For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಮತ್ತೊಂದು ಡಬ್ಬಿಂಗ್ ಸಿನಿಮಾ

  |

  ಡಬ್ಬಿಂಗ್ ಸಿನಿಮಾಗಳು ಇತ್ತೀಚಿಗೆ ಕನ್ನಡದಲ್ಲಿ ದೊಡ್ಡ ಮಟ್ಟಕ್ಕೆ ತೆರೆಗೆ ಬರುತ್ತಿವೆ. ಸೈರಾ ನರಸಿಂಹ ರೆಡ್ಡಿ, ದಬಾಂಗ್-3, ಡಿಯರ್ ಕಾಮ್ರೇಡ್ ಸೇರಿದಂತೆ ಸಾಕಷ್ಟು ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಅದ್ದೂರಿಯಾಗಿ ರಿಲೀಸ್ ಆಗುತ್ತಿವೆ. ಡಬ್ಬಿಂಗ್ ಸಿನಿಮಾಗಳು ಚಿತ್ರಮಂದಿರದಲ್ಲಿ ಮಾತ್ರವಲ್ಲದೆ ಈಗ ಟಿವಿಯಲ್ಲೂ ರಾರಾಜಿಸುತ್ತಿದೆ.

  ಇತ್ತೀಚಿಗಷ್ಟೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಉತ್ತಮ ರೇಟಿಂಗ್ ಕೂಡ ಪಡೆದುಕೊಂಡಿತ್ತು. ಸೈರಾ ಸಿನಿಮಾ ಯಶಸ್ಸಿನ ಬೆನ್ನಲ್ಲೆ ಈಗ ಮತ್ತೊಂದು ಡಬ್ಬಿಂಗ್ ಸಿನಿಮಾ ಪ್ರಸಾರವಾಗುತ್ತಿದೆ. ತಮಿಳಿನ ಖ್ಯಾತ ನಟ ಧನುಷ್ ಅಭಿನಯದ ಪಟ್ಟಾಸ್ ಸಿನಿಮಾ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

  ರಜನಿಕಾಂತ್ ಸ್ಟೈಲ್ ಫಾಲೋ ಮಾಡಿದ ಧನುಶ್ ರಜನಿಕಾಂತ್ ಸ್ಟೈಲ್ ಫಾಲೋ ಮಾಡಿದ ಧನುಶ್

  ಉದಯ ಟಿವಿಯಲ್ಲಿ ಪಟ್ಟಾಸ್ ಕನ್ನಡ ವರ್ಷನ್ ಪ್ರಸಾರವಾಗಲಿದೆಯಂತೆ. ಪಟ್ಟಾಸ್ ಕನ್ನಡ ಡಬ್ ವರ್ಷನ್ ನ ಸ್ಯಾಟಲೈಟ್ ರೈಟ್ಸ್ ಅನ್ನು ಉದಯ ಟಿವಿ ಖರೀದಿ ಮಾಡಿದೆ. ಹಾಗಾಗಿ ಸಿನಿಮಾ ಶೀಘ್ರದಲ್ಲೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಅಂದ್ಹಾಗೆ ಪಟ್ಟಾಸ್ ಆರ್.ಎಸ್.ದುರೈ ಸೆಂಥಿಲ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ.

  ಈಗಾಗಲೆ ನಿರೀಕ್ಷೆ ಮೂಡಿಸಿರುವ ಪಟ್ಟಾಸ್ ಇದೆ ತಿಂಗಳು 16ಕ್ಕೆ ತೆರೆಗೆ ಬರುತ್ತಿದೆ. ರಿಲೀಸ್ ಗೂ ಮೊದಲೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಟಿವಿಯಲ್ಲಿಯೂ ಸಹ ಡಬ್ಬಿಂಗ್ ಸಿನಿಮಾಗಳ ಹವಾ ಜೋರಾಗುತ್ತಿದೆ. ಕನ್ನಡ ಪ್ರೇಕ್ಷಕರು ಮನೆಯಲ್ಲಿಯೆ ಕುಳಿತು ಪರಭಾಷೆ ಸಿನಿಮಾಗಳನ್ನು ಕನ್ನಡದಲ್ಲಿಯೆ ನೋಡಬಹುದು.

  Read more about: dhanush ಧನುಷ್
  English summary
  Tamil Famous Actor Dhanush starrer Pattas film Kannada varsion will be telecast on Kannada small screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X