»   » 'ಸರಿಗಮಪ' ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ

'ಸರಿಗಮಪ' ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ

Posted By:
Subscribe to Filmibeat Kannada
'ಸರಿಗಮಪ' ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ | Filmibeat Kannada

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಸರಿಗಮಪ ಲಿಟ್ಸ್ ಚಾಂಪ್ಸ್' ಮತ್ತೊಂದು ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ. ನಾದಬ್ರಹ್ಮ ಹಂಸಲೇಖ, ಎಸ್.ಪಿ ಬಾಲಸುಬ್ರಮಣ್ಯಂ, ಎಸ್.ಜಾನಕಿ ಅಂತಹ ದಿಗ್ಗಜ ಕಲಾವಿದರ ಸಮ್ಮುಖದಲ್ಲಿ ಸಂಗೀತ ರಸಮಂಜರಿ ನೀಡುತ್ತಿದ್ದ 'ಸರಿಗಮಪ' ಈಗ ಮತ್ತೊಬ್ಬ ದಿಗ್ಗಜ ವ್ಯಕ್ತಿಯನ್ನ ಅತಿಥಿಯಾಗಿ ಆಹ್ವಾನಿಸಿದೆ.

ಹೌದು, ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಸರಿಗಮಪ ಲಿಟ್ಲ್ ಚಾಂಪ್ಸ್ 14ನೇ ಸೀಸನ್ ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ಮುಗಿದಿದ್ದು, ಮುಂದಿನ ಶನಿವಾರ ಹಾಗೂ ಭಾನುವಾರ ವಿರೇಂದ್ರ ಹೆಗ್ಗಡೆ ಅವರು ಭಾಗವಹಿಸಿರುವ ಎಪಿಸೋಡ್ ಟಿವಿಯಲ್ಲಿ ಪ್ರಸಾರವಾಗಲಿದೆ.

dharmasthala dharmadhikari Veerendra Heggade in sarigamapa

ವಿಶೇಷವಾಗಿ ಆ ಎರಡೂ ಎಪಿಸೋಡ್ ಗಳನ್ನು ವಿರೇಂದ್ರ ಹೆಗ್ಗಡೆ ಅವರಿಗೆ ಸಮರ್ಪಿಸಲಾಗಿದೆ. ಈ ಎಪಿಸೋಡ್ ಸಂಪೂರ್ಣವಾಗಿ ಭಕ್ತಿಗೀತೆಗೆ ಮೀಸಲಾಗಿದ್ದು, ಈ ವಾರ ಸ್ಪರ್ಧಿಗಳೆಲ್ಲ ಭಕ್ತಿಸಾಗರದಲ್ಲಿ ಮುಳುಗಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್‌ ಪ್ರಕಾಶ್‌, ಅರ್ಜುನ್ ಜನ್ಯ ಮುಖ್ಯ ತೀರ್ಪುಗಾರರಾಗಿದ್ದಾರೆ. ಅನುಶ್ರೀ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

English summary
Zee kannada popular music reality show SAREGAMAPA LIL CHAMPS SEASON 14 Witness an extraordinary devotional episode shoot with the honourable Dharmasthala dharmadhikari Dr. Veerendra Heggade.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X