»   » ದಿಗಂತ್ ಜೊತೆಗಿನ ಸಂಬಂಧದ ಬಗ್ಗೆ ಐಂದ್ರಿತಾ ನಿಜ ಹೇಳಿದ್ರೋ.? ಸುಳ್ಳು ಹೇಳಿದ್ರೋ.?

ದಿಗಂತ್ ಜೊತೆಗಿನ ಸಂಬಂಧದ ಬಗ್ಗೆ ಐಂದ್ರಿತಾ ನಿಜ ಹೇಳಿದ್ರೋ.? ಸುಳ್ಳು ಹೇಳಿದ್ರೋ.?

Posted By:
Subscribe to Filmibeat Kannada

ದೂದ್ ಪೇಡಾ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಗಾಸಿಪ್ ಇಂದು ನಿನ್ನೆಯದ್ದಲ್ಲ. ಹಾಗ್ನೋಡಿದ್ರೆ, ಇಬ್ಬರೂ ಸದ್ಯದಲ್ಲಿಯೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಆಗಾಗ ಗಾಂಧಿನಗರದಲ್ಲಿ ಕೇಳಿ ಬರುತ್ತಲೇ ಇರುತ್ತದೆ.

ಆದರೆ, ತಮ್ಮ ನಡುವಿನ 'ಸಂಬಂಧ' ನಿಜವೋ.? ಅಥವಾ ಜಸ್ಟ್ ಗಾಸಿಪ್ಪೋ.? ಎಂಬುದನ್ನ ದಿಗಂತ್ ಆಗಲಿ ಐಂದ್ರಿತಾ ಆಗಲಿ ಇಲ್ಲಿಯವರೆಗೂ ಕ್ಲಾರಿಟಿ ಕೊಟ್ಟಿರಲಿಲ್ಲ.

ಇದೀಗ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ದಿಗಂತ್ ನನ್ನ ಬಾಯ್ ಫ್ರೆಂಡ್'' ಎಂದು ಹೇಳಿಕೆ ನೀಡಿದ್ದಾರೆ ನಟಿ ಐಂದ್ರಿತಾ ರೇ.!

ಅಷ್ಟೇ ಹೇಳಿದ್ರೆ ಪರ್ವಾಗಿಲ್ಲ. ಕೊನೆಗೆ ಗಿಫ್ಟ್ ಹ್ಯಾಂಪರ್ ಗೋಸ್ಕರ ಹಾಗೆ ಹೇಳಿದ್ದು ಎಂದು ಐಂದ್ರಿತಾ ರೇ ಹೇಳಿದ್ರಿಂದ ಅವರ ಮಾತು ಸುಳ್ಳೋ..? ನಿಜವೋ..? ಎಂದು ಕೆಲವರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಮುಂದೆ ಓದಿರಿ...

ಐಂದ್ರಿತಾ ರೇ ಎಂಟ್ರಿ ಕೊಟ್ಟ ಕೂಡಲೆ....

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಐಂದ್ರಿತಾ ರೇ ಎಂಟ್ರಿ ಕೊಟ್ಟ ಕೂಡಲೆ 'ದಿಗಂತ್' ಬಗ್ಗೆ ಮಾತನಾಡಲು ಆರಂಭಿಸಿದರು ನಿರೂಪಕ ಅಕುಲ್ ಬಾಲಾಜಿ.

'ಬೆಸ್ಟ್ ಫ್ರೆಂಡ್'

''ಕಾರ್ಯಕ್ರಮಕ್ಕೆ ನಿಮ್ಮ ಬೆಸ್ಟ್ ಫ್ರೆಂಡ್ ದಿಗಂತ್ ಬಂದಿದ್ದರು. ಜೊತೆಗೆ ಆಂಡಿ (ಐಂದ್ರಿತಾ) ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಹೇಳಿದ್ರು'' ಎಂದು ಐಂದ್ರಿತಾ ರೇ ರವರನ್ನ ಅಕುಲ್ ಬಾಲಾಜಿ ಕಾಲೆಳೆಯಲು ಆರಂಭಿಸಿದರು. ಆಗ, ''ಮೈ ಬೆಸ್ಟ್ ಫ್ರೆಂಡ್ ದಿಗಂತ್'' ಎಂದು ಐಂದ್ರಿತಾ ರೇ ಮಂದಹಾಸ ಬೀರಿದರು.

ದಿಗಂತ್ ಮೇಲೆ ಪ್ರಮಾಣ ಮಾಡಲಿಲ್ಲ

Rapid Fire ರೌಂಡ್ ಗೆ ಚಾಲನೆ ನೀಡುವ ಮುನ್ನ ''ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಎಂದು ದಿಗಂತ್ ಮೇಲೆ ಆಣೆ ಮಾಡಿ'' ಅಂತ ಅಕುಲ್ ಹೇಳಿದಾಗ ಐಂದ್ರಿತಾ, ದಿಗಂತ್ ಮೇಲೆ ಆಣೆ ಮಾಡಲಿಲ್ಲ.

