For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಒಂದಾಗುತ್ತಿದ್ದಾರೆ ದೀಪಿಕಾ ಪಡುಕೋಣೆ-ಅಮಿತಾಬ್ ಬಚ್ಚನ್

  |

  ನಟ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಮತ್ತೆ ಒಂದಾಗುತ್ತಿದ್ದಾರೆ. ಆದರೆ ಈ ಬಾರಿ ಹಿರಿತೆರೆಯಲ್ಲ ಬದಲಿಗೆ ಕಿರುತೆರೆಯಲ್ಲಿ!

  ಅಮಿತಾಬ್ ಹಾಗೂ ದೀಪಿಕಾ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅದರಲ್ಲಿ 'ಪೀಕು' ಸಿನಿಮಾ ಬಹಳ ಜನಪ್ರಿಯ. ಅದರ ಹೊರತಾಗಿ 'ಆರಕ್ಷಣ್' ಸಿನಿಮಾವೂ ಹಿಟ್ ಆಗಿತ್ತು. ಇದೀಗ ಈ ಸೂಪರ್ ಹಿಟ್ ಸೆಲೆಬ್ರಿಟಿಗಳು ಕಿರುತೆರೆಯಲ್ಲಿ ಒಂದಾಗುತ್ತಿದ್ದಾರೆ.

  ಹಾಗೆಂದು ಇಬ್ಬರೂ ಸೇರಿ ಯಾವುದೋ ಧಾರಾವಾಹಿಯಲ್ಲಿಯೋ ಅಥವಾ ವೆಬ್ ಸರಣಿಯಲ್ಲಿಯೋ ನಟಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಈ ಇಬ್ಬರೂ ಒಂದಾಗುತ್ತಿರುವುದು ಶೋ ಒಂದರಲ್ಲಿ ಆದರೆ ಆ ಶೋ ಸಾಮಾನ್ಯವಾದ ರಿಯಾಲಿಟಿ ಶೋ ಅಲ್ಲ.

  ಅಮಿತಾಬ್ ಬಚ್ಚನ್ ನಡೆಸಿಕೊಡುವ ಟಿವಿ ರಂಗದಲ್ಲಿ ತನ್ನದೇ ಇತಿಹಾಸ ಹೊಂದಿರುವ 'ಕೌನ್ ಬನೇಗ ಕರೋಡ್‌ಪತಿ' ಶೋ ಮತ್ತೆ ಆರಂಭವಾಗಿದೆ. ಇದು ಈ ಶೋನ 13ನೇ ಸೀಸನ್ ಆಗಿದ್ದು ಈ ಶೋ ಅನ್ನು ಕೆಲವು ಬದಲಾವಣೆಗಳೊಂದಿಗೆ ಪ್ರೆಸೆಂಟ್‌ ಮಾಡಲಾಗುತ್ತಿದೆ. ಮೊದಲಿನಂತೆ ಈ ಶೋನಲ್ಲಿ ಸಾಮಾನ್ಯ ಸ್ಪರ್ಧಿಗಳ ಜೊತೆಗೆ ಅತಿಥಿ ಸ್ಪರ್ಧಿಗಳು ಸಹ ಪಲ್ಗೊಳ್ಳಲಿದ್ದು, ದೀಪಿಕಾ ಪಡುಕೋಣೆ ಈ ಶೋಗೆ ಅತಿಥಿ ಸ್ಪರ್ಧಿಯಾಗಿ ಆಗಮಿಸಲಿದ್ದಾರೆ.

  ಹೌದು, ಈ ಬಾರಿಯ ಶೋನಲ್ಲಿ 'ಶಾಂಧಾರ್ ಶುಕ್ರವಾರ್' ಹೆಸರಿನ ವಿಶೇಷ ಎಪಿಸೋಡ್ ಪ್ರತಿವಾರ ಇರಲಿದ್ದು, ಪ್ರತಿ ಶುಕ್ರವಾರ ವಿಶೇಷ ಅತಿಥಿಯೊಬ್ಬರು ಹಾಟ್‌ಸೀಟ್‌ನಲ್ಲಿ ಅಮಿತಾಬ್ ಬಚ್ಚನ್ ಎದುರು ಕುಳಿತು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಮುಂದಿನ ಶುಕ್ರವಾರ ದೀಪಿಕಾ ಪಡುಕೋಣೇ ಕೌನ್ ಬನೇಗ ಕರೋಡ್‌ಪತಿ ಶೋಗೆ ಆಗಮಿಸಲಿದ್ದಾರೆ. ದೀಪಿಕಾ ಪಡುಕೋಣೆ ಒಬ್ಬರೇ ಅತಿಥಿಯಾಗಿ ಬರುತ್ತಿದ್ದಾರಾ ಅಥವಾ ಅವರೊಟ್ಟಿಗೆ ರಣ್ವೀರ್ ಸಿಂಗ್ ಸಹ ಆಗಮಿಸುತ್ತಾರಾ ಕಾದು ನೋಡಬೇಕಿದೆ. ದೀಪಿಕಾ ಪಡುಕೋಣೆ ಈ ಕೌನ್ ಬನೇಗಾ ಕರೋಡ್‌ ಪತಿ ಶೋ ಗೆ ಆಗಮಿಸುತ್ತಿರುವುದು ಇದು ಮೊದಲೇನಲ್ಲಿ ಈ ಹಿಂದೆಯೂ ಇದೇ ಶೋಗೆ ಅತಿಥಿಯಾಗಿ ಅವರು ಆಗಮಿಸಿದ್ದರು.

  ದೀಪಿಕಾ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸಿರುವುದು ಎರಡು ಸಿನಿಮಾಗಳಲ್ಲಿ ಮಾತ್ರ. 'ಪೀಕು' ಮತ್ತು 'ಆರಕ್ಷಣ್'. ದೀಪಿಕಾ ನಟಿಸಿದ್ದ 'ಓಂ ಶಾಂತಿ ಓಂ', 'ಹ್ಯಾಪಿ ನ್ಯೂ ಇಯರ್' ಸಿನಿಮಾಗಳಲ್ಲಿ ಅಮಿತಾಬ್ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಬಾಂಬೆ ಟಾಕೀಸ್' ನಲ್ಲಿ ಇಬ್ಬರೂ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದರೆ, ದೀಪಿಕಾ ನಟಿಸಿದ್ದ ಕಾರ್ಟೂನ್ ಸಿನಿಮಾ 'ಕೊಚಾಡಿಯನ್'ಗೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಆದರೆ ಇದೀಗ ದೀಪಿಕಾ ಮತ್ತು ಅಮಿತಾಬ್ ಬಚ್ಚನ್ ಒಟ್ಟಿಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ನಾಯಕರಾಗಿರುವ ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ 2022 ರಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ.

  ಇನ್ನು ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ತುಸು ಸುದ್ದಿಯಲ್ಲಿದ್ದಾರೆ. ದೀಪಿಕಾ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇತ್ತೀಚಿಗಷ್ಟೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ದಂಪತಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇಬ್ಬರು ಆಸ್ಪತ್ರೆಯಿಂದ ಹೊರ ಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ದಿಪೀಕಾ ಗರ್ಭಿಣಿನಾ ಎನ್ನುವ ಅನುಮಾನ ಮೂಡಿಸಿತ್ತು. ಅನೇಕರು ಕಾಮೆಂಟ್ ಮಾಡಿ ದೀಪಿಕಾ ಗರ್ಭಿಣಿ ಆಗಿದ್ದಾರ ಎನ್ನುವ ಕಾಮೆಂಟ್ ಮಾಡಿದ್ದರು. ಆದರೆ ರಣ್ವೀರ್ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

  ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟಿ ದೀಪಿಕಾ ಪಡುಕೋಣೆ ಪ್ರಸ್ತುತ ಶಾರುಖ್ ಖಾನ್ ಜತೊಗೆ 'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ನಟಿಸಿರುವ '83' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಹೃತಿಕ್ ರೋಷನ್ ಜೊತೆಗೆ ನಟಿಸಿರುವ 'ಫೈಟರ್' ಸಹ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ 'ದಿ ಇಂಟರ್ನ್' ಸಿನಿಮಾದಲ್ಲಿಯೂ ದೀಪಿಕಾ ನಟಿಸುತ್ತಿದ್ದಾರೆ.

  English summary
  Deepika Padukone will participate in Kaun Kaun Banega Crorepati season 13 as guest with Amitabh Bachchan show will air on next Friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X