್ರಮದ ಹೈಲೈಟ್ಸ್ ಸ್ಲೈಡಿನಲ್ಲಿ ಓದಿ.

ಪ್ರಭುದೇವ ಇನ್ ಕೋಟ್ಯಾಧಿಪತಿ: ಹೈಲೈಟ್ಸ್

ನನ್ನ ವೃತ್ತಿ ಜೀವನದಲ್ಲಿ ನಾನು ಕಂಡ ಶ್ರೇಷ್ಠ ಕಲಾವಿದರಲ್ಲಿ ರಾಜಕುಮಾರ್ ಒಬ್ಬರು. ಅವರ ವ್ಯಕ್ತಿತ್ವ ವಿಭಿನ್ನ. ಹಿಂದೆ ಚೆನ್ನೈನಿಂದ ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡಿದ್ದೆ. ನನ್ನನ್ನು ಪಕ್ಕಕ್ಕೆ ಕರೆಸಿಕೊಂಡು ನನ್ನನ್ನು ತಬ್ಬಿ, ಇವನು ನಮ್ಮ ಮೂಗೂರು ಸುಂದರಂ ಮಗ ನಿನಗೆ ಒಳ್ಳೆದಾಗಲಿ ಎಂದು ಹರಸಿದ್ದರು. ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದೆ. ಆದರೆ ಆ ಫೋಟೋ ನನಗಿನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಪ್ರಭುದೇವ ಇನ್ ಕೋಟ್ಯಾಧಿಪತಿ: ಹೈಲೈಟ್ಸ್

ನನಗೆ ತಂದೆ ಕಡೆಗಿಂತ ಹೆಚ್ಚಾಗಿ ತಾಯಿ ಮನೆ ಕಡೆ ಸಂಬಂಧ ಹೆಚ್ಚು, ನನ್ನ ತಂದೆಯ ಊರಾದ ಮೂಗೂರಿಗೆ ಇನ್ನೂ ನಾನು ಭೇಟಿ ಕೊಟ್ಟಿಲ್ಲ. ತಂದೆ ಇನ್ನೂ ವ್ಯವಸಾಯ ಮಾಡುತ್ತಿರುವುದು ನನಗೆ ಈ ಕಾರ್ಯಕ್ರಮದ ಮೂಲಕ ತಿಳಿಯಿತು.

ಪ್ರಭುದೇವ ಇನ್ ಕೋಟ್ಯಾಧಿಪತಿ: ಹೈಲೈಟ್ಸ್

H2O ಚಿತ್ರದ ಮುನ್ನ ಉಪೇಂದ್ರ ಬಗ್ಗೆ ಅಷ್ಟು ತಿಳಿದಿರಲಿಲ್ಲ. ಅವರೊಬ್ಬ ಡಿಫರೆಂಟ್ ನಿರ್ದೇಶಕರು ಎನ್ನುವ ವಿಚಾರ ಮಾತ್ರ ನನಗೆ ತಿಳಿದಿತ್ತು. ಆ ಚಿತ್ರದಲ್ಲಿ ಅವರ ವರ್ಕಿಂಗ್ ಸ್ಟೈಲಿಗೆ ಮರುಳಾದೆ. ಕಾರ್ಯಕ್ರಮದಲ್ಲಿ ಉಪೇಂದ್ರ ಜೊತೆ ಪ್ರಭುದೇವ ದೂರಾವಾಣಿಯಲ್ಲಿ ಮಾತನಾಡಿದರು.

ಪ್ರಭುದೇವ ಇನ್ ಕೋಟ್ಯಾಧಿಪತಿ: ಹೈಲೈಟ್ಸ್

ನನಗೆ ಸ್ವೀಟ್ ಅಂದರೆ ತುಂಬಾ ಇಷ್ಟ. ಅಮ್ಮ ಮಾಡಿದ ಪಾಯಸ ಅಂದರೆ ಪ್ರಾಣ. ಶೂಟಿಂಗ್ ಹೋಗಬೇಕಾದಾಗ ದೊಡ್ಡ ಡಬ್ಬದಲ್ಲಿ ಪಾಯಸ ಹಾಕಿಕೊಡು ಅನ್ನುತ್ತಿದ್ದೆ ಎಂದು ಅಂದಿನ ಜೀವನವನ್ನು ಪ್ರಭುದೇವ ಮೆಲುಕು ಹಾಕಿದರು.

ಪ್ರಭುದೇವ ಇನ್ ಕೋಟ್ಯಾಧಿಪತಿ: ಹೈಲೈಟ್ಸ್

ಮೂಗೂರು ಕಾರ್ಯಕ್ರಮದಲ್ಲಿ ಮಾತನಾಡಿ, ನೀನು ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಪ್ರಶ್ನೆ ಕೇಳುತ್ತೀಯಾ, ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ. ನೀನು ನಟಿಸಿದ ಚಿತ್ರದಲ್ಲಿ ನಿನಗೆ ಮೊದಲು ಕೊರಿಯೋಗ್ರಾಫಿ ಮಾಡಿದ್ದು ಯಾರೆಂದು ಪುನೀತ್ ಅವರನ್ನು ಪ್ರಶ್ನಿಸಿದರು. ಪುನೀತ್ ಬಳಿ ಮೂಗೂರು ಕೇಳಿದ ಪಶ್ನೆಗೆ ಉತ್ತರವಿರಲಿಲ್ಲ. ಭಾಗ್ಯವಂತರು ಚಿತ್ರದಲ್ಲಿ ಮೂಗೂರು ಅಪ್ಪುಗೆ ಕೊರಿಯೋಗ್ರಫಿ ಮಾಡಿದ್ದರು.

English summary
Dance legend Prabhudeva in Kannadada Kotyahdipati programme. Highlights. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada