»   » ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?

ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?

Posted By:
Subscribe to Filmibeat Kannada

ಇದುವರೆಗೂ ಹುಚ್ಚ ವೆಂಕಟ್ ಸುತ್ತ ಸುತ್ತುತ್ತಿದ್ದ 'ಬಿಗ್ ಬಾಸ್' ಮನೆಯ ವಿವಾದ ಇದೀಗ ಟಿವಿ9 ಆಂಕರ್ ರೆಹಮಾನ್ ಮತ್ತು ಗಗನಸಖಿ ನೇಹಾ ಗೌಡ ಸುತ್ತ ಗಿರಕಿ ಹೊಡೆಯುತ್ತಿದೆ.

ರೆಹಮಾನ್ ಮತ್ತು ನೇಹಾ ಗೌಡ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಗುಸು ಗುಸು ಶುರುವಾಗಿದೆ. 'ನೇಹಾ ಗೌಡ ನನ್ನ ತಂಗಿ ಇದ್ಹಾಗೆ' ಅಂತ ರೆಹಮಾನ್ ಸಾರಿ ಸಾರಿ ಹೇಳಿದ್ರೂ, ಮನೆ ಸದಸ್ಯರು ಮಾತ್ರ ಗಾಸಿಪ್ ಹಬ್ಬಿಸುತ್ತಿದ್ದಾರೆ.[ಟಿವಿ9 ರೆಹಮಾನ್ ಗೆ, ಕಿಚ್ಚ ಸುದೀಪ್ ಕೇಳಿದ್ದೇನು?]

'ಮನೆ ರಾಜಕೀಯ' ಟಾಸ್ಕ್ ನಲ್ಲಿ ಇದೇ ವಿಚಾರವಾಗಿ ದೊಡ್ಡ ರಾಮಾಯಣ ನಡೆಯಿತು. ಅಷ್ಟಕ್ಕೂ ರೆಹಮಾನ್ ಮತ್ತು ನೇಹಾ ಗೌಡ ಬಗ್ಗೆ ಸೃಷ್ಟಿಯಾಗಿರುವ ವಿವಾದವೇನು ಅಂತ ಫುಲ್ ಹಿಸ್ಟ್ರಿ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಸಮೀನಾ ಯಾರು ಎಂದಿದ್ದ ರೆಹಮಾನ್.!

'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಾಗಿನಿಂದಲೂ ರೆಹಮಾನ್, ನೇಹಾ ಗೌಡ ಮತ್ತು ಜಯಶ್ರೀ ಅತ್ಯಂತ ಆಪ್ತರು. ಎಲ್ಲರೂ ಒಟ್ಟಿಗೆ ಕೂತು ಮಾತನಾಡುತ್ತಿದ್ದಾಗ ರೆಹಮಾನ್ ಗೆ ನೇಹಾ, ''ಸಮೀನಾಗೆ ಹೇಳ್ಬೇಕಾ?'' ಅಂತ ಕೇಳಿದ್ದರು. ಅದಕ್ಕೆ ಉತ್ತರವಾಗಿ ರೆಹಮಾನ್, ''ಸಮೀನಾನಾ...ಯಾರದು?'' ಅಂತ ಕೇಳಿದ್ರು. ಸಮೀನಾ ರೆಹಮಾನ್ ಪತ್ನಿ ಅನ್ನೋದು ನಿಮಗೆ ಗೊತ್ತಿರಲಿ.['ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!]

ಸ್ಪಷ್ಟನೆ ಕೇಳಿದ ಸುದೀಪ್.!

ಇದೇ ಟಾಪಿಕ್ ಇಟ್ಕೊಂಡು ಕಿಚ್ಚ ಸುದೀಪ್ ಕೂಡ ಮಾತಿಗಿಳಿದರು. ''ನಿಮಗೆ ಗೊತ್ತಿಲ್ಲದ ಸಮೀನಾ ಇಲ್ಲಿ ಬಂದು ನಿಮ್ಮೆದುರು ನಿಂತು, ನಿಮ್ಮನ್ನು ನೋಡಿ ಕಣ್ಣೀರು ಹಾಕಿದರೆ ನೀವೇನು ಮಾಡುತ್ತೀರಾ'' ಅಂತ ರೆಹಮಾನ್ ನ ಸುದೀಪ್ ಕೇಳಿದ್ರು.['ಬಿಗ್ ಬಾಸ್' ಮನೆಯಲ್ಲಿ ರಾಜಕೀಯ ದೊಂಬರಾಟ]

ರೆಹಮಾನ್ ಕೊಟ್ಟ ಉತ್ತರ.!

''ಸಮೀನಾ ಅವರಿಗೆ ನನ್ನ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿದೆ. ನಾನು ಇಲ್ಲಿ ಈ ಮನೆ ಒಳಗೆ ಬರೋಕೆ ಮುಂಚೇನೇ ಸಮೀನಾ ಅವರಿಗೆ ಹೇಳಿ ಬಂದಿದ್ದೇನೆ. ಇಲ್ಲಿ ಅಂತದ್ದೇನು ನಡೆಯುವುದಿಲ್ಲ, ನೀವೇನು ಯೋಚನೆ ಮಾಡಬೇಡಿ ಅಂತ'' ಅಂತ ರೆಹಮಾನ್ ಸಮಜಾಯಿಷಿ ನೀಡಿದ್ರು.[ಬಿಗ್ ಮನೆಯ ವಾತಾವರಣವನ್ನು ರಾಡಿ ಎಬ್ಬಿಸಿದ, ಬಿಗ್ ಪಾಲಿಟಿಕ್ಸ್]

ನೇಹಾ ಗೌಡ ಕಾಲೆಳೆದ ಸುದೀಪ್

ನೇಹಾ ಗೌಡ ಅವರು ರೆಹಮಾನ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಬಾಯಿ ಹಾಕಿ ಸಮಜಾಯಿಷಿ ನೀಡಲು ಪ್ರಯತ್ನಿಸಿದಾಗ ಕಿಚ್ಚ ಸುದೀಪ್ ಅವರು ''ನೇಹಾ ಅವರೇ ನಾನು ರೆಹಮಾನ್ ಅವರ ಜೊತೆ ಮಾತನಾಡುತ್ತಿದ್ದೇನೆ'' ಅಂತ ಹೇಳಿ ನೇಹಾ ಅವರ ಬಾಯಿ ಮುಚ್ಚಿಸಿದ್ರು.

ನೇಹಾಗೆ 'ಪ್ರಾಮಾಣಿಕ' ಪಟ್ಟ ನೀಡಿದ್ದ ರೆಹಮಾನ್

ನೇಹಾ ಗೌಡಗೆ 'ಪ್ರಾಮಾಣಿಕ' ಪಟ್ಟ ಮತ್ತು ಅದಕ್ಕೆ ರೆಹಮಾನ್ ಕೊಟ್ಟ ಕಾರಣ 'ಬಿಗ್ ಬಾಸ್' ಮನೆಯಲ್ಲಿ ಎಲ್ಲರ ಅಸಮಾಧಾನಕ್ಕೆ ಕಾರಣವಾಯ್ತು.

ಪೂಜಾ ಗಾಂಧಿ ಗಾಸಿಪ್

''ಸುದೀಪ್ ರಿಂದ ಈಗಾಗಲೇ ಈ ಟಾಪಿಕ್ ಬಂದಿದೆ. ಮುಂದೆ ಇದರ ಬಗ್ಗೆ ಚರ್ಚೆ ಆಗಬಾರದು. ರೆಹಮಾನ್ ಗೆ ಹೊರಗಡೆ ಒಂದು ಫ್ಯಾಮಿಲಿ ಇದೆ. ಸಿಂಗಲ್ ಇರೋರ ಜೊತೆ ಕ್ಲೋಸ್ ಆಗಿರಲಿ. ಅವರನ್ನ ಯಾರೂ ಕೇಳಲ್ಲ. ಆದ್ರೆ, ರೆಹಮಾನ್ ಜೊತೆ ಯಾಕೆ. ತಲೆ ಸವರುತ್ತಾರೆ. ತೊಡೆ ಮೇಲೆ ಮಲಗಿಸಿಕೊಳ್ಳುತ್ತಾರೆ. ಅಣ್ಣ-ತಂಗಿ ಅಂತ ನಮಗೆ ಫೀಲ್ ಆಗ್ತಿಲ್ಲ. ಲವರ್ಸ್ ತರಹ ಆಡ್ತಾರೆ'' ಅಂತ ನಟಿ ಪೂಜಾ ಗಾಂಧಿ ಶ್ರುತಿ ಬಳಿ ಹೇಳ್ತಿದ್ರು.

ನಟಿ ಶ್ರುತಿಗೂ ಇರುಸು-ಮುರುಸು

''ಕೆಲವೊಂದನ್ನ ನೋಡಿದಾಗ ನನಗೂ ಬೇಜಾರ್ ಆಯ್ತು. ಏನಪ್ಪಾ ನಾನು ಎಲ್ಲಿದ್ದೀನಿ ಅಂತ. ದೊಡ್ಡವಳಾಗಿ ನಾನು ಕೇಳ್ಬಹುದು. ಆದ್ರೆ, ಅವರು ನಾನು ನನ್ನ ತಂಗಿಯನ್ನ ನೋಡಿಕೊಳ್ಳುವುದೇ ಹೀಗೆ ಅಂದುಬಿಟ್ಟರೆ ಏನ್ ಮಾಡಲಿ'' ಅಂತ ನಟಿ ಶ್ರುತಿ, ಭಾವನಾ ಬೆಳಗೆರೆ ಮತ್ತು ಪೂಜಾ ಗಾಂಧಿ ಬಳಿ ಹೇಳಿಕೊಂಡ್ರು.

ಆನಂದ್ ಗೂ ಬೇಜಾರು?

ನಟಿ ಶ್ರುತಿಗೆ ಪೂಜಾ ಗಾಂಧಿ ಹೇಳಿದ ಪ್ರಕಾರ, ರೆಹಮಾನ್ ಮತ್ತು ನೇಹಾ ಗೌಡ ವಿಚಾರಕ್ಕೆ ಮಾಸ್ಟರ್ ಆನಂದ್ ಗೂ ಬೇಸರವಾಗಿದೆ.

ಮನೆ ರಾಜಕೀಯದಲ್ಲಿ ಕೆಸರೆರೆಚಾಟ

'ಮನೆ ರಾಜಕೀಯ' ಟಾಸ್ಕ್ ನಲ್ಲಿ ಆರೋಪ ಪ್ರತ್ಯಾರೋಪ ಮಾಡುವ ಸಂದರ್ಭದಲ್ಲಿ ಆನಂದ್ ಹೆಣ್ಮಕ್ಕಳನ್ನ ಹೊರಗೆ ಬಿಟ್ಟು ಒಳಗಡೆ ಮಲಗಿದ್ದರು ಅಂತ ರೆಹಮಾನ್ ವೈಯುಕ್ತಿಕ ಆರೋಪ ಮಾಡಿದಾಗ, ''ನಾನು ಯಾರಿಗೂ ಲಾಲಿ ಹಾಡಿಸಿಕೊಂಡು ತೊಡೆ ಮೇಲೆ ಮಲಗಿಸಿಕೊಂಡಿರ್ಲಿಲ್ಲ'' ಅಂತ ರೆಹಮಾನ್ ಗೆ ಟಾಂಗ್ ನೀಡಿದ್ರು.

ಅಣ್ಣ-ತಂಗಿ ಅಂತ ಪ್ರೂವ್ ಮಾಡ್ಬೇಕಾ?

''ನಾವಿಬ್ಬರು ಅಣ್ಣ-ತಂಗಿ ಅಂತ ಪ್ರೂವ್ ಮಾಡ್ಬೇಕಾ.? ಪ್ರೂವ್ ಮಾಡ್ಬೇಕು ಅಂತಿದ್ರೆ ಅದನ್ನೂ ಮಾಡ್ತೀವಿ'' ಅಂತ ರೆಹಮಾನ್ ಬೇಸರ ವ್ಯಕ್ತಪಡಿಸಿದ್ರು.

ಬಿಕ್ಕಿ ಬಿಕ್ಕಿ ಅತ್ತ ನೇಹಾ

''ನನಗೂ ಜೀವನ ಇದೆ. ಮನೆಯಲ್ಲಿ ಗಂಡು ನೋಡ್ತಿದ್ದಾರೆ. ನಾನು ಶೋ ಇಂದ ಹೊರಗೆ ಹೋಗುತ್ತೇನೆ. ಈ ತರ ಅಪವಾದ ಹೊತ್ತರೆ ನನ್ನ ಅಣ್ಣ ನನ್ನ ಸಾಯಿಸಿಬಿಡುತ್ತಾನೆ'' ಅಂತ ತಲೆ ಚಚ್ಚಿಕೊಂಡು ನೇಹಾ ಗೌಡ ಬಿಕ್ಕಿ ಬಿಕ್ಕಿ ಅತ್ತರು.

ಈಚಲ ಮರದ ಕಥೆ

''ನೀವಿಬ್ಬರು ಕರೆಕ್ಟಾಗಿ ಇರಬಹುದು. ಆದರೆ ನೋಡುವವರ ಕಣ್ಣಿಗೆ ಸರಿಯಾಗಿ ಕಾಣುತ್ತಿಲ್ಲ. ನೀವು ಈಚಲ ಮರದ ಕೆಳಗೆ ಕೂತ್ಕೊಂಡು ಕುಡಿಯಲ್ಲ ಅಂದ್ರೆ ಜನ ನಂಬಲ್ಲ. ಸಾರಾಯಿ ಕುಡಿದಿದ್ದೀರಾ ಅಂತಲೇ ಅನ್ನೋದು'' ಅಂತ ಮಾಸ್ಟರ್ ಆನಂದ್ ನೇಹಾ ಗೌಡಗೆ ಹೇಳ್ತಿದ್ರು.

ಭಾವನಾ ಹೇಳಿದ್ದೂ ಅದೇ.!

''ಅಷ್ಟು ಕ್ಯಾಮರಾಗಳು ಇದ್ದು ಇಲ್ಲೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯ ಇದ್ದರೆ, ಇನ್ನೂ ಹೊರಗಡೆ ಹೇಗಿರಬೇಡ. ಅದನ್ನೇ ನಿಮಗೆ ಹೇಳುತ್ತಿರುವುದು ರೆಹಮಾನ್'' ಅಂತ ಭಾವನಾ ಬೆಳಗೆರೆ ಹೇಳಿದ್ರು.

ಪಂಚಾಯತಿ ಮಾಡದ ಸುದೀಪ್

ರೆಹಮಾನ್ ಮತ್ತು ನೇಹಾ ಗೌಡ ಕುರಿತು ಸುದೀಪ್ ಹೆಚ್ಚು ಮಾತನಾಡಲಿಲ್ಲ. ಪಂಚಾಯತಿ ನಡೆಸಿ ಭಿನ್ನಾಭಿಪ್ರಾಯ ಶಮನಕ್ಕೂ ಮುಂದಾಗಲಿಲ್ಲ. ''ಸಿಸ್ಟರ್ ನೇಹಾ ಹೇಗಿದ್ದೀರಾ'' ಅಂತ ಮಾತು ಶುರುಮಾಡಿದ ಸುದೀಪ್, ''ಅವರವರ ಜೀವನ ಅವರವರೇ ನೋಡಿಕೊಳ್ಳಲಿ ಬಿಡಿ'' ಅಂತ ಎಲ್ಲರಿಗೂ ಹೇಳಿ ಸುಮ್ಮನಾದರು.

English summary
Here is the detailed report on Gossip surrounding Tv9 Kannada Anchor Rahman and Neha Gowda in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada