»   » ಆಕರ್ಷಣೆ ಬಗ್ಗೆ ಮಾತಾಡಿದ್ರೆ, 'ದರ್ಶನ್' ಹೆಸರು ಹೇಳ್ಬಿಟ್ರು ಶ್ರುತಿ ಹರಿಹರನ್.!

ಆಕರ್ಷಣೆ ಬಗ್ಗೆ ಮಾತಾಡಿದ್ರೆ, 'ದರ್ಶನ್' ಹೆಸರು ಹೇಳ್ಬಿಟ್ರು ಶ್ರುತಿ ಹರಿಹರನ್.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ... ''ಲಾಂಗ್ ಹಿಡಿಯೋಕೂ ಜೈ, ರೋಸ್ ಹಿಡಿಯೋಕೂ ಸೈ'' ಎಂಬಂತಿರುವ ದರ್ಶನ್ ಕಂಡರೆ ಹುಡುಗಿಯರಿಗೆ ಪಂಚಪ್ರಾಣ.

ದರ್ಶನ್ ಗೆ ಅಪ್ಪಟ ಅಭಿಮಾನಿ ಆಗಿರುವ ಹುಡುಗಿಯರು ಲೆಕ್ಕವಿಲ್ಲದಷ್ಟು. ಅಂಥವರಲ್ಲಿ, ನಟಿ ಶ್ರುತಿ ಹರಿಹರನ್ ಕೂಡ ಒಬ್ಬರು ಎಂದರೆ ನೀವು ನಂಬಲೇಬೇಕು.

'Darshan is Charming' says Kannada Actress Sruthi Hariharan

''ನಾನು ದರ್ಶನ್ ರವರ ಫ್ಯಾನ್'' ಎಂದು ಸ್ವತಃ ಶ್ರುತಿ ಹರಿಹರನ್ ಕಲರ್ಸ್ ಸೂಪರ್ ವಾಹಿನಿಯ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ''ದರ್ಶನ್ ತುಂಬಾ ಚಾರ್ಮಿಂಗ್'' ಎಂದೂ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ ಶ್ರುತಿ ಹರಿಹರನ್.

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಮಾತುಕತೆ, ಆಟ ಆಡಿದ ಬಳಿಕ 'ದಿಢೀರ್ ಬೆಂಕಿ' (Rapid Fire) ರೌಂಡ್ ಗೆ ಚಾಲನೆ ನೀಡಿದರು. ಆಗ ''ಯಾವತ್ತಾದರೂ ಮದುವೆ ಆಗಿರುವ ಮಿಸ್ಟರ್ ಹ್ಯಾಂಡ್ಸಮ್ ಮೇಲೆ ಅಟ್ರ್ಯಾಕ್ಟ್ (ಆಕರ್ಷಣೆ) ಆಗಿದ್ದೀರಾ.?'' ಎಂದು ಶ್ರುತಿ ಹರಿಹರನ್ ಗೆ ಅಕುಲ್ ಬಾಲಾಜಿ ಕೇಳಿದರು.

Diganth Likes That Darshan’s Mass Dialogue | Filmibeat kannada

ಅದಕ್ಕೆ, ''ಹೌದು... ಎಷ್ಟೋ ಜನ ನಟರೇ ಇದ್ದಾರಲ್ಲ, ಮದುವೆ ಆಗಿರುವವರು...'' ಎಂದು ಬಿಂದಾಸ್ ಉತ್ತರ ಕೊಟ್ಟರು ಶ್ರುತಿ. ಆಗ, ''ಯಾರು'' ಎಂದು ಅಕುಲ್ ಕೇಳಿದಕ್ಕೆ, ''ಕನ್ನಡದಲ್ಲಿ ದರ್ಶನ್ ನನಗೆ ತುಂಬಾ ಚಾರ್ಮಿಂಗ್ ಅನಿಸ್ತಾರೆ'' ಎಂದರು ಶ್ರುತಿ ಹರಿಹರನ್.

English summary
'Challenging Star Darshan is Charming' says Kannada Actress Sruthi Hariharan in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada