For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್-ಡಾ.ವಿಷ್ಣು ನಡುವೆ ಇತ್ತೇ ದ್ವೇಷ.? ರಟ್ಟಾಯ್ತು ಅನೇಕರಿಗೆ ತಿಳಿಯದ ರಹಸ್ಯ.!

  By Harshitha
  |

  'ಗಂಧದ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಯಾರೂ ಊಹಿಸದ ಘಟನೆ ನಡೆದ ಬಳಿಕ ನಾನಾ ತರಹದ ಅಂತೆ-ಕಂತೆ ಪುರಾಣಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಗಾಂಧಿನಗರದ ತುಂಬೆಲ್ಲಾ ಹಾರಾಡತೊಡಗಿತು.

  ಡಬಲ್ ಬ್ಯಾರೆಲ್ ಗನ್ ನಿಂದ ಬುಲೆಟ್ ಫೈಯರ್ ಆದಾಗ, ಆ ಸ್ಪಾಟ್ ನಲ್ಲಿ ಡಾ.ವಿಷ್ಣುವರ್ಧನ್ ಇರಲೇ ಇಲ್ಲ.! ಆದ್ರೂ, ವಿಷ್ಣು ರವರೇ ಇದನ್ನೆಲ್ಲ ಮಾಡಿದ್ದು ಎಂದು ಸುಳ್ಳು ಸುದ್ದಿ ಹಬ್ಬಿತು. ಇದರಿಂದ ಡಾ.ವಿಷ್ಣುವರ್ಧನ್ ರವರಿಗೆ ಆದ ನೋವು, ಸಂಕಟ ಅಷ್ಟಿಷ್ಟಲ್ಲ.['ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.!]

  ಈ ಘಟನೆ ನಂತರ ಡಾ.ವಿಷ್ಣುವರ್ಧನ್ ಹಾಗೂ ಡಾ.ರಾಜ್ ಕುಮಾರ್ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ. ಹೀಗಾಗಿ, ಅವರ ನಡುವೆ ಎಲ್ಲವೂ ಸರಿಯಿಲ್ಲ ಅಂತ ಮಾತನಾಡಿಕೊಂಡವರೇ ಹೆಚ್ಚು.! ಹಾಗಾದ್ರೆ, ಇಬ್ಬರ ಮಧ್ಯೆ ವೈಯುಕ್ತಿಕ ದ್ವೇಷ ಇತ್ತೇ.? ಡಾ.ವಿಷ್ಣುವರ್ಧನ್ ರವರ ಮೇಲೆ ಅಣ್ಣಾವ್ರಿಗೆ ಕೋಪವಿತ್ತಾ.? ಈ ಪ್ರಶ್ನೆಗಳಿಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಉತ್ತರ ಲಭಿಸಿದೆ.

  ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ನಡುವಿನ ಸ್ನೇಹದ ಕುರಿತು ಅನೇಕರಿಗೆ ತಿಳಿಯದ ರಹಸ್ಯ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಬಯಲಾಗಿದೆ. ಮುಂದೆ ಓದಿರಿ.....

  ವೈಯುಕ್ತಿಕ ದ್ವೇಷ ಇರಲಿಲ್ಲ

  ವೈಯುಕ್ತಿಕ ದ್ವೇಷ ಇರಲಿಲ್ಲ

  ''ಡಾ.ರಾಜ್ ಕುಮಾರ್ ರವರಿಗಾಗಲಿ... ಡಾ.ವಿಷ್ಣುವರ್ಧನ್ ರವರಿಗಾಗಲಿ ಯಾವುದೇ ರೀತಿಯ ವೈಯುಕ್ತಿಕ ದ್ವೇಷ ಇರಲಿಲ್ಲ'' - ಬಿ.ಗಣಪತಿ, ಪತ್ರಕರ್ತ ['ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ!]

  'ಯಜಮಾನ' ಚಿತ್ರ ನೋಡಿದಾಗ....

  'ಯಜಮಾನ' ಚಿತ್ರ ನೋಡಿದಾಗ....

  ''ಯಜಮಾನ' ಚಿತ್ರವನ್ನ ನೋಡಿದ ಡಾ.ರಾಜ್ ಕುಮಾರ್, ಕೂಡಲೇ ಡಾ.ವಿಷ್ಣುವರ್ಧನ್ ರವರಿಗೆ ಫೋನ್ ಮಾಡಿ ''ಈಗಲೇ ನಿಮ್ಮನ್ನ ನೋಡಿ ತಬ್ಬಿಕೊಳ್ಳಬೇಕು'' ಅಂತಾರೆ. ಆದ್ರೆ, ಅವತ್ತು ಶೂಟಿಂಗ್ ನಲ್ಲಿ ಇದ್ದ ಕಾರಣ ಇಬ್ಬರೂ ಮೀಟ್ ಆಗಲಿಲ್ಲ. ಕೊನೆಗೂ ಅದು ಆಗಲೇ ಇಲ್ಲ ಎಂಬ ನೋವು ಡಾ.ರಾಜ್ ಕುಮಾರ್ ರವರಿಗಿತ್ತು'' - ಬಿ.ಗಣಪತಿ, ಪತ್ರಕರ್ತ

  ವಿಷ್ಣುವರ್ಧನ್ ಹೃದಯವಂತಿಕೆ ಇದು..

  ವಿಷ್ಣುವರ್ಧನ್ ಹೃದಯವಂತಿಕೆ ಇದು..

  ''ಹಿಮಾಲಯದ ಎತ್ತರಕ್ಕೆ ಏರಿರುವ ಡಾ.ರಾಜ್ ಕುಮಾರ್ ರವರನ್ನ ನಾವು ನೋಡಬಹುದೇ ಹೊರತು, ಅಲ್ಲಿ ಹೋಗಿ ನಿಂತು ಸ್ಪರ್ಶಿಸುವುದಕ್ಕೆ ಸಾಧ್ಯ ಇಲ್ಲ ಎಂದು ಸ್ವತಃ ಡಾ.ವಿಷ್ಣುವರ್ಧನ್ ರವರು ಹೇಳಿದ್ದರು. ಇದು ಡಾ.ವಿಷ್ಣುವರ್ಧನ್ ರವರ ಹೃದಯವಂತಿಕೆಗೆ ಸಾಕ್ಷಿ'' - ಬಿ.ಗಣಪತಿ, ಪತ್ರಕರ್ತ

  ಇನ್ನೂ ಹತ್ತು ಸಿನಿಮಾ ಬರ್ತಿತ್ತು

  ಇನ್ನೂ ಹತ್ತು ಸಿನಿಮಾ ಬರ್ತಿತ್ತು

  ''ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ರವರ ಅಭಿಮಾನಿಗಳ ಮಧ್ಯೆ ವೈಷಮ್ಯ ಇಲ್ಲದೇ ಹೋಗಿದ್ರೆ, 'ಗಂಧದ ಗುಡಿ' ಎಂಬ ಇನ್ನೂ ಹತ್ತು ಸಿನಿಮಾ ಬರ್ತಿತ್ತು'' - ಬಿ.ಗಣಪತಿ, ಪತ್ರಕರ್ತ

  ರಾಜ್ ಕುಮಾರ್ ಯಾವತ್ತಿದ್ರೂ ನಂಬರ್ 1

  ರಾಜ್ ಕುಮಾರ್ ಯಾವತ್ತಿದ್ರೂ ನಂಬರ್ 1

  ''ನಾನು ವಿಷ್ಣುವರ್ಧನ್ ಜೊತೆ 'ನೀನು ನಕ್ಕರೆ ಹಾಲು ಸಕ್ಕರೆ' ಒಂದೇ ಸಿನಿಮಾ ಮಾಡಿರುವುದು. ಆ ಶೂಟಿಂಗ್ ಟೈಮ್ ನಲ್ಲಿ, ''ಡಾ.ರಾಜ್ ಕುಮಾರ್ ರವರಿಗೂ ನಿಮಗೂ ಯಾವುದೇ ವ್ಯತ್ಯಾಸ ಇಲ್ಲ. ಅವರು ನಂಬರ್ ಒನ್ ಆದರೆ ನೀವೂ ನಂಬರ್ ಒನ್'' ಅಂತ ನಾನು ವಿಷ್ಣುವರ್ಧನ್ ಗೆ ಹೇಳಿದೆ. ಅದಕ್ಕೆ ಅವರು, ''ದಯವಿಟ್ಟು ಕ್ಷಮಿಸಿ, ಮಾತು ವಾಪಸ್ ತಗೊಳ್ಳಿ. ರಾಜ್ ಕುಮಾರ್ ನಂಬರ್ ಒನ್. ನಾನು ನಂಬರ್ ನೈನ್'' ಎಂದರು. ಇದು ರಾಜ್ ಕುಮಾರ್ ರವರಿಗೆ ವಿಷ್ಣು ಕೊಡುತ್ತಿದ್ದ ಗೌರವ'' - ಭಗವಾನ್, ನಿರ್ದೇಶಕ

  ಭೇದಭಾವ ಇರಲಿಲ್ಲ

  ಭೇದಭಾವ ಇರಲಿಲ್ಲ

  ''ಡಾ.ರಾಜ್ ಹಾಗೂ ಡಾ.ವಿಷ್ಣುವರ್ಧನ್ ಮಧ್ಯೆ ಯಾವುದೇ ಭೇದಭಾವ ಇರಲಿಲ್ಲ. ಇದು ನೂರಕ್ಕೆ ನೂರು