»   » ದಿನಕರ್ ತೂಗುದೀಪ ಅಡ್ಡದಿಂದ ಇದೀಗಷ್ಟೇ ಹೊರಬಂದ ಸುದ್ದಿಯಿದು...

ದಿನಕರ್ ತೂಗುದೀಪ ಅಡ್ಡದಿಂದ ಇದೀಗಷ್ಟೇ ಹೊರಬಂದ ಸುದ್ದಿಯಿದು...

Posted By:
Subscribe to Filmibeat Kannada

ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಚಿತ್ರ 'ಸರ್ವಾಂತರ್ಯಾಮಿ'ಗೆ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೀಗ, ಪ್ಲಾನ್ ನಲ್ಲಿ ಕೊಂಚ ಬದಲಾವಣೆ ಆಗಿರುವುದರಿಂದ 'ಕುರುಕ್ಷೇತ್ರ' ದರ್ಶನ್ ರವರ 50ನೇ ಚಿತ್ರವಾಗಿದೆ. ಹಾಗೇ, ದಿನಕರ್ ಕೈಗೆ ಹೊಸ ಸ್ಕ್ರಿಪ್ಟ್ ಸೇರಿದೆ.

'ಚಕ್ರವರ್ತಿ' ಸಿನಿಮಾದಲ್ಲಿ ಖತರ್ನಾಕ್ ಕೇಡಿ ಪಾತ್ರದಲ್ಲಿ ಮಿಂಚಿದ್ದ ದಿನಕರ್ ತೂಗುದೀಪ ಇದೀಗ ಮತ್ತೆ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.

ದಿನಕರ್ ಆಕ್ಟಿಂಗ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?

ದಿನಕರ್ 'ಕ್ಯಾಪ್ಟನ್ ಆಫ್ ದಿ ಶಿಪ್' ಆಗಲು ಹೊರಟಿರುವ ಸಿನಿಮಾ ಯಾವುದು, ಚಿತ್ರದ ತಾರಾಬಳಗದಲ್ಲಿ ಯಾರೆಲ್ಲ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ ಓದಿರಿ...

ದಿನಕರ್ ತೂಗುದೀಪ ಮುಂದಿನ ಸಿನಿಮಾ ಯಾವುದು.?

ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಲು ಹೊರಟಿರುವ ಹೊಸ ಚಿತ್ರಕ್ಕೆ 'ಲೈಫ್ ಜೊತೆ ಒಂದು ಸೆಲ್ಫಿ' ಎಂಬ ಶೀರ್ಷಿಕೆ ಇಡಲಾಗಿದೆ.

ಕಥೆ ಬರೆದಿರುವವರು ಯಾರು ಗೊತ್ತಾ.?

'ಲೈಫ್ ಜೊತೆ ಒಂದು ಸೆಲ್ಫಿ' ಕಥೆ ಬರೆದಿರುವವರು ಮಾನಸ ದಿನಕರ್. ಅದೇ ಕಥೆಗೆ ಚಿತ್ರಕಥೆ ಹೆಣೆದು ಇದೀಗ ಸಿನಿಮಾ ಮಾಡಲು ಹೊರಟಿದ್ದಾರೆ ದಿನಕರ್ ತೂಗುದೀಪ.

ಮುಖ್ಯಭೂಮಿಕೆಯಲ್ಲಿ ಯಾರ್ಯಾರು.?

'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದ ಮುಖ್ಯಭೂಮಿಕೆಯಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳಲಿದ್ದಾರೆ.

ಯಾವಾಗ್ಲಿಂದ ಸಿನಿಮಾ ಶುರು.?

'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಕ್ಕೆ ಸಮೃದ್ಧಿ ಮಂಜುನಾಥ್ ಬಂಡವಾಳ ಹಾಕಲಿದ್ದಾರೆ. ಈ ಚಿತ್ರಕ್ಕೆ ಆಗಸ್ಟ್ ಕೊನೆಯ ವಾರದಲ್ಲಿ ಚಾಲನೆ ಸಿಗಲಿದ್ದು, ಸೆಪ್ಟೆಂಬರ್ 15 ರಿಂದ ಶೂಟಿಂಗ್ ಶುರು ಆಗಲಿದೆ.

English summary
Dinakar Thoogudeepa directorial next movie titled 'Life Jothe Ondu Selfie'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada