For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಊಹೆಗೂ ಮೀರಿದೆ 'ಬಿಗ್ ಬಾಸ್'ಗಾಗಿ ನಟಿ ದೀಪಿಕಾ ದಾಸ್ ಪಡೆದ ಸಂಭಾವನೆ.!

  |

  Recommended Video

  Deepika Das interview : ನಮ್ಮ ಅಮ್ಮನಿಂದ ತಪ್ಪಾಗಿದೆ ಆದ್ರೆ ! | Deepika Das | Biggboss | kiccha sudeep

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಮುಕ್ತಾಯಗೊಂಡಿದೆ. ಆದರೂ, ಈ ಶೋ ಕುರಿತಾದ ಟಾಕ್ ಮಾತ್ರ ಕಮ್ಮಿ ಆಗಿಲ್ಲ. 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ವಿಜೇತರಾಗಿ ಶೈನ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾಯ್ತು. 61 ಲಕ್ಷ ರೂಪಾಯಿಯ ಜೊತೆಗೆ ಒಂದು ಕಾರಿಗೆ ಶೈನ್ ಶೆಟ್ಟಿ ಒಡೆಯನಾಗಿದ್ದೂ ಆಯ್ತು.

  ಇದೀಗ 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಕೆಲ ವರದಿಗಳ ಪ್ರಕಾರ, ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಬಳ ಪಡೆದ ಮಹಿಳಾ ಸ್ಪರ್ಧಿ ಕಿರುತೆರೆಯ ನಟಿ ದೀಪಿಕಾ ದಾಸ್.!

  ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ... ಮೂರು ತಿಂಗಳ ಕಾಲ ನಡೆದ 'ಬಿಗ್ ಬಾಸ್' ಶೋನಿಂದ ದೀಪಿಕಾ ದಾಸ್ ಜಾಸ್ತಿ ಸಂಭಾವನೆಯನ್ನೇ ಜೇಬಿಗೆ ಇಳಿಸಿದ್ದಾರೆ ಎನ್ನಲಾಗಿದೆ. ಮುಂದೆ ಓದಿರಿ...

  ಫಿನಾಲೆ ಹಂತ ತಲುಪಿದ್ದ ನಟಿ ದೀಪಿಕಾ ದಾಸ್.!

  ಫಿನಾಲೆ ಹಂತ ತಲುಪಿದ್ದ ನಟಿ ದೀಪಿಕಾ ದಾಸ್.!

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮೊದಮೊದಲು ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದ ನಟಿ ದೀಪಿಕಾ ದಾಸ್, ಹೆಚ್ಚು ಕೂಗಾಡದೆ, ಕಾಂಟ್ರವರ್ಸಿಗಳಿಗೆ ಸಿಲುಕದೆ ಸಲೀಸಾಗಿ ಟಾಪ್ 5 ಹಂತ ತಲುಪಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ಕನೇ ಸ್ಥಾನ ಪಡೆದ ದೀಪಿಕಾ ದಾಸ್ ಗೆ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತಾ.?

  ವಾರಕ್ಕೆ ಫಿಕ್ಸ್ ಆಗಿದ್ದ ಮೊತ್ತ ಎಷ್ಟು.?

  ವಾರಕ್ಕೆ ಫಿಕ್ಸ್ ಆಗಿದ್ದ ಮೊತ್ತ ಎಷ್ಟು.?

  ಮೂಲಗಳ ಪ್ರಕಾರ, ಒಂದು ವಾರಕ್ಕೆ 50 ಸಾವಿರ ರೂಪಾಯಿ ದೀಪಿಕಾ ದಾಸ್ ಗೆ ಸಂಭಾವನೆಯಾಗಿ ಫಿಕ್ಸ್ ಆಗಿತ್ತು. ಅದರಂತೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕೊನೆವರೆಗೂ ಇದ್ದ ದೀಪಿಕಾ ದಾಸ್ ಕಮ್ಮಿ ಅಂದರೂ 9-10 ಲಕ್ಷವನ್ನು ಸಂಬಳವಾಗಿ ಪಡೆದಿದ್ದಾರೆ.

  ಮಹಿಳಾ ಸ್ಪರ್ಧಿಗಳ ಪೈಕಿ ಹೆಚ್ಚು

  ಮಹಿಳಾ ಸ್ಪರ್ಧಿಗಳ ಪೈಕಿ ಹೆಚ್ಚು

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಮಹಿಳೆ ಸ್ಪರ್ಧಿಗಳ ಪೈಕಿ ಹೆಚ್ಚು ಸಂಭಾವನೆ ಪಡೆದಿರುವುದು ದೀಪಿಕಾ ದಾಸ್ ಅಂತ ಹೇಳಲಾಗಿದೆ. ಅಂದ್ಹಾಗೆ, ಈ ಬಾರಿಯ 'ಬಿಗ್ ಬಾಸ್'ನಲ್ಲಿ ಭೂಮಿ ಶೆಟ್ಟಿ, ಪ್ರಿಯಾಂಕಾ, ಚಂದನಾ, ಚೈತ್ರ ಕೋಟೂರು, ರಕ್ಷಾ, ಸುಜಾತ, ದುನಿಯಾ ರಶ್ಮಿ ಮತ್ತು ಚೈತ್ರ ವಾಸುದೇವನ್ ಸ್ಪರ್ಧಿಸಿದ್ದರು. ಇವರೆಲ್ಲರಿಗೂ ಹೋಲಿಸಿದರೆ ದೀಪಿಕಾ ದಾಸ್ ಜಾಸ್ತಿ ಸಂಬಳ ತೆಗೆದುಕೊಂಡಿದ್ದಾರೆ.

  ಬಹುಮಾನ ಹಣ ಕೂಡ ಲಭಿಸಿದೆ.!

  ಬಹುಮಾನ ಹಣ ಕೂಡ ಲಭಿಸಿದೆ.!

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಟಾಪ್ 5 ಹಂತ ತಲುಪಿದ ಕಾರಣಕ್ಕೆ ದೀಪಿಕಾ ದಾಸ್ ಗೆ ಒಂದು ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗಿದೆ. ಇದರೊಂದಿಗೆ ಟಾಸ್ಕ್ ವೊಂದರಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿ, ಅದಕ್ಕೆ ಹೆಚ್ಚು ವೋಟ್ಸ್ ಗಿಟ್ಟಿಸಿದ್ದ ದೀಪಿಕಾ ದಾಸ್ ಗೆ ಐದು ಲಕ್ಷ ರೂಪಾಯಿ ಬಹುಮಾನವಾಗಿ ಲಭಿಸಿದೆ. ಒಟ್ನಲ್ಲಿ, 'ಬಿಗ್ ಬಾಸ್' ಕಾರ್ಯಕ್ರಮದಿಂದ ದೀಪಿಕಾ ದಾಸ್ ಗೆ ಲಕ್ಷಾಂತರ ರೂಪಾಯಿ ಲಾಭವಾಗಿದೆ.

  English summary
  TV Actress Deepika Das is the highest paid female contestant in Bigg Boss Kannada 7.
  Tuesday, February 4, 2020, 8:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X