For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ವೇದಿಕೆಯಲ್ಲಿ ದಿಗಂತ್-ಐಂದ್ರಿತಾ 'ಶಾರ್ಪ್ ಶೂಟರ್'

  By Harshitha
  |

  ಕನ್ನಡ ಚಿತ್ರರಂಗದ ಹಿಟ್ ಜೋಡಿ ದಿಗಂತ್ ಮತ್ತು ಐಂದ್ರಿತಾ ರೇ ಒಟ್ಟಾಗಿ ಕಾಣಿಸಿಕೊಂಡು ವರ್ಷಗಳೇ ಉರುಳಿತ್ತು. 'ಮನಸಾರೆ', 'ಪಾರಿಜಾತ' ಚಿತ್ರಗಳ ನಂತ್ರ ಲಾಂಗ್ ಗ್ಯಾಪ್ ಬಳಿಕ 'ಶಾರ್ಪ್ ಶೂಟರ್' ಚಿತ್ರದ ಮೂಲಕ ಈ ಜೋಡಿ ಒಂದಾಗಿದೆ.

  ಹಾಗಂದ ಮಾತ್ರಕ್ಕೆ 'ಶಾರ್ಪ್ ಶೂಟರ್' ಚಿತ್ರದಲ್ಲಿ ದಿಗಂತ್ ಗೆ ಐಂದ್ರಿತಾ ರೇ ನಾಯಕಿ ಅಂತಲ್ಲ. ಒಂದು ಸ್ಪೆಷಲ್ ಸಾಂಗ್ ಗೆ ಮಾತ್ರ ಐಂದ್ರಿತಾ ರೇ ಹೆಜ್ಜೆ ಹಾಕಿದ್ದಾರೆ. 'ಶಾರ್ಪ್ ಶೂಟರ್' ಚಿತ್ರದಲ್ಲಿ ಬರೀ ಐಟಂ ಸಾಂಗ್ ಗೆ ಮಾತ್ರ ಸೀಮಿತವಾಗಿರುವ ಐಂದ್ರಿತಾ ರೇ ಪಾತ್ರದ ಬಗ್ಗೆ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಬಹುದು. [ಗನ್ನು ಹಿಡಿದು ರಾಂಗ್ ಆದ ದಿಗಂತ್ 'ಶಾರ್ಪ್ ಶೂಟರ್']

  ಆದ್ರೇನಂತೆ, 'ಶಾರ್ಪ್ ಶೂಟರ್'ಗೆ ಮೇನ್ ಅಟ್ರ್ಯಾಕ್ಷನ್ ಆಗಿರುವ ಈ ಜೋಡಿ 'ಬಿಗ್ ಬಾಸ್-3' ವೇದಿಕೆಯಲ್ಲಿ ತಮ್ಮ ಚಿತ್ರಕ್ಕೆ ಪ್ರಚಾರ ನೀಡಿದರು. 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ 10 ವೆರೈಟಿಯಲ್ಲಿ ಐಂದ್ರಿತಾ ರೇಗೆ 'ಐ ಲೈಕ್ ಯು' ಹೇಳುವಂತೆ ದಿಗಂತ್ ಕಾಲೆಳೆದರು ಸುದೀಪ್. [ದಿಗಂತ್ ಜೊತೆ ಐಂದ್ರಿತಾ ಕಬಡ್ಡಿ ಆಟ ನೋಡಿ]

  'ಶಾರ್ಪ್ ಶೂಟರ್' ಚಿತ್ರಕ್ಕೆ ಗಾನ ಸುಧೆ ಹರಿಸಿರುವ ಚಿಕ್ಕಣ್ಣ ಕೂಡ ಪಾಲ್ಗೊಂಡು 'ಬಿಗ್ ಬಾಸ್' ವೇದಿಕೆಯಲ್ಲಿ ಹಾಸ್ಯದ ಹೊನಲನ್ನ ಹರಿಸಿದರು.

  ''ನಮ್ಮಿಬ್ಬರದ್ದು ಹಿಟ್ ಕಾಂಬಿನೇಷನ್. ಹೀಗಾಗಿ ಕುಂಟೆಬಿಲ್ಲೆ ಹಾಡಿಗೆ ನನ್ನ ಅಪ್ರೋಚ್ ಮಾಡಿದಾಗ ನಾನು ಒಪ್ಪಿಕೊಂಡೆ'' ಅಂತಾರೆ ನಟಿ ಐಂದ್ರಿತಾ ರೇ.

  ಇದೇ ತಿಂಗಳು 'ಶಾರ್ಪ್ ಶೂಟರ್' ಸಿನಿಮಾ ಬಿಡುಗಡೆ ಆಗುತ್ತಿದೆ. ಗೌಸ್ ಪೀರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಸಂಗೀತ ಮುಂತಾದವರು ಇದ್ದಾರೆ.

  English summary
  Kannada Actor Diganth and Kannada Actress Aindrita Ray starrer 'Sharp Shooter' is all set to release this month. 'Sharp Shooter' team took 'Bigg Boss Kannada 3' stage to promote their movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X