Just In
Don't Miss!
- News
ನಡ್ಡಾ ಯಾರು? ಅವರೇನು ನನ್ನ ಪ್ರೊಫೆಸರಾ?: ರಾಹುಲ್ ಗಾಂಧಿ ಪ್ರಶ್ನೆ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Sports
ಸಯ್ಯದ್ ಮುಷ್ತಾಕ್ ಅಲಿ ಟಿ20: ಕ್ವಾರ್ಟರ್ ಫೈನಲ್ಗೇರಿದ ಕರ್ನಾಟಕ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಡಿಯೋ: ಬಿಗ್‌ಬಾಸ್ ಮನೆಯಲ್ಲಿ ಮೊಬೈಲ್ ಫೋನ್ ಬಳಸಿದ ಸ್ಪರ್ಧಿ!
ಬಿಗ್‌ಬಾಸ್ ಮನೆಯ ನಿಯಮಗಳು ಬಹುತೇಕರಿಗೆ ಗೊತ್ತೇ ಇರುತ್ತದೆ. ಬಿಗ್‌ಬಾಸ್ ಮನೆಯ ಒಳಕ್ಕೆ ಹೋಗಬೇಕಾದರೆ ಬಟ್ಟೆಗಳು-ಔಷಧ ಬಿಟ್ಟರೆ ಬೇರೇನೂ ಒಯ್ಯುವಂತಿಲ್ಲ. ಹೊರಗಿನವರ ಜೊತೆ ಸಂಪರ್ಕಕ್ಕಂತೂ ಅವಕಾಶವೇ ಇಲ್ಲ.
ಒಮ್ಮೆ ಬಿಗ್‌ಬಾಸ್ ಸ್ಪರ್ಧಿಗಳು ಮನೆಯ ಒಳಕ್ಕೆ ಪ್ರವೇಶಿಸಿದರೆಂದರೆ ಹೊರಗಿನ ಜಗತ್ತಿನ ಜೊತೆ ಸಂಪರ್ಕ ಕಡಿದುಕೊಂಡರೆಂದೇ ಅರ್ಥ. ಆದರೆ ತಮಿಳಿನ ಬಿಗ್‌ಬಾಸ್ ನಲ್ಲಿ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಯೊಬ್ಬ ಮೊಬೈಲ್ ಫೋನ್ ಬಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಹೌದು, ಕಮಲ್ ಹಾಸನ್ ನಿರೂಪಿಸುತ್ತಿರುವ ತಮಿಳು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯೊಬ್ಬ ಮನೆಯ ಒಳಗೆ ಇದ್ದು, ಮೊಬೈಲ್ ಫೋನ್ ಬಳಸುತ್ತಿದ್ದಾನೆ ಎನ್ನಲಾಗುತ್ತಿರುವ ವಿಡಿಯೋ ಒಂದು ಸಹ ಹರಿದಾಡುತ್ತಿದ್ದು, ವಿಡಿಯೋ ನೋಡಿದವರೆಲ್ಲಾ ಸ್ಪರ್ಧಿ ಮೊಬೈಲ್ ಬಳಸುತ್ತಿದ್ದಾನೆ ಎಂದೇ ಹೇಳುತ್ತಿದ್ದಾರೆ.

ಬಿಗ್‌ಬಾಸ್ ಮನೆ ಒಳಗೆ ಮೊಬೈಲ್?
ತಮಿಳು ಬಿಗ್‌ಬಾಸ್ ಸ್ಪರ್ಧಿ ಸೋಮಶೇಖರ್, ಬಿಗ್‌ಬಾಸ್ ಮನೆಯ ಒಳಗೆ ಮೊಬೈಲ್ ಬಳಸುತ್ತಿದ್ದಾನೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
|
ಮೊಬೈಲ್ ಸ್ಕ್ರೀನ್ ಸ್ಕ್ರೋಲ್ ಮಾಡಿದರೇ ಸೋಮ್?
ವಾರಾಂತ್ಯದ ಎಪಿಸೋಡ್‌ನಲ್ಲಿ ಕಮಲ್ ಹಾಸನ್ ಬಂದು ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಿದ್ದರು. ಕಮಲ್ ಹಾಸನ್ ಮತ್ತೊಬ್ಬ ಸ್ಪರ್ಧಿ ಅನಿತಾ ಜೊತೆ ಮಾತನಾಡುತ್ತಿದ್ದಾಗ ಅಲ್ಲೇ ಲಿವಿಂಗ್ ಏರಿಯಾದಲ್ಲಿ ಕೂತಿದ್ದ ಸೋಮ್, ಯಾರಿಗೂ ಕಾಣದಂತೆ ಬೆರಳಲ್ಲಿ ಏನೋ ಮಾಡುತ್ತಿದ್ದರು. ಅವರ ಬೆರಳ ಚಲನೆ ಮೊಬೈಲ್ ಸ್ಕ್ರೀನ್ ಅನ್ನು ಸ್ಕೋಲ್ ಮಾಡುತ್ತಿರುವಂತೆಯೇ ಕಾಣುತ್ತಿದೆ.

ಶರ್ಟ್ ಗೆ ಅಂಟಿದ ಕೊಳೆ ಸ್ವಚ್ಚಗೊಳಿಸಿದರೆ ಸೋಮ್?
ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಾದ ಮಾಡುತ್ತಿರುವಂತೆ, ಸೋಮ್ ತಮ್ಮ ಶರ್ಟ್ ಅಂಟಿದ ಕೊಳೆಯನ್ನು ಕ್ಲೀನ್ ಮಾಡಿಕೊಳ್ಳುತ್ತಿದ್ದರು ಅದು ಮೊಬೈಲ್ ಸ್ಕ್ರೀನ್ ಸ್ಕ್ರೋಲ್ ಮಾಡಿದಂತೆ ಕಾಣುತ್ತಿದೆ ಎಂದು ವಾದಿಸುತ್ತಿದ್ದಾರೆ.

ಟಿವಿ ರಿಮೋಟ್ ಬಳಸುತ್ತಿದ್ದರೆ ಸೋಮಶೇಖರ್
ಇನ್ನು ಕೆಲವರು ಬೇರೆಯದೇ ವಾದ ಮುಂದಿಟ್ಟಿದ್ದಾರೆ. ಲಿವಿಂಗ್ ಏರಿಯಾದಲ್ಲಿರುವ ಟಿವಿಗೆ ಕೊಟ್ಟಿದ್ದ ರಿಮೋಟ್‌ನಲ್ಲಿ ಧ್ವನಿ ಯ ಏರಿಳಿತವನ್ನು ಸೋಮ್ ಮಾಡುತ್ತಿದ್ದರು, ಅದು ಮೊಬೈಲ್ ಸ್ಕ್ರೀನ್ ಅನ್ನು ಸ್ಕ್ರೋಲ್ ಮಾಡಿದಂತೆ ಕಂಡಿರಬಹುದು ಎಂದು ಹೇಳಲಾಗುತ್ತಿದೆ.