ಕಿಸ್ಸಿಂಗ್ ಸೀನ್ ಬಗ್ಗೆ ಸತ್ಯ ಒಪ್ಪಿಕೊಂಡ ದೂದ್ ಪೇಡ ದಿಗಂತ್!
Recommended Video

ರೋಮ್ಯಾಂಟಿಕ್ ಸನ್ನಿವೇಶಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ, ಅದರಲ್ಲೂ ಕಿಸ್ಸಿಂಗ್ ಸೀನ್ ಮಾಡುವಾಗ ಕೆಲವರು ಬೇಕು ಬೇಕು ಅಂತಲೇ ರೀಟೇಕ್ ತೆಗೆದುಕೊಳ್ತಾರಂತೆ!
ಚಾಕಲೇಟ್ ಬಾಯ್ ದಿಗಂತ್ ಕೂಡ ಕಿಸ್ಸಿಂಗ್ ಸೀನ್ ಮಾಡುವಾಗ ಜಾಸ್ತಿ ರೀಟೇಕ್ಸ್ ತೆಗೆದುಕೊಂಡಿದ್ರಾ.? ಈ ಡೌಟ್ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಬಂದಿದೆ. ಅದಕ್ಕೆ ನೋಡಿ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ದಿಗಂತ್ ಗೆ ಶಿವಣ್ಣ ನೇರವಾಗಿ ಒಂದು ಪ್ರಶ್ನೆಯ ಬಾಣ ಬಿಟ್ಟರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಗೆಳೆಯರಾದ ದಿಗಂತ್ ಹಾಗೂ ಯೋಗಿ ಭಾಗವಹಿಸಿದ್ದರು. ಮೊದಲನೇ ಸುತ್ತಿನಲ್ಲಿ ('ಸತ್ಯನಾ.? ಧೈರ್ಯನಾ.?) ಮೊದಲು 'ಸತ್ಯ'ವನ್ನು ಹೇಳಲು ದಿಗಂತ್ ನಿರ್ಧರಿಸಿದರು.
''ಸಿನಿಮಾದಲ್ಲಿ ರೋಮ್ಯಾಂಟಿಕ್ ಸೀನ್ಸ್ ಮಾಡುವಾಗ, ಜಾಸ್ತಿ ರೀಟೇಕ್ಸ್ ತಗೊಂಡಿದ್ದು ಉಂಟಾ.?'' ಎಂದು ಪ್ರಶ್ನೆಯನ್ನ ದಿಗಂತ್ ಗೆ ಶಿವಣ್ಣ ಕೇಳಿದರು. ಆಗ, ''ಆ ತರಹ ಇಲ್ಲ. ನನಗೆ ಸ್ವಲ್ಪ ಸಂಕೋಚ ಜಾಸ್ತಿ'' ಎಂದರು ದಿಗಂತ್. ಅದಕ್ಕೆ ''ನಿಜ ಹೇಳಬೇಕು'' ಅಂತ ಯೋಗಿ ಹಾಗೂ ಶಿವಣ್ಣ ಹೇಳಿದ್ಮೇಲೆ, ''ಹಿಂದಿ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇತ್ತು. ಆಗಲೇ ಏಳೆಂಟು ಟೇಕ್ ಆಗಿತ್ತು. ಡೈರೆಕ್ಟರ್ ಬಂದು ಬೇರೆ ಬೇರೆ ಆಂಗಲ್ ನಲ್ಲಿ ಇನ್ನೂ ಎರಡು ಟೇಕ್ ಬೇಕು ಅಂತ ಹೇಳಿದರು. ಆಗ ಅದರ ಬಗ್ಗೆ ನನಗೆ ಖುಷಿ ಆಯ್ತು. ನಾನು ಕೇಳಲಿಲ್ಲ ಆದರೆ ದೇವರು ಕೊಟ್ಟ ಗಿಫ್ಟ್ ಅದು'' ಎಂದು ಹಲ್ಲುಬಿಟ್ಟರು ದಿಗಂತ್.


Click it and Unblock the Notifications











