»   » ರೆಹಮಾನ್ ಗೆ ಯಾಕೆ ಹುಚ್ಚ ವೆಂಕಟ್ ಮೇಲೆ ಅಷ್ಟು ಕೋಪ?

ರೆಹಮಾನ್ ಗೆ ಯಾಕೆ ಹುಚ್ಚ ವೆಂಕಟ್ ಮೇಲೆ ಅಷ್ಟು ಕೋಪ?

Posted By:
Subscribe to Filmibeat Kannada

''ಇಡೀ ಮನೆಯಲ್ಲಿ ನಾಟಕ ಮಾಡದೆ 'ರಿಯಲ್' ಆಗಿರುವುದು ರೆಹಮಾನ್ ಮಾತ್ರ'' - ಹೀಗಂತ ಕಿಚ್ಚ ಸುದೀಪ್ ಮುಂದೆ ಕಥಕ್ ನೃತ್ಯಗಾರ್ತಿ ಕಮ್ ಮಾಡೆಲ್ ಜಯಶ್ರೀ ಹೇಳಿದ್ರು.

ರೆಹಮಾನ್ ನಾಟಕ ಮಾಡ್ತಿದ್ದಾರೋ ಇಲ್ವೋ, ಚರ್ಚೆ ಆಮೇಲೆ. ಮೊದಲೆರಡು ವಾರ ಸೈಲೆಂಟ್ ಆಗಿ ಎಲ್ಲರ ಜೊತೆ ಕೂಲ್ ಆಗಿದ್ದ ರೆಹಮಾನ್ ಮೂರನೇ ವಾರ ಸಿಕ್ಕಾಪಟ್ಟೆ ವೈಲೆಂಟ್ ಆಗ್ಬಿಟ್ಟರು.

'ಆಳು-ಅರಸ' ಟಾಸ್ಕ್ ನಲ್ಲಿ ಮೊದಲು ಗುಲಾಮರಾಗಿದ್ದ ರೆಹಮಾನ್, ಅರಸನ ದಬ್ಬಾಳಿಕೆ ಸಹಿಸದೆ ಬಂಡಾಯ ಏಳುವ ಮುನ್ಸೂಚನೆ ನೀಡಿದ್ರು. ನಂತರ ಅವರೇ ಅರಸನ ಪಟ್ಟಕ್ಕೆ ಏರಿದಾಗ ಹುಚ್ಚ ವೆಂಕಟ್ ಗೆ ಏರುಧ್ವನಿಯಲ್ಲಿ ಧಮ್ಕಿ ಹಾಕಿದ್ರು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಗಾಯಕ ರವಿ ಮುರೂರು ಗಲಾಟೆಯಲ್ಲೂ ಮೂಗು ತೂರಿಸಿ ಹುಚ್ಚ ವೆಂಕಟ್ ವಿರುದ್ಧ ರೆಹಮಾನ್ ತಿರುಗಿ ಬಿದ್ರು. ಇಡೀ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಮತ್ತು ರೆಹಮಾನ್ ಮಧ್ಯೆ ಆದ ಗಲಾಟೆ-ಗದ್ದಲ ಇದೀಗ ನಿಮ್ಮ ಮುಂದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಅರಸ ಹುಚ್ಚ ವೆಂಕಟ್ ಗೆ ರೆಹಮಾನ್ ಗುಲಾಮ.!

''ನೀವು ಗುಲಾಮರು ಸೇವೆ ಮಾಡ್ಬೇಕ್, ನಾನು ಹೇಳಿದ್ದನ್ನ ನೀವು ಕೇಳ್ಬೇಕ್, ನೀವೇನು ನನಗೆ ಸಲಹೆ ಕೊಡೋದು? ಕೋಪ ಬಂದರೆ ನಾನು ರಾಕ್ಷಸನೇ!'' ಅಂತ ಅಯ್ಯಪ್ಪ ಮತ್ತು ರೆಹಮಾನ್ ಮೇಲೆ ಹುಚ್ಚ ವೆಂಕಟ್ ದಬ್ಬಾಳಿಕೆ ನಡೆಸಿದರು. [ನನ್ಮಗಂದ್, ಸೇವಕ ಆಗಲ್ಲ ಅಂದ ವೆಂಕಟ್ ಗೆ ಫುಲ್ ಆವಾಜ್!]

ಎಲ್ಲದಕ್ಕೂ ಉಲ್ಟಾ ಉತ್ತರ.!

ಹುಚ್ಚ ವೆಂಕಟ್ ಕೇಳಿದ್ದಕ್ಕೆಲ್ಲಾ ರೆಹಮಾನ್ ತಿರುಗೇಟು ನೀಡಿದರು. ಚಪ್ಪಲಿ ಸೈಜ್ ಎಷ್ಟು ಅಂತ ಕೇಳಿದಾಗ, ಉತ್ತರ ಒಂದು ಅಂದ್ರು. ಮೋದಿ ಯಾರು ಅಂದ್ರೆ ಗೊತ್ತಿಲ್ಲ ಅಂದ್ರು. ಸಾಲದಕ್ಕೆ ಮಳೆಯಲ್ಲಿ ನೆನೆದು ಶಿಕ್ಷೆ ಅನುಭವಿಸಿದರು. [ನಾನು ಯಾವತ್ತಿದ್ರೂ ರಾಜನೇ, ಎಂದ ಹುಚ್ಚ ವೆಂಕಟ್!]

ಟಾಸ್ಕ್ ಮಾಡಲ್ಲ ಎಂದಿದ್ದ ರೆಹಮಾನ್.!

''ಗುಲಾಮನಾಗಿ ಟಾಸ್ಕ್ ಮಾಡುವುದಿಲ್ಲ. ನನ್ನಿಂದ ಎಲ್ಲರಿಗೂ ತೊಂದರೆ ಆಗುತ್ತೆ ಅನ್ನೋದಾದರೆ ನಾನು ಮುಂದುವರಿಸುತ್ತೇನೆ. ನನಗೆ ಮಾತ್ರ ಶಿಕ್ಷೆ ಆಗುತ್ತೆ ಅಂದ್ರೆ ನಾನು ಇಲ್ಲಿಗೆ ಟಾಸ್ಕ್ ನಿಲ್ಲಿಸುತ್ತೇನೆ'' ಅಂತ ಮಾಸ್ಟರ್ ಆನಂದ್ ಬಳಿ ರೆಹಮಾನ್ ಹೇಳಿಕೊಂಡಿದ್ದರು. [ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!]

ಅರಸನಾದ ರೆಹಮಾನ್.!

ಅರಸನ ಪಟ್ಟಕ್ಕೆ ಏರುತ್ತಿದ್ದಂತೆ ರೆಹಮಾನ್ ದರ್ಬಾರ್ ಶುರುವಾಯ್ತು. ಗುಲಾಮನಾಗಿ ಹುಚ್ಚ ವೆಂಕಟ್ ರನ್ನ ಚಂದನ್ ಖರೀದಿಸಿದರೂ ಗುಲಾಮನಾಗುವುದಕ್ಕೆ ಹುಚ್ಚ ವೆಂಕಟ್ ಒಪ್ಪಿಕೊಳ್ಳಲಿಲ್ಲ.! ಆಗಲೇ ರೆಹಮಾನ್ ಆರ್ಭಟ ಆರಂಭವಾಗಿದ್ದು.

ರೆಹಮಾನ್ ಆವಾಝ್

ಗುಲಾಮನಾಗಲು ಒಪ್ಪದ ವೆಂಕಟ್ ಗೆ ರೆಹಮಾನ್, ''ಟಾಸ್ಕ್ ಎಲ್ಲರಿಗೂ ಒಂದೇ, ನಾನು ಮಾಡಿದ್ದೀನಿ, ನೀನು ಮಾಡ್ಬೇಕ್, ನೀನು ಅಡುಗೆ ಮಾಡ್ಬೇಕ್, ಇಷ್ಟು ದಿನ ಮಾಡಿದ್ದನ್ನು ನೀನು ತಿಂದಿದ್ದಿಯಲ್ಲ ಈಗ ನೀನು ಮಾಡ್ಬೇಕ್, ಅರ್ಥ ಆಗುತ್ತಾ, ಕನ್ನಡ ಬರುತ್ತಾ'' ಅಂತ ರೆಹಮಾನ್ ಅವಾಜ್ ಹಾಕಿ ಹುಚ್ಚ ವೆಂಕಟ್ ಬೆವರಿಳಿಸಿದ್ರು.

ಗುರಾಯಿಸಿದ ಹುಚ್ಚ, ಕಣ್ಣು ಕಿತ್ತು ಹಾಕ್ತೀನಿ ಎಂದ ರೆಹಮಾನ್

''ನಾನು ಕಾಲಿನ ಹತ್ತಿರ ಕೂರಲ್ಲ, ಆಚೆ ನನ್ನನ್ನು ಜನ ನೋಡ್ತಿದ್ದಾರೆ, ನನ್ನ ಅಭಿಮಾನಿಗಳಿದ್ದಾರೆ, ನಾನು ಗುಲಾಮನಾಗಿ ಕೆಲಸ ಮಾಡಲ್ಲ'' ಅಂತ ಹುಚ್ಚ ವೆಂಕಟ್ ಹೇಳಿದಾಗ ರೆಹಮಾನ್, ''ಏಯ್...ವಾಯ್ಸ್ ಕೆಳಗೆ. ಶ್ರುತಿ ಅಕ್ಕನಿಗಿಂತ ದೊಡ್ಡ ಸ್ಟಾರಾ ನೀನು, ಯಾವ ಸೀಮೆ ಸ್ಟಾರ್ ನೀನು, ಗುರಾಯಿಸಬೇಡ, ಕಣ್ಣು ಕಿತ್ತಾಕ್ತೀನಿ ನೋಡು'' ಎಂದರು.

ಪದೆ ಪದೆ ಕೆರಳಿದ ರೆಹಮಾನ್

ಟಾಸ್ಕ್ ಮಾಡಲು ಯಾರು ಎಷ್ಟೇ ಕರೆದರೂ, ಬಾರದ ಹುಚ್ಚ ವೆಂಕಟ್ ಗೆ ರೆಹಮಾನ್ ಪದೇ ಪದೇ ಆವಾಝ್ ಹಾಕ್ತಿದ್ರು. ''ನೀವು ಮಾತಾಡೋದೆಲ್ಲಾ ಸುಳ್ಳು, ಎಲ್ಲಾ ಪೊಳ್ಳು, ನಿಮ್ಮ ಕೈಯಲ್ಲಿ ಏನೂ ಮಾಡೋಕ್ಕಾಗಲ್ಲ, ಕೇವಲ ಒಂದು ಟಾಸ್ಕ್ ಮಾಡಕ್ಕಾಗಿಲ್ಲ, ಇನ್ನು ನೀವೇನು ಮಾಡ್ತೀರಾ, ಭಾರಿ ಕೊಚ್ಚಿಕೊಳ್ತಾ ಇದ್ರಿ, ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ, ಈಗೇನು ಮಾಡಕ್ಕಾಗಲ್ವಾ'' ಅಂತ ರೆಹಮಾನ್ ಹುಚ್ಚ ವೆಂಕಟ್ ಅವರನ್ನ ಕೆರಳಿಸುತ್ತಿದ್ದರು.

ಟಾಸ್ಕ್ ಮಾಡೋದೇ ಇಲ್ಲ ಅಂತ ಕೂತ ಹುಚ್ಚ ವೆಂಕಟ್.!

''ರೆಹಮಾನ್ ತುಂಬಾ ಮಾತಾಡ್ತಾ ಇದ್ದಾನೆ. ನಾನು ಇನ್ನು ಮಾತಾಡಲ್ಲ, ನಾನಿನ್ನು ಟಾಸ್ಕ್ ಮಾಡೋದೇ ಇಲ್ಲ. ಜನರು ಅಥವಾ ನೀವು ನನ್ನನ್ನು ಡೈರೆಕ್ಟ್ ನಾಮಿನೇಟ್ ಮಾಡಿ. ನಾನಿನ್ನು ಇಲ್ಲಿ ಇರಲ್ಲ, ಟಾಸ್ಕ್ ಸಹ ಮಾಡಲ್ಲ, ಈ ವಾರವೇ ನನ್ನನ್ನು ಮನೆಯಿಂದ ಆಚೆ ಕಳಿಸಿ'' ಎಂದು ಬಿಗ್ ಬಾಸ್ ಗೆ ಕ್ಯಾಮರಾ ಮೂಲಕ ಹೇಳಿ ವೆಂಕಟ್ ಅವರು ಪಟ್ಟು ಹಿಡಿದು ಕುಳಿತರು.

'ಎಕ್ಕಡ' ಮಾತು ಬೇಕಿತ್ತಾ?

ಟಾಸ್ಕ್ ಮಾಡದ ತಪ್ಪಿಗೆ ಹುಚ್ಚ ವೆಂಕಟ್ ಗೆ 'ಬಿಗ್ ಬಾಸ್' ಶಿಕ್ಷೆ ವಿಧಿಸಿದರು. ಅವರ ತಂದೆಯ ಚಪ್ಪಲಿಯನ್ನ ತಲೆ ಮೇಲೆ ಹೊತ್ತು ಹುಚ್ಚ ವೆಂಕಟ್ ನಿಲ್ಲಬೇಕಿತ್ತು. ಈ ಸಂದರ್ಭದಲ್ಲೂ ಮಧ್ಯೆ ಮೂಗು ತೂರಿಸಿ ರೆಹಮಾನ್ ಹುಚ್ಚ ವೆಂಕಟ್ ರನ್ನ ಕೆಣಕಿದರು.

ರೆಹಮಾನ್-ಹುಚ್ಚ ವೆಂಕಟ್ ನಡುವೆ ಗಲಾಟೆ

''ನಿಮ್ಮ ತಂದೆಯ ಚಪ್ಪಲಿ ಯಾವ ಶೋ ರೂಮ್ ನಿಂದ ತಂದಿದ್ದು'' ಎಂದು ರೆಹಮಾನ್ ಪ್ರಶ್ನೆ ಹಾಕಿದರು. ಇದಕ್ಕೆ ರೊಚ್ಚಿಗೆದ್ದ ಹುಚ್ಚ ವೆಂಕಟ್, ಗರಂ ಆದರು. ''ಅಪ್ಪನ ವಿಷಯಕ್ಕೆ ಬಂದ್ರೆ, ಕೊಲೆ ಆಗ್ತೀಯಾ. ನೀನು ನನ್ನ ಅಪ್ಪನ ಬಗ್ಗೆ ಮಾತಾಡಬೇಡ, ನಿನಗೆ ಹಕ್ಕಿಲ್ಲ'' ಎಂದಾಗ ರೆಹಮಾನ್ ಮತ್ತೆ ಜೋರು ಧ್ವನಿಯಲ್ಲಿ ''ಏಯ್... ಶಬ್ದ ಮಾಡ್ಬೇಡ, ನನಗೆ ಎದುರು ಮಾತಾಡ್ತೀಯಾ'' ಅಂತ ಆವಾಜ್ ಹಾಕಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆಯೂ ದೊಡ್ಡ ಜಗಳ ಆಯ್ತು.

ನಡವಳಿಕೆ ತಪ್ಪು ಎಂದು ಒಪ್ಪಿಕೊಂಡ ರೆಹಮಾನ್

ರೆಹಮಾನ್ ನಡವಳಿಕೆ ಬಗ್ಗೆ ಸುದೀಪ್ ಪ್ರಶ್ನಿಸಿದಾಗ, ''ನಾನು ತುಂಬಾ ಸ್ಟ್ರಾಂಗ್ ಆಗಿ ರಿಯಾಕ್ಟ್ ಮಾಡ್ದೆ ಅಂತ ಅನಿಸ್ತು. ನಮ್ಮ ಮನೆಯಲ್ಲಿ ನಾವು ಆಳನ್ನ ಇಟ್ಟಿಲ್ಲ. ನಾನು ಆಳಾಗ್ಬೇಕು ಅಂದಾಗ ನನ್ನ ಘನತೆ, ಗೌರವಕ್ಕೆ ಧಕ್ಕೆ ಬರ್ತಾಯಿದೆ ಅಂತ ಪಿಂಚ್ ಆಯ್ತು. ಸಿಟ್ಟಿನಿಂದ ಮಾತಾಡ್ದೆ'' ಅಂತ ಸುದೀಪ್ ಮುಂದೆ ರೆಹಮಾನ್ ತಪ್ಪೊಪ್ಪಿಕೊಂಡರು.

ಮತ್ತೆ ಹುಚ್ಚ ವೆಂಕಟ್ ಜೊತೆ ಜಗಳ

ರವಿ ಮುರೂರು ಮೇಲೆ ಹಲ್ಲೆ ಮಾಡಿದ ನಂತರ ಮತ್ತೆ ಹುಚ್ಚ ವೆಂಕಟ್ ಜೊತೆ ರೆಹಮಾನ್ ಜಗಳಕ್ಕೆ ನಿಂತರು. ಏರುಧ್ವನಿಯಲ್ಲಿ ಬಾಯಿಗೆ ಬಂದ ಹಾಗೆ ಬೈದರು. ಹುಚ್ಚ ವೆಂಕಟ್ ಕೂಡ ವಾರ್ನಿಂಗ್ ಕೊಟ್ಟು ಹೊರನಡೆದರು.

English summary
Tv9 Kannada Anchor Rahman and YouTube Star Huccha Venkat had a clash in the 3rd week of Bigg Boss Kannada 3. Read the article for the detailed argument between Huccha Venkat and Rahman.
Please Wait while comments are loading...