ಲುಕ್ಸ್ ನಲ್ಲಿ ದಿಗಂತ್ ಫುಲ್ ಮಾರ್ಕ್ಸ್

ಇನ್ನೂ Rapid Fire ರೌಂಡ್ ನಲ್ಲಿ 'ಲುಕ್ಸ್'ನಲ್ಲಿ ದಿಗಂತ್ ಗೆ ನಟಿ ಐಂದ್ರಿತಾ 10/10 ಫುಲ್ ಮಾರ್ಕ್ಸ್ ನೀಡಿದರು.

ಕೊನೆಗೆ....

Rapid Fire ರೌಂಡ್ ಮುಗಿದ ಮೇಲೆ ಗಿಫ್ಟ್ ಹ್ಯಾಂಪರ್ ನೀಡುವ ಮುಂಚೆ, ''ಈಗ ನಾನು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟರೆ, ಗಿಫ್ಟ್ ಹ್ಯಾಂಪರ್ ನಿಮಗೆ ನೀಡುವೆ'' ಎಂದು ''ನನ್ನ ಜೀವನದಲ್ಲಿ ದಿಗಂತ್.....'' ವಾಕ್ಯವನ್ನ ಪೂರ್ಣಗೊಳಿಸಿ'' ಅಂತ ಅಕುಲ್ ಪ್ರಶ್ನೆ ಕೇಳಿದರು.

ಬಾಯ್ ಫ್ರೆಂಡ್ ಎಂದ ಐಂದ್ರಿತಾ

''ನನ್ನ ಜೀವನದಲ್ಲಿ ದಿಗಂತ್ ಲೈಫ್ (ಪ್ರಾಣ), ನನ್ನ ಜೀವನದಲ್ಲಿ ದಿಗಂತ್ ಬೆಸ್ಟ್ ಫ್ರೆಂಡ್'' ಎಂದು ಮೊದಲು ಹೇಳಿದ ಐಂದ್ರಿತಾ ನಂತರ ''ನನ್ನ ಜೀವನದಲ್ಲಿ ದಿಗಂತ್ ಬಾಯ್ ಫ್ರೆಂಡ್'' ಎಂದು ನಗುನಗುತ್ತಾ ಒಪ್ಪಿಕೊಂಡರು.

ಹ್ಯಾಂಪರ್ ಗಾಗಿ.?

''ನನ್ನ ಜೀವನದಲ್ಲಿ ದಿಗಂತ್ ಬಾಯ್ ಫ್ರೆಂಡ್'' ಎಂದು ಒಪ್ಪಿಕೊಂಡ ಮೇಲೆ ಐಂದ್ರಿತಾ ಕೈಗೆ ಗಿಫ್ಟ್ ಹ್ಯಾಂಪರ್ ಸೇರಿತು. ಆಗ, ''ಹ್ಯಾಂಪರ್ ಗೋಸ್ಕರ ನಾನು ಸುಳ್ಳು ಹೇಳಿದೆ'' ಎಂದರು ನಟಿ ಐಂದ್ರಿತಾ ರೇ.

ಮೊದಲ ಬಾರಿಗೆ...

''ದಿಗಂತ್ ನನ್ನ ಪ್ರಾಣ, ಬೆಸ್ಟ್ ಫ್ರೆಂಡ್, ಬಾಯ್ ಫ್ರೆಂಡ್'' ಅಂತ ಐಂದ್ರಿತಾ ರೇ ಹೇಳಾಯ್ತು. ಮೊಟ್ಟ ಮೊದಲ ಬಾರಿಗೆ ಐಂದ್ರಿತಾ ರೇ ರಿವೀಲ್ ಮಾಡಿದ್ದಾರೆ'' ಎಂದು ಅಕುಲ್ ಬಾಲಾಜಿ ಕೂಡ ಹೇಳಿದರು. ಆದರೂ, ''ಗಿಫ್ಟ್ ಹ್ಯಾಂಪರ್ ಗಾಗಿ ಸುಳ್ಳು ಹೇಳಿದೆ'' ಎಂದು ಐಂದ್ರಿತಾ ಹೇಳಿದ್ದನ್ನ ಕೇಳಿದ್ಮೇಲೆ ಕೆಲವರಿಗೆ ಇನ್ನೂ ಕ್ಲಾರಿಟಿ ಸಿಕ್ಕಂತಾಗಿಲ್ಲ.

English summary
'Diganth is my Boy Friend'' reveals Kannada Actress Aindrita Ray in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada