»   » 'ಬಿಗ್ ಬಾಸ್' ಮನೆಗೆ ಹೋಗುತ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ

'ಬಿಗ್ ಬಾಸ್' ಮನೆಗೆ ಹೋಗುತ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಒಂದು ಕಡೆ ಕನ್ನಡದ 'ಬಿಗ್ ಬಾಸ್' ದಿನೇ ದಿನೇ ರಂಗೇರುತ್ತಿದೆ. ಇತ್ತ ಹಿಂದಿಯ 'ಬಿಗ್ ಬಾಸ್' ಕೂಡ ಅನೇಕ ಸುದ್ದಿ ಮಾಡುತ್ತಲೇ ಇದೆ. ಆದರೆ ಇದೀಗ 'ಬಿಗ್ ಬಾಸ್' ಮನೆಗೆ ನಟಿ ದೀಪಿಕಾ ಪಡುಕೋಣೆ ಹೋಗುತ್ತಿದ್ದಾರಂತೆ.

ದೀಪಿಕಾ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಹೋಗುತ್ತಿಲ್ಲ ಬದಲಿಗೆ ಅತಿಥಿಯಾಗಿ ಹೋಗುತ್ತಿದ್ದಾರೆ. ತಮ್ಮ 'ಪದ್ಮಾವತಿ' ಸಿನಿಮಾದ ಪ್ರಚಾರಕ್ಕಾಗಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುತ್ತಿದ್ದಾರೆ.

Deepika Padukone to promote 'Padmavati' on Bigg Boss 11.

ಇಲ್ಲಿ ದೀಪಿಕಾ ಜೊತೆ ನಟ ಶಾಹಿದ್ ಕಪೂರ್ ಕೂಡ ಸಾಥ್ ನೀಡಲಿದ್ದಾರೆ. ಈ ಮೂಲಕ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಮೂರು ಸ್ಟಾರ್ ಗಳು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ 'ಬಿಗ್ ಬಾಸ್ ಸೀಸನ್ 10'ನಲ್ಲಿ ತಮ್ಮ 'ತಮಾಷ' ಚಿತ್ರದ ಪ್ರಚಾರಕ್ಕಾಗಿಯೂ ದೀಪಿಕಾ ತಮ್ಮ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಇನ್ನು ಈ ಕಾರ್ಯಕ್ರಮದಲ್ಲಿ ಚಿತ್ರದ ಇನ್ನೊಬ್ಬ ನಟ ರಣ್ವೀರ್ ಸಿಂಗ್ ಮಿಸ್ ಆಗಲಿದ್ದಾರೆ. ಬೇರೆ ಚಿತ್ರದ ಶೂಟಿಂಗ್ ನಲ್ಲಿ ರಣ್ವೀರ್ ಬಿಜಿ ಇದ್ದು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲವಂತೆ. ಇನ್ನು ದೀಪಿಕಾ ಅವರ 'ಪದ್ಮಾವತಿ' ಸಿನಿಮಾ ಡಿಸೆಂಬರ್ 1 ಕ್ಕೆ ದೇಶದ್ಯಾಂತ ಬಿಡುಗಡೆಯಾಗಿದೆ. ಸಂಜಯ್ ಲೀಲಾ ಬಂಸಾಲಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

English summary
Deepika Padukone and Shahid Kapoor to promote 'Padmavati' movie on Salman Khan’s Bigg Boss 11 without Ranveer Singh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada