For Quick Alerts
  ALLOW NOTIFICATIONS  
  For Daily Alerts

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ದರ್ಶನ್ ಬರಲೇ ಇಲ್ಲ

  By Naveen
  |
  ಶಿವಣ್ಣ ಕಾರ್ಯಕ್ರಮದಲ್ಲಿ ದರ್ಶನ್ ನೋ ಎಂಟ್ರಿ ಯಾಕೆ | Filmibeat Kannada

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಿದೆ. ಕಾರ್ಯಕ್ರಮದ ಒಂದೇ ಒಂದು ಸಂಚಿಕೆ ಈಗ ಬಾಕಿ ಇದೆ.

  ಈ ಕಾರ್ಯಕ್ರಮಕ್ಕೆ ಈಗಾಗಲೇ ನಟರಾದ ಉಪೇಂದ್ರ, ರಮೇಶ್, ಧನಂಜಯ್, ಯೋಗಿ, ಶರಣ್ ಸೇರಿದಂತೆ ಅನೇಕರು ಬಂದಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರ ಸಂಚಿಕೆ ಈ ಶನಿವಾರ ಪ್ರಸಾರ ಆಗಲಿದೆ. ಆದರೆ ದರ್ಶನ್ ಕಾರ್ಯಕ್ರಮದ ಅತಿಥಿ ಆಗುತ್ತಾರೆ ಎಂಬ ಅಭಿಮಾನಿಗಳ ಆಸೆ ನಿರಾಸೆ ಆಗಿದೆ. ಕಾರ್ಯಕ್ರಮ ಈ ವಾರ ಅಂತ್ಯ ಆಗಲಿದ್ದು, ಸುದೀಪ್ ಮತ್ತು ಜೋಗಿ ಪ್ರೇಮ್ ಅವರ ಸಂಚಿಕೆಯ ಮೂಲಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

  ಈ ಹಿಂದೆ 'ಫಿಲ್ಮಿಬೀಟ್ ಕನ್ನಡ' ಸಹ ಈ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಯಾವ ನಟರನ್ನು ನೋಡಲು ಬಯಸುತ್ತಿರಾ ಎಂಬ ಪ್ರಶ್ನೆಯ ಪೋಲ್ ಏರ್ಪಡಿಸಿತ್ತು. ಆಗ ಅಧಿಕ ಸಂಖ್ಯೆಯ ಓದುಗರು ದರ್ಶನ್ ಅವರ ಹೆಸರನ್ನು ಹೇಳಿದ್ದರು ಇನ್ನು ಸ್ಟಾರ್ ಸುವರ್ಣ ವಾಹಿನಿಯ ಫೇಸ್ ಬುಕ್ ಫೇಜ್ ನಲ್ಲಿ ಕೂಡ ಸಾಕಷ್ಟು ಅಭಿಮಾನಿಗಳ ದರ್ಶನ್ ಅವರನ್ನು ಕರೆ ತರುವಂತೆ ಮನವಿ ಮಾಡಿದ್ದರು. ಆದರೆ ಅಂತಹ ಅಭಿಮಾನಿಗಳು ಕೊನೆಗೂ ದರ್ಶನ್ ಅವರನ್ನು ಕಾರ್ಯಕ್ರಮದಲ್ಲಿ ನೋಡಲು ಸಾಧ್ಯ ಆಗಲಿಲ್ಲ.

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ 13 ಸಂಚಿಕೆಗಳನ್ನು ಪ್ಲಾನ್ ಮಾಡಿದ್ದು, ಸುದೀಪ್ ಅವರದ್ದೆ ಕೊನೆಯ ಸಂಚಿಕೆ ಆಗಿದೆ. ಈ ಸಂಚಿಕೆ ಇದೇ ಶನಿವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

  English summary
  Kannada actor Darshan did not appear as guest in Star Suvarna's 'No1 yari with Shivanna' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X