For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ದಾಸ್ 'ಬಿಗ್' ಮನೆಯಲ್ಲಿ ಉಳಿದಿದ್ದರೆ ಅದಕ್ಕೆ 'ಗ್ಲಾಮರ್' ಮಾತ್ರ ಕಾರಣ!

  |

  ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗಿ ಮೂರು ವಾರಗಳು ಕಳೆದು ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ. ಈಗಾಗಲೆ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಮೂರು ವಾರ ಕಳೆದರು ಮನೆಯಲ್ಲಿ ದೀಪಿಕಾ ದಾಸ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಮನೆಯಲ್ಲಿ ಇರುವ ದೀಪಿಕಾಗಿಂದ ಮನೆಯಿಂದ ಹೊರಬಂದಿರುವ ಸ್ಪರ್ಧಿಗಳೆ ಉತ್ತಮ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

  ವೀಕ್ಷಕರ ಲೆಕ್ಕಾಚಾರ ಒಂದಾದರೆ ಬಿಗ್ ಬಾಸ್ ಲೆಕ್ಕಾಚಾರನೆ ಬೇರೆ ಆಗಿರುತ್ತೆ. ಸ್ಪರ್ಧಿಗಳ ಚಟುವಟಿಕೆ, ಮನರಂಜನೆ, ಮೈಂಡ್ ಗೇಮ್ ಎಲ್ಲಾ ಲೆಕ್ಕಾಹಾಕಿ ಯಾರು ಮನೆಯಿಂದ ಹೊರ ಬರಬಹುದು ಎಂದು ವೀಕ್ಷಕರು ಒಂದು ಲೆಕ್ಕಹಾಕುತ್ತಿದ್ದರೆ, ಬಿಗ್ ಬಾಸ್ ಮತ್ತ್ಯಾರನ್ನೋ ಮನೆಯಿಂದ ಹೊರಹಾಕಿರುತ್ತಾರೆ. ದೀಪಿಕಾ ದಾಸ್ ವಿಚಾರದಲ್ಲೂ ಹಾಗೆ ಆಗಿದೆ.

  ಚೈತ್ರ ಕೋಟೂರು ಅಂದು 'ಆ' ನಿರ್ಧಾರ ಮಾಡಿದ್ರೆ, ಇಂದು ಈ ರೀತಿ ಇರ್ತಿರ್ಲಿಲ್ಲ.!ಚೈತ್ರ ಕೋಟೂರು ಅಂದು 'ಆ' ನಿರ್ಧಾರ ಮಾಡಿದ್ರೆ, ಇಂದು ಈ ರೀತಿ ಇರ್ತಿರ್ಲಿಲ್ಲ.!

  ಬಿಗ್ ಬಾಸ್ ಮನೆಯ ಎಲ್ಲಾ ಚಟುವಟಿಕೆಗಳಲ್ಲಿ ದೀಪಿಕಾ ದಾಸ್ ಭಾಗವಹಿಸುವಿಕೆಯ ಬಗ್ಗೆ ಅನೇಕರಲ್ಲಿ ಪ್ರಶ್ನೆ ಮೂಡಿದೆ. ಮನೆಯಲ್ಲಿ ಸದ್ಯ ಇರುವ 15 ಸ್ಪರ್ಧಿಗಳಲ್ಲಿ 14 ಜನ ಸಖತ್ ಆಕ್ವೀವ್ ಆಗಿದ್ದಾರೆ. ಮನೆಯ ಎಲ್ಲಾ ಟಾಸ್ಕ್ ಗಳಲ್ಲಿಯೂ ಭಾಗಿಯಾಗುತ್ತಾರೆ. ಜೊತೆಗೆ ವೀಕ್ಷಕರಿಗೆ ಒಂದಿಷ್ಟು ಮನರಂಜನೆಯೂ ಅವರಿಂದ ಸಿಗುತ್ತಿದೆ. ಆದರೆ ದೀಪಿಕಾ ದಾಸ್ ಏನ್ಮಾಡ್ತಿದ್ದಾರೆ? ಮನೆಯಲ್ಲಿ ಯಾಕೆ ಇದ್ದಾರೆ? ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಿದೆ.

  ಬೌಂಡರಿ ಹಾಕೊಂಡಿದ್ದಾರೆ

  ಬೌಂಡರಿ ಹಾಕೊಂಡಿದ್ದಾರೆ

  ದೀಪಿಕಾ ದಾಸ್ ಮನೆಯಲ್ಲಿ ತನ್ನ ಸುತ್ತ ಒಂದು ಬೌಂಡರಿ ಹಾಕಿಕೊಂಡು ಜೀವಿಸುತ್ತಿದ್ದಾರೆ. ಅವರನ್ನು ಯಾರು ಮಾತನಾಡಿಸುವ ಹಾಗಿಲ್ಲ, ಅವರೂ ಯಾರನ್ನು ಮಾತನಾಡಿಸಲ್ಲ. ಟಾಸ್ಕ್ ವಿಚಾರದಲ್ಲೂ ಸಹ ದೀಪಿಕಾ ಭಾಗವಹಿಸುವಿಕೆ ಕಡಿಮೆ. ಉಳಿದೆಲ್ಲ ಸ್ಪರ್ಧಿಗಳಿಂದ ಒಂದು ಅಂತರ ಕಾಯ್ದುಕೊಂಡಿದ್ದಾರೆ ದೀಪಿಕಾ. ಮನೆಯಲ್ಲಿ ಹೆಚ್ಚು ಆಕ್ವೀಲ್ ಆಗಿಲ್ಲ ಅಂದ್ಮೇಲೆ ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಇರುವುದೇಕೆ? ಅವರ ಪಾತ್ರವೇನು ಅಲ್ಲಿ? ಎನ್ನುವ ಮಾತುಗಳು ಚರ್ಚೆಯಾಗುತ್ತಿದೆ.

  ರೊಚ್ಚಿಗೆದ್ದ ರಾಜು ತಾಳಿಕೋಟೆ: ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಬೇರೆ ಲೆಕ್ಕ.!ರೊಚ್ಚಿಗೆದ್ದ ರಾಜು ತಾಳಿಕೋಟೆ: ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಬೇರೆ ಲೆಕ್ಕ.!

  ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ

  ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ

  ಬಿಗ್ ಮನೆಯಲ್ಲಿ ಒಂದಿಷ್ಟು ಗಾಸಿಪ್, ಗುಂಪುಗಾರಿಗೆ, ಗಲಾಟೆ, ಕಿತ್ತಾಟಗಳು ಸರ್ವೆಸಾಮಾನ್ಯ. ಆದರೆ ದೀಪಿಕಾ ಮಾತ್ರ ಇದ್ಯಾವುದಕ್ಕು ಸಂಬಂಧ ಇಲ್ಲ ಎನ್ನುವ ಹಾಗೆ ಉಳಿದ ಸ್ಪರ್ಧಿಗಳಿಂದ ದೂರ ಇರುತ್ತಾರೆ. ಮನೆಯಲ್ಲಿ ಹೆಚ್ಚಾಗಿ ಒಬ್ಬರೆ ಇರುತ್ತಾರೆ. ಯಾರು ಜೊತೆಯು ಕಾಣಿಸಿಕೊಳ್ಳದ ದೀಪಿಕಾ ರಶ್ಮಿಯವರನ್ನು ಫ್ರೆಂಡ್ ಮಾಡಿಕೊಂಡಿದ್ದರು. ಆದರೀಗ ರಶ್ಮಿ ಕೂಡ ಮನೆಯಿಂದ ಹೊರಬಂದಿದ್ದಾರೆ. ತನಗೆ ಕೊಟ್ಟಿರುವ ಕೆಲಸವನ್ನು ಮುಗಿಸಿ ನಂತರ ಮೇಕಪ್ ರೂಮಿನಲ್ಲಿ ಇರುತ್ತಾರೆ. ಮೇಕಪ್ ರೂಮ್ ಬಿಟ್ಟರೆ ಬೇರೆಲ್ಲೂ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ.

  ಟಾಸ್ಕ್ ವಿಚಾರದಲ್ಲೂ ಅಷ್ಟಕಷ್ಟೆ

  ಟಾಸ್ಕ್ ವಿಚಾರದಲ್ಲೂ ಅಷ್ಟಕಷ್ಟೆ

  ಟಾಸ್ಕ್ ವಿಚಾರದಲ್ಲೂ ಸಹ ದೀಪಿಕಾ ಹೆಚ್ಚು ಆಸಕ್ತಿ ವಹಿಸಿ ಮುಂದೆ ಬರುವುದಿಲ್ಲ. ಟಾಸ್ಕ್ ನಲ್ಲಿ ಹೆಚ್ಚು ಭಾಗಿಯಾದರೆ, ಸಹ ಸ್ಪರ್ಧಿಗಳಿಂದ ಏನಾದರು ತೊಂದರೆಯಾಗಬಹುದು ಎನ್ನುವುದು ದೀಪಿಕಾ ತಲೆಯಲ್ಲಿ ಇದ್ದಿರಬಹುದು. ರಾಜು ತಾಳಿಕೋಟೆ ಮುಟ್ಟಿದ್ದಕ್ಕೆ ಕೂಗಾಡಿದ್ದರು ದೀಪಿಕಾ. ಹಾಗಾಗಿ ಉಳಿದ ಸ್ಪರ್ಧಿಗಳು ಸಹ ದೀಪಿಕಾ ಜೊತೆ ಹೆಚ್ಚು ಸೇರುವುದಿಲ್ಲ. ಇತ್ತೀಚಿಗೆ ನಡೆದ ಬಿಗ್ ಮನೆಯ ರಾಜ ಮತ್ತು ರಾಣಿ ಆಯ್ಕೆ ಟಾಸ್ಕ್ ನಲ್ಲಿಯು ದೀಪಿಕಾ ಹೆಚ್ಚು ಆಸಕ್ತಿ ತೋರಿದ ಹಾಗೆ ಕಾಣಿಸಿಲ್ಲ. ಸೈನಿಕ ಪಾತ್ರ ಮಾಡಲು ಹಿಂದೇಟು ಹಾಕಿದರು. ಅಂದ್ಮೇಲೆ ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಭಾಗವಹಿಸುವಿಕೆ ಏನಿದೆ?

  'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ಯಾರ ವಿರುದ್ಧ ಯಾರ ಮಸಲತ್ತು.?'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ಯಾರ ವಿರುದ್ಧ ಯಾರ ಮಸಲತ್ತು.?

  ಕಂಟೆಂಟ್ ಯಾವುದು ಇಲ್ಲ

  ಕಂಟೆಂಟ್ ಯಾವುದು ಇಲ್ಲ

  ಟಾಸ್ಕ್ ವಿಚಾರದಲ್ಲೂ ದೀಪಿಕಾ ದಾಸ್ ಆಸಕ್ತಿ ತೋರುತ್ತಿಲ್ಲ. ಮನೆಯಲ್ಲಿ ಯಾರೊಂದಿಗೂ ಬೆರೆಯುತ್ತಿಲ್ಲ. ಮೇಕಪ್ ರೂಮ್ ಬಿಟ್ಟರೆ ಬೇರೆಲ್ಲೂ ದೀಪಿಕಾ ಕಾಣಿಸಿಕೊಳ್ಳುವುದಿಲ್ಲ. ಹೋಗಲಿ ಏನಾದರು ಮನರಂಜನೆಯಾದರು ನೀಡುತ್ತಾರಾ ಅಂದರೆ ಅದೂ ಇಲ್ಲ. ಇದುವರೆಗೂ ದೀಪಿಕಾ ಕಡೆಯಿಂದ ಯಾವ ರೀತಿಯ ಮನರಂಜನೆಯೂ ವೀಕ್ಷಕರು ನೋಡಿಲ್ಲ. ಹಾಗಂದಮೇಲೆ ಬಿಗ್ ಮನೆಯಲ್ಲಿ ದೀಪಿಕಾ ಇರುವುದಾದರು ಯಾಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

