»   » 'ಬಿಲ್ಡಪ್' ಎಂದು ನಿರ್ದೇಶಕ 'ಸಿಂಪಲ್' ಸುನಿ ಕರೆದಿದ್ದು ಯಾರಿಗೆ.?

'ಬಿಲ್ಡಪ್' ಎಂದು ನಿರ್ದೇಶಕ 'ಸಿಂಪಲ್' ಸುನಿ ಕರೆದಿದ್ದು ಯಾರಿಗೆ.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಎಂದು ಕರೆದು 'ಬಿಗ್ ಬಾಸ್' ಖ್ಯಾತಿಯ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್ ಗಳಿಗೆ ಒಂದು ಇಡೀ ದಿನ ಅಹಾರ ಆಗಿದ್ದು ನಿಮಗೆ ನೆನಪಿರಬಹುದು. ಒಂದ್ವೇಳೆ ಮರೆತು ಹೋಗಿದ್ದರೆ, ಈ ಲಿಂಕ್ ಕ್ಲಿಕ್ ಮಾಡಿ ಓದಿರಿ...

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

ಸಂಜನಾ ಬಾಯಿಂದ 'ಸಾರಿ' ಎನ್ನುವ ಪದ ಬರುವವರೆಗೂ ಟ್ರೋಲ್ ಗಳು ನಿಲ್ಲಲೇ ಇಲ್ಲ. ಕಡೆಗೆ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ಮೇಲೆ, ವಿವಾದಕ್ಕೆ ಫುಲ್ ಸ್ಟಾಪ್ ಬಿತ್ತು.

ಇಷ್ಟೆಲ್ಲ ವಿವಾದಗಳಾದರೂ, ಟಾಕ್ ಶೋಗಳಲ್ಲಿ ಅಂತಹ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಬೀಳುತ್ತಿಲ್ಲ. ಮೊನ್ನೆಮೊನ್ನೆಯಷ್ಟೇ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸಿಂಪಲ್' ನಿರ್ದೇಶಕ ಸುನಿ ಪಾಲ್ಗೊಂಡಿದ್ದಾಗಲೂ, ಅವರಿಗೆ ಇಂತಹ ಪ್ರಶ್ನೆಗಳೇ ಎದುರಾದವು. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ಓದಿರಿ...

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸಿಂಪಲ್' ಸುನಿ

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಮೇಘನಾ ಗಾಂವ್ಕರ್ ಹಾಗೂ ಅನೀಶ್ ಜೊತೆ 'ಸಿಂಪಲ್' ಸುನಿ ಅತಿಥಿಗಳಾಗಿ ಭಾಗವಹಿಸಿದ್ದರು.

ದಿಢೀರ್ ಬೆಂಕಿ ಬಂತಲ್ಲ.!

ಕಾರ್ಯಕ್ರಮದ ಕೊನೆಗೆ 'ದಿಢೀರ್ ಬೆಂಕಿ' ರೌಂಡ್ ಗೆ ನಿರೂಪಕ ಅಕುಲ್ ಬಾಲಾಜಿ ಚಾಲನೆ ನೀಡಿದರು. ಆಗ ಸಿಂಪಲ್ ಸುನಿಗೆ ಎದುರಾದ ಪ್ರಶ್ನೆ ಇದು....

ಮನಸ್ಸಿಗೆ ಬರುವ ನಟ

''ಈ ಸ್ವಭಾವಕ್ಕೆ ತಕ್ಕಂತೆ ಯಾವ ನಟರು ನಿಮ್ಮ ಮೈಂಡ್ ಗೆ ಬರ್ತಾರೆ.?'' ಎಂದು 'ಡೌನ್ ಟು ಅರ್ಥ್', 'ಅತಿಯಾದ ಆಟಿಟ್ಯೂಡ್', 'ಸೆಲ್ಫಿಶ್', 'ಬಿಲ್ಡಪ್' ಎಂಬ 'ಸ್ವಭಾವ'ಗಳನ್ನು 'ಸಿಂಪಲ್' ಸುನಿ ಮುಂದಿಟ್ಟರು ನಿರೂಪಕ ಅಕುಲ್ ಬಾಲಾಜಿ.

ಡೌನ್ ಟು ಅರ್ಥ್ ಯಾರು.?

ನಟ ಅನೀಶ್ ರವರದ್ದು 'ಡೌನ್ ಟು ಅರ್ಥ್' ಸ್ವಭಾವ ಎಂದರು ನಿರ್ದೇಶಕ ಸುನಿ.

'ಬಿಲ್ಡಪ್' ಸಂಜನಾ.!

'ಬಿಲ್ಡಪ್' ಎಂದ ಕೂಡಲೆ ನಿರ್ದೇಶಕ ಸುನಿಗೆ ಸಂಜನಾ ನೆನಪಾಗಿದೆ. ಹೀಗಾಗಿ 'ಬಿಲ್ಡಪ್' ಎಂದು ಅಕುಲ್ ಬಾಲಾಜಿ ಬಾಯಿಂದ ಬರುತ್ತಿದ್ದಂತೆಯೇ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಎಂದುಬಿಟ್ಟರು ಸುನಿ.

ಕಿಸಕ್ ಎಂದು ನಕ್ಕ ಅಕುಲ್ ಬಾಲಾಜಿ

'ಬಿಲ್ಡಪ್'ಗೆ ನಿರ್ದೇಶಕ ಸುನಿ ಸಂಜನಾ ಹೆಸರು ಹೇಳುತ್ತಿದ್ದಂತೆಯೇ, ಅಕುಲ್ ಬಾಲಾಜಿ ಕಿಸಕ್ ಎಂದು ನಕ್ಕು ಬಿಟ್ಟರು

'ಬಿಲ್ಡಪ್' ವಿವಾದದ ಸುತ್ತ.!

ಹೇಗಿದ್ದರೂ, ನಟಿ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು ದರ್ಶನ್ ಗೆ 'ಬಿಲ್ದಪ್' ಎಂಬ ಬಿರುದು ಕೊಟ್ಟ ಮೇಲೆ. ಅಂದ್ಮೇಲೆ, 'ಬಿಲ್ಡಪ್' ಎಂದು ಕರೆದ ಕೂಡಲೆ ಸುನಿಗೆ ಮಾತ್ರ ಅಲ್ಲ, ಎಲ್ಲರಿಗೂ ಸಂಜನಾ ನೆನಪಾಗಲೇಬೇಕು.

English summary
Director Suni calls 'Bigg Boss' Sanjana as 'Build Up' in Colors Super Channel's Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada