Don't Miss!
- News
ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ
- Finance
Matsya Sampada: ಪಿಎಂ ಮತ್ಸ್ಯ ಸಂಪದದಡಿ ಹೊಸ ಯೋಜನೆ ಜಾರಿ, ಸಂಪೂರ್ಣ ಮಾಹಿತಿ
- Sports
ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆಲುವಿನ ಸನಿಹದಲ್ಲಿ ಕರ್ನಾಟಕ: Live ಸ್ಕೋರ್
- Automobiles
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Bigg Boss Kannada 9 Grand Finale: ವೈಲ್ಡ್ ಕಾರ್ಡ್‌ನಲ್ಲಿ ಆಗಮಿಸಿದ ದೀಪಿಕಾ ಬಿಗ್ ಬಾಸ್ ಗೆಲ್ಲುತ್ತಾರಾ?
ಬಿಗ್ ಬಾಸ್ ಸೀಸನ್ 9 ನಲ್ಲಿ ಸ್ಟೈಲ್, ಮಾಡರ್ನ್ , ಕ್ಲಾಸ್ ಆಗಿ ಕಾಣಿಸಿಕೊಂಡವರು ಬೇರೆ ಯಾರೂ ಅಲ್ಲ ಅವರೇ ದೀಪಿಕಾ ದಾಸ್ . ದೀಪಿಕಾ ದಾಸ್ ಗೆ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ. ನೇರ ನುಡಿಯ ಸರಳ ವ್ಯಕಿತ್ವವುಳ್ಳ ದೀಪಿಕಾ ದಾಸ್ ಕಿಚ್ಚನ ಬಳಿ ಶಬ್ಭಾಸ್ ಗಿರಿ ಪಡೆದುಕೊಂಡಿದ್ದಾಳೆ. ದೀಪಿಕಾ ದಾಸ್ ಸಖತ್ ಸೈಲೆಂಟ್. ಆದರೆ ಆಟ ಎಂದು ಬಂದಾಗ ಯಾರೆದುರು ಕುಗ್ಗದೆ ಜಗ್ಗದೆ ಸೆಣಸಾಡುತ್ತ ಇದ್ದರು. ದೀಪಿಕಾ ದಾಸ್ ಹೆಚ್ಚಾಗಿ ಟಾಸ್ಕ್ ಮೇಲೆ ಗಮನ ಹರಿಸಿ ಆಟದಲ್ಲಿ ಗೆಲ್ಲುವುದು ಒಂದೇ ಗುರಿ ಎನ್ನುವ ರೀತಿ ಬಿಗ್ ಬಾಸ್ ನಲ್ಲಿ ಆಟ ಆಡುತ್ತಾ ಇದ್ದಾರೆ.
ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ದೀಪಿಕಾ ದಾಸ್ ಒಮ್ಮೆ ಎಲಿಮಿನೇಟ್ ಆಗಿದ್ದರು. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಸೀಸನ್ 9ಗೆ ಮತ್ತೆ ಎಂಟ್ರಿ ನೀಡಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿ ಯಾರ ಬಳಿಯೂ ತಕರಾರು ಮಾಡದೇ ತಾನಾಯಿತು ತನ್ನ ಪಾಡಯಿತು ಎಂದು ಇರುವ ಸ್ಮಾರ್ಟ್ ಬೆಡಗಿ ಎಂದರೆ ತಪ್ಪಾಗದು.. ಆಟದ ವಿಚಾರದಲ್ಲಿ ದೀಪಿಕಾ ಮಾತ್ರ ತನ್ನಲ್ಲಿರುವ ಎಲ್ಲಾ ಎಫರ್ಟ್ ಹಾಕಿ ಗೆಲ್ಲಲು ನೋಡುತ್ತಾರೆ.. ಬಿಗ್ ಬಾಸ್ ಸೀಸನ್ 9 ನಲ್ಲಿ ದೀಪಿಕಾ ಯಾರ ಬಳಿಯೂ ಜಗಳ ಮಾಡಿಕೊಳ್ಳದೆ ಗಾಸಿಪ್ ಮಾಡದೇ , ಯಾರ ಬಳಿಯೂ ಕೂಗಿ ಮಾತನಾಡದೆ ಜನರ ಮೆಚ್ಚುಗೆ ಪಡೆದುಕೊಂಡಿದ್ದಾರೆ.
'ತ್ರಿಪುರ
ಸುಂದರಿ'ಯಾಗಿ
ರಂಜಿಸಲು
ಬರುತ್ತಿದ್ದಾರೆ
ಬಿಗ್
ಬಾಸ್
ದಿವ್ಯಾ
ಸುರೇಶ್!
ಎಲ್ಲರಂತೆ ನಾನೂ ಅಲ್ಲ. ನಾನು ತುಂಬಾ ಡಿಫರೆಂಟ್ ಹುಡುಗಿ ಅನ್ನೋದನ್ನ ದೀಪಿಕಾ ದಾಸ್ ಎಲ್ಲರಿಗೂ ಅರ್ಥ ಮಾಡಿಸುತ್ತಿರುವ ಹಾಗೆ ಕಾಣುತ್ತಿದೆ. ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 9 ಗೆ ಆಗಮಿಸಿದ ಬಳಿಕ ಅನೇಕ ಕಷ್ಟದ ದಿನಗಳನ್ನು ಕಾಣುತ್ತಾರೆ, ಒಂದು ಬಾರಿ ಗೆದ್ದರೆ ಇನ್ನೊಂದು ಬಾರಿ ಸೋಲಿನ ಹೊಡೆತಕ್ಕೆ ದೀಪಿಕಾ ನಲುಗಿ ಹೋಗುತ್ತಾರೆ. ಆದರೆ ಏನೇ ಆದರೂ ಎದೆಗುಂದದೆ ಎಲ್ಲವನ್ನೂ ಎದುರಿಸುತ್ತಾರೆ ದೀಪಿಕಾ .

ಮಹಿಳಾ ನಾಯಕಿಯಾಗಿ ಆಯ್ಕೆ ಆದ ದೀಪಿಕಾ
ದೀಪಿಕಾ ಬಿಗ್ ಬಾಸ್ ಸೀಸನ್ 9 ನಲ್ಲಿ ಒಂದು ಹೆಗ್ಗಳಿಕೆ ಎಂದರೆ ಗೋಲ್ಡ್ ಮೈನ್ ಟಾಸ್ಕ್ ನಲ್ಲಿ ಹಲವಾರು ಜನ ಗ್ರೂಪ್ ಮಾಡಿ ಆಟವನ್ನು ಆಡಿದ್ದರು .. ಆ ಗ್ರೂಪ್ ದೀಪಿಕಾ ದಾಸ್ ಅನ್ನು ಟಾರ್ಗೆಟ್ ಮಾಡಿದ್ದರು. ಈ ವಿಚಾರ ದೀಪಿಕಾಗೆ ಅರ್ಥ ಆಗುವ ಹೊತ್ತಿನಲ್ಲಿ ದೀಪಿಕಾಳನ್ನು ಔಟ್ ಮಾಡಿದ್ದರು ಆದರೆ ಛಲ ಬಿಡದ ದೀಪಿಕಾ ಆಟದಲ್ಲಿ ಮತ್ತೆ ಪಾಲ್ಗೊಂಡರು. ಆ ವೇಳೆ ಯಾರೆಲ್ಲ ತನ್ನ ವಿರುದ್ದ ಪ್ಲಾನ್ ಮಾಡುತ್ತಿದ್ದರು ಅವರ ಬಳಿ ಸೆಣಸಾಡಿ ಗೆದ್ದು ಕ್ಯಾಪ್ಟನ್ ಆದರು. ಬಾಸ್ ಸೀಸನ್ 9 ನ ಮೊದಲ ಮಹಿಳಾ ಕ್ಯಾಪ್ಟನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.. ಕ್ಯಾಪ್ಟನ್ ಆಗಿದ್ದ ವೇಳೆ ಹಲವಾರು ಮಾತುಗಳನ್ನು ಕೆಳಬೇಕಾಯಿತು ದೀಪಿಕಾ. ಅದೆಷ್ಟೇ ಸರಿ ಮಾಡಲು ಹೋದರರೂ ಅದು ಸರಿ ಅಲ್ಲ ಅದು ತಪ್ಪು ಎನ್ನುವ ಜನ ಅನೇಕರಿದ್ದರು

ಜನರಿಗೆ ಮನರಂಜನೆ ನೀಡುತ್ತಿದ್ದ ದೀಪಿಕಾ
ಇದನ್ನು ಕಂಡ ದೀಪಿಕಾ ಬಳಿಕ ಯಾರ ಮಾತಿಗೂ ಕಿವಿಗೊಡದೆ ತನ್ನದೇ ಮಾತನ್ನು ಸಮರ್ಥನೆ ಮಾಡುತ್ತಾ ಇರುತ್ತಾರೆ. ಕೊನೆ ಕೊನೆಗೆ ಎಲ್ಲರಿಗೂ ಅರ್ಥ ಮಾಡಿಸಬೇಕು. ಇದರಿಂದ ದೀಪಿಕಾಗೆ ಸ್ವಲ್ಪ ಬ್ಯಾಡ್ ಲಕ್ ಶುರು ಆಗುತ್ತದೆ. ಅರುಣ್ ಸಾಗರ್ ಜೊತೆ ಸೇರಿಕೊಂಡ ದೀಪಿಕಾ ಜನರಿಗೆ ಮನರಂಜನೆ ನೀಡುವ ಕೆಲಸ ಮಾಡುತ್ತಿದ್ದರು..ಇದರಿಂದ ಜನರಿಗೆ ದೀಪಿಕಾ ಇನ್ನಷ್ಟು ಹತ್ತಿರ ಆಗುತ್ತಾ ಇರುತ್ತಾರೆ. ಮಿಣಿ ಮಿಣಿ ಮೀನಾಕ್ಷಿ ಎಂಬ ಪಾತ್ರಕ್ಕೆ ಕಿಚ್ಚ ಕೂಡ ತಲೆಬಾಗಿಸಿದ್ದಾರೆ.

ದೀಪಿಕಾ ಪಾತ್ರಕ್ಕೆ ತಲೆ ದೂಗಿದ ಕಿಚ್ಚ
ಹಲವಾರು ಟಾಸ್ಕ್ ನಲ್ಲಿ ದೀಪಿಕಾ ವಿರುದ್ದ ಕಾಮೆಂಟ್ ಗಳು ಬಂದರೂ ಅದೆಲ್ಲವನ್ನೂ ಮನಸಿಗೆ ತೆಗೆದುಕೊಳ್ಳದೆ ಕುಗ್ಗದೆ ಟಾಸ್ಕ್ ನಲ್ಲಿ ಮುನ್ನುಗುತ್ತಾರೆ. ಕೆಲವೊಂದಷ್ಟು ಜನರ ಜೊತೆ ಬೆರೆಯಲು ಶುರು ಮಾಡುವ ವೇಳೆ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಆ ಬಳಿಕ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಸೀಸನ್ 9 ಗೆ ಆಗಮಿಸುತ್ತಾರೆ. ಈ ವೇಳೆ ದೀಪಿಕಾ ಮೊದಲಿನ ಹಾಗೆ ಸೈಲೆಂಟ್ ಆಗಿ ಇರದೆ ಬಹಳ ಲವಲವಿಕೆಯಿಂದ ಎಲ್ಲರ ಜೊತೆ ಬೆರೆಯುತ್ತ ಇರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಯಾರ ಜೊತೆಯೂ ಕೈ ಜೋಡಿಸಿದೆ ಒಬ್ಬೊಂಟಿಯಾಗಿ ಮುನ್ನುಗ್ಗಿದ ದೀಪಿಕಾ ಕ್ಯಾಪ್ಟನ್ ಶಿಪ್ ನಲ್ಲಿ ಕೂಡ ಉತ್ತಮವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನುಗ್ಗುತ್ತ ಇರುತ್ತಾರೆ. ಇದೀಗ ಬಿಗ್ ಬಾಸ್ ಗೆ ರಿ ಎಂಟ್ರಿ ಕೊಟ್ಟಿರುವ ದೀಪಿಕಾ ಗ್ರಾಂಡ್ ಫಿನಾಲೆ ಮೆಟ್ಟಿಲು ಏರಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ದೀಪಿಕಾ ನಾಲ್ಕನೇ ಸ್ಥಾನವನ್ನು ಪಡೆದುಕೊಂಡು ಇದ್ದರು.

ಬಿಗ್ ಬಾಸ್ ಸೀಸನ್ 9ರಲ್ಲಿ ಐದನೇ ಸ್ಥಾನದಲ್ಲಿರುವ ದೀಪಿಕಾ
ಇದೀಗ ಬಿಗ್ ಬಾಸ್ ಸೀಸನ್ 9 ರಲ್ಲಿ ಸೀನಿಯರ್ ಆಗಿ ಸ್ಪರ್ಧೆ ಮಾಡುತ್ತಾ ಇದ್ದಾರೆ ಇದೀಗ ಗ್ರಾಂಡ್ ಫಿನಾಲೆಗೆ ತಲುಪಿದ್ದಾರೆ. ಈ ಬಾರಿ ದೀಪಿಕಾ ದಾಸ್ ಮೊದಲನೇ ಸ್ಥಾನಕ್ಕೆ ಬರುತ್ತಾರಾ? ಇದೀಗ ಐದನೇ ಸ್ಥಾನದಲ್ಲಿ ಇರುವ ದೀಪಿಕಾ ಮೊದಲನೇ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ ಕೂಡ. ಬಿಗ್ ಬಾಸ್ ಆರಂಭದಿಂದಲೂ ದೀಪಿಕಾ ದಾಸ್ ಟಾಸ್ಕ್ ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡುತ್ತಾ ಬಂದಿದ್ದಾರೆ. ಮೊದಲ ವಾರ ಬ್ಯಾಲೆನ್ಸಿಂಗ್ ಟಾಸ್ಕ್ ನಲ್ಲಿ ಕೂಡ ಉತ್ತಮ ಪರ್ಫಾಮೆನ್ಸ್ ಅನ್ನು ನೀಡಿದವರಲ್ಲಿ ಒಬ್ಬರು . ಇದೀಗ ಬಿಗ್ ಬಾಸ್ ಸೀಸನ್ 9 ನಲ್ಲಿ ಗ್ರಾಂಡ್ ಫಿನಾಲೇಗೆ ಎಂಟ್ರಿ ನೀಡಿದ್ದಾರೆ. ಈ ಬಾರಿಯಾದರೂ ಕಿರೀಟ ಮುಡಿಗೇರಿಸಿಕೊಳ್ಳುತ್ತಾರ ಕಾದು ನೋಡಬೇಕಿದೆ.