  ಎಪಿಸೋಡ್ ಗೆ ಎರಡು ಅಥವಾ ಮೂರು ದೃಶ್ಯ ಇರಬಹುದು

  ಎಪಿಸೋಡ್ ಗೆ ಎರಡು ಅಥವಾ ಮೂರು ದೃಶ್ಯ ಇರಬಹುದು

  ಪ್ರತಿದಿನ ಬಿಗ್ ಬಾಸ್ ರಾತ್ರಿ 9ಗಂಟೆಗೆ ಪ್ರಸಾರ ವಾಗುತ್ತೆ. ಒಂದೂವರೆ ಗಂಟೆ ಬಿಗ್ ಬಾಸ್ ಪ್ರಸಾರವಾಗಿತ್ತೆ. ಆದರೆ ಈ ಒಂದೂವರೆ ಗಂಟೆಯಲ್ಲಿ ದೀಪಿಕಾ ಕಾಣಸಿಗುವುದು ಕೆಲವೆ ಕೆಲವು ದೃಶ್ಯಗಳಲ್ಲಿ ಮಾತ್ರ. ದೀಪಿಕಾ ಅವರ ಯಾವ ಚಟುವಟಿಗಳನ್ನು ತೋರಿಸಬೇಕು ಎನ್ನುವ ಗೊಂದಲ ಬಿಗ್ ಬಾಸ್ ಗೂ ಮೂಡಿರಬೇಕು. ಯಾವುದೆ ಕಂಟೆಂಟ್, ಮನರಂಜನೆ ಇಲ್ಲ ಅಂದಮೇಲೆ ಕ್ಯಾಮರಾವಾದರು ಯಾಕೆ ಅವರ ಕಡೆ ತಿರುಗುತ್ತೆ ಹೇಳಿ.

  ನಾಲ್ಕನೆ ವಾರದವರೆಗೆ ಉಳಿಯಲು ಕಾರಣವೇನು?

  ನಾಲ್ಕನೆ ವಾರದವರೆಗೆ ಉಳಿಯಲು ಕಾರಣವೇನು?

  ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದರೆ ಮನರಂಜನೆ ನೀಡಬೇಕು. ಇಲ್ಲವಾದರೆ ಗ್ಲಾಮರ್ ಇರಬೇಕು. ಟಾಸ್ಕ್ ಮತ್ತು ಮನರಂಜನೆ ನೀಡದಿದ್ದರು, ಮನೆಯಲ್ಲಿ ಬೋಲ್ಡ್ ಆಗಿ ಡ್ರೆಸ್ ಹಾಕಿಕೊಂಡು, ಮೇಕಪ್ ಮಾಡಿಕೊಂಡು ಓಡಾಡುತ್ತಿರಬೇಕು. ಆದರೆ ದೀಪಿಕಾ ದಾಸ್ ಮೇಕಪ್ ಒಂದು ಮಾಡಿಕೊಳ್ಳುತ್ತಾರೆ ಬಿಟ್ಟರೆ ಉಳಿದಂತೆ ಯಾವುದೆ ರೀತಿಯ ಕಂಟೆಂಟ್ ದೀಪಿಕಾ ಬಳಿ ಇಲ್ಲ. ಕೇವಲ ಮೇಕಪ್ ಚೆನ್ನಾಗಿ ಮಾಡಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಇದ್ದಾರಾ ಅನ್ನುವ ಅಚ್ಚರಿ ಮೂಡಿಸಿದೆ.

  English summary
  Kannada actress Deepika Das remaining in 'Big Boss' house only because of 'glamor'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X