For Quick Alerts
  ALLOW NOTIFICATIONS  
  For Daily Alerts

  ದೂದ್ ಪೇಡಾ ದಿಗಂತ್ ಕಂಡಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್

  By Suneel
  |

  ಇಬ್ಬರು ಸ್ಟಾರ್ ಗಳ ಸಿನಿಮಾ ಒಂದೇ ದಿನ, ಒಂದೇ ತಿಂಗಳಲ್ಲಿ ಬಿಡುಗಡೆ ದಿನಾಂಕ ಪಡೆದಲ್ಲಿ ಸ್ಟಾರ್ ವಾರ್ ಶುರುವಾಗಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಗುತ್ತದೆ. ಆದರೆ ಸ್ಟಾರ್ ಗಳು ಮಾತ್ರ ಇಂತಹ ಯಾವ ವಿಷಯಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್‌ ಟೈಮ್' ಕಾರ್ಯಕ್ರಮದಲ್ಲಿ ದಿಗಂತ್ ಹೇಳಿದ ಮಾತು ಕೇಳಿದರೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇಲ್ಲ ಎಂಬ ಫೀಲ್ ಎಲ್ಲರಿಗೂ ಆಗುತ್ತದೆ.

  ಅಷ್ಟಕ್ಕೂ ದಿಗಂತ್ ಅಂತಹದ್ದೇನು ಹೇಳಿದ್ರು, ಜೊತೆಗೆ ದರ್ಶನ್ ರಲ್ಲಿ ಅವರಿಗೆ ಇಷ್ಟವಾದದ್ದು ಏನು ಎಂಬುದನ್ನು ಮುಂದೆ ಓದಿ...

  Rapid Fire ರೌಂಡ್ ನಲ್ಲಿ ದಿಗಂತ್ ಹೇಳಿದ ಮಾತು

  Rapid Fire ರೌಂಡ್ ನಲ್ಲಿ ದಿಗಂತ್ ಹೇಳಿದ ಮಾತು

  ನಿರೂಪಕ ಅಕುಲ್ ಬಾಲಾಜಿ 'Rapid Fire' ರೌಂಡ್ ನಲ್ಲಿ ದಿಗಂತ್ ಗೆ ಸ್ಯಾಂಡಲ್ ವುಡ್ ನಟರಲ್ಲಿ ಯಾರಿಂದ ಏನನ್ನು ಕದಿಯಲು ಬಯಸುತ್ತೀರಿ ಎಂಬ ಪ್ರಶ್ನೆ ಕೇಳಿ, ಹಲವು ನಟರ ಹೆಸರು ಹೇಳಿದ್ದರು. ಇದಕ್ಕೆ ಉತ್ತರಿಸಿದ ದೂದ್ ಪೇಡಾ ದಿಗಂತ್ ಯಾವ ನಟರಲ್ಲಿ ತಮಗೆ ಏನು ಇಷ್ಟ, ಏನನ್ನು ಕದಿಯಲು ಇಷ್ಟ ಎಂಬುದನ್ನು ಹೇಳಿ ಆ ನಟರಲ್ಲಿ ಇಷ್ಟವಾಗುವ ಗುಣಗಳನ್ನು ಬಹಿರಂಗ ಮಾಡಿದ್ದಾರೆ.

  ದರ್ಶನ್ ರಿಂದ ಕಲಿಯಲು ಬಯಸಿದ್ದು...

  ದರ್ಶನ್ ರಿಂದ ಕಲಿಯಲು ಬಯಸಿದ್ದು...

  ದೂದ್ ಪೇಡಾ ದಿಗಂತ್ ರವರು, 'ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾದಲ್ಲಿನ ಮಾಸ್ಅಪೀಲ್ ಕಲಿಯುವ ಆಸೆ' ಎಂದಿದ್ದಾರೆ.

  ಸುದೀಪ್ ರಲ್ಲಿ ಕದಿಯಲು ಬಯಸಿದ್ದು

  ಸುದೀಪ್ ರಲ್ಲಿ ಕದಿಯಲು ಬಯಸಿದ್ದು

  'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಡೈಲಾಗ್ ಡೆಲಿವರಿ ಮತ್ತು ವಾಯ್ಸ್ ಡಬ್ಬಿಂಗ್ ಸ್ಕಿಲ್ ಗಳನ್ನು ಕದಿಯಲು ಬಯಸುತ್ತೇನೆ' ಎಂದು ದೂದ್ ಪೇಡಾ ದಿಗಂತ್ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'Rapid Fire' ರೌಂಡ್ ನಲ್ಲಿ ಹೇಳಿದ್ದಾರೆ.

  ಗಣೇಶ್ ಬಗ್ಗೆ ದಿಗಂತ್ ಹೇಳಿದ್ದು..

  ಗಣೇಶ್ ಬಗ್ಗೆ ದಿಗಂತ್ ಹೇಳಿದ್ದು..

  "ಗಣೇಶ್ ಅದ್ಭುತ ಆಕ್ಟರ್. ಟೈಮಿಂಗ್ ತುಂಬಾ ಚೆನ್ನಾಗಿದೆ. ಕಾಮಿಡಿ ಸೀನ್ ಆಗಿರಬಹುದು, ಯಾವುದೇ ಸೀನ್ ಆಗಿರಬಹುದು. ಅವರ ಟೈಮಿಂಗ್ ಸಖತ್ತಾಗಿದೆ. ಅವರಿಂದ ಟೈಮಿಂಗ್ ಕದಿಯಲು ಇಷ್ಟ" -ದಿಗಂತ್

  ದುನಿಯಾ ವಿಜಯ್

  ದುನಿಯಾ ವಿಜಯ್

  ದಿಗಂತ್ ಗೆ ದುನಿಯಾ ವಿಜಯ್ ರೀತಿ ಆಕ್ಷನ್ ಮಾಡಲು ಇಷ್ಟವಂತೆ. ಅವರ ಆಕ್ಷನ್ ಸೀನ್ ಗಳು ಬಹಳ ಅದ್ಭುತವಾಗಿರುತ್ತವೆ ಎಂದು 'ಸೂಪರ್ ಟಾಕ್ ಟೈಮ್'ನಲ್ಲಿ ದಿಗಂತ್ ಹೇಳಿದ್ದಾರೆ.

  English summary
  Diganth says in 'Super TalkTime' that, 'He would like to steal 'Darshan Film's Mass Appeal'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X