For Quick Alerts
  ALLOW NOTIFICATIONS  
  For Daily Alerts

  ವಿಜಯ್ ಪ್ರಸಾದ್ ಔಟ್ ಆದ್ಮೇಲೆ 'ದೋಸೆ' ಸವಿಯಲು ಬಂದ ರಮ್ಯಾ!

  By ಹರಾ
  |

  ಹೇಳಿಕೇಳಿ ಇದು ದೋಸೆ ಮ್ಯಾಟ್ರು. 'ನೀರ್ ದೋಸೆ' ಆಗಲಿ...'ಬೆಣ್ಣೆ ದೋಸೆ' ಆಗಲಿ...ಯಾರ್ ಮನೆ ದೋಸೆ ಆದರೂ ಅದರಲ್ಲಿ ತೂತು ಇರಲೇಬೇಕು.! ಇದು ಕಾಕತಾಳೀಯವೋ, ಇಲ್ಲ ಹಣೆಬರಹವೋ...ಚೆನ್ನಾಗಿ ಹಿಟ್ ರುಬ್ಬಿ ದೋಸೆ ಹುಯ್ಯುವುದಕ್ಕೆ ಹೋದಾಗೆಲ್ಲಾ ನಿರ್ದೇಶಕ ವಿಜಯ್ ಪ್ರಸಾದ್ ಕೈಸುಟ್ಟುಕೊಳ್ಳುವುದು ಮಾತ್ರ ತಪ್ಪಿಲ್ಲ.!

  'ನೀರ್ ದೋಸೆ' ಸಿನಿಮಾದಿಂದ ನಟಿ ರಮ್ಯಾ ಹೊರ ನಡೆದಿದ್ದರು. ಈಗ ಅದೇ 'ನೀರ್ ದೋಸೆ' ನಿರ್ದೇಶಕ ವಿಜಯ್ ಪ್ರಸಾದ್ 'ಬೆಣ್ಣೆ ದೋಸೆ' ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ.['ಬೆಣ್ಣೆ ದೋಸೆ' ಸೆಟ್ ನಲ್ಲಿ ರಮ್ಯಾ ಹುಟ್ಟುಹಬ್ಬ ಸಂಭ್ರಮ]

  ಹೌದು, ನಮ್ಮ ನಂಬಿಕೆ ಸುಳ್ಳಾಗಿದೆ. ವಿಜಯ್ ಪ್ರಸಾದ್ ಆಕ್ಷನ್ ಕಟ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಾಣಿಸಿಕೊಂಡಿಲ್ಲ.! 'ನೀರ್ ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೋಹಕ ತಾರೆ ರಮ್ಯಾ 'ಬೆಣ್ಣೆ ದೋಸೆ' ಸವಿದಿಲ್ಲ.

  'ಬೆಂಗ್ಳೂರ್ ಬೆಣ್ಣೆ ದೋಸೆ' ಅನ್ನುವ ವಿಭಿನ್ನ ಕಾನ್ಸೆಪ್ಟ್ ರೆಡಿ ಮಾಡಿ, ಕಾರ್ಯಕ್ರಮದ ನಿರ್ದೇಶಕರಾಗಿದ್ದ ವಿಜಯ್ ಪ್ರಸಾದ್, ರೆಬೆಲ್ ಸ್ಟಾರ್ ಅಂಬರೀಶ್, ಮಾಲಾಶ್ರೀ, ರಚಿತಾ ರಾಮ್, ಹುಚ್ಚ ವೆಂಕಟ್ ಸ್ಪೆಷಲ್ ಸೇರಿದಂತೆ ಹಲವು ಸಂಚಿಕೆಗಳನ್ನ ನೀಡಿದ್ದರು.

  ಈ ವಾರ ಕೂಡ Obvious ಆಗಿ ಅವರದ್ದೇ ನಿರ್ದೇಶನದಲ್ಲಿ 'ರಮ್ಯಾ ಹುಟ್ಟುಹಬ್ಬ ಸ್ಪೆಷಲ್ ಸಂಚಿಕೆ' ಕೂಡ ರೆಡಿಯಾಗಿದೆ ಅಂತ ಭಾವಿಸಿದ್ವಿ. ಸುವರ್ಣ ವಾಹಿನಿ ಮೂಲಗಳು ಸ್ಪಷ್ಟಪಡಿಸಿರುವ ಪ್ರಕಾರ, ರಮ್ಯಾ ರವರ ಸಂಚಿಕೆಯನ್ನ ವಿಜಯ್ ಪ್ರಸಾದ್ ನಿರ್ದೇಶನ ಮಾಡಿಲ್ಲ. ['ನೀರ್ ದೋಸೆ' ವಿಜಯ್ ಪ್ರಸಾದ್ ಜೊತೆ ರಮ್ಯಾ 'ಬೆಣ್ಣೆ ದೋಸೆ'.!]

  ರಮ್ಯಾ ಸಂಚಿಕೆ ಶೂಟ್ ಆಗುವ ಮುನ್ನವೇ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಬೇಸರವನ್ನ ಹೊರಹಾಕಿದ್ದಾರೆ.

  'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಮ್ಯಾ ಮೇಡಂ ಹಳೆಯದ್ದನ್ನೆಲ್ಲಾ ಮರೆತಿರಬಹುದು ಅಂತ ಗಾಂಧಿನಗರದ ಮಂದಿ ಭಾವಿಸಿದ್ದರು. ಆದ್ರೆ, ಎಲ್ಲರ ಊಹೆ ಉಲ್ಟಾ ಆಗಿದೆ.

  ನಿರ್ದೇಶಕ ವಿಜಯ್ ಪ್ರಸಾದ್ ಬಿಟ್ಟುಹೋದ ಮೇಲೆ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮಕ್ಕೆ ಹೊಸ ರೂಪ ನೀಡಲಾಗಿದೆ. ಆ ಹೊಸ ರೂಪದ ಮೊದಲ ಸಂಚಿಕೆಯೇ 'ರಮ್ಯಾ ರವರ ಬರ್ತಡೆ ಸ್ಪೆಷಲ್'.

  ಇದೇ ಭಾನುವಾರ ರಾತ್ರಿ 9 ಗಂಟೆಗೆ 'ಬೆಂಗ್ಳೂರ್ ಬೆಣ್ಣೆ ದೋಸೆ-ರಮ್ಯಾ ವಿಶೇಷ' ಪ್ರಸಾರವಾಗಲಿದೆ. ತಪ್ಪದೆ ವೀಕ್ಷಿಸಿ.

  English summary
  Kannada Director Vijayaprasad has opted out of Comedy based show 'Bengaluru Benne Dose'. Suvarna Channel sources have made it clear that Vijayaprasad has not directed 'Ramya's Birthday Special episode' which will telecast on November 29th 9pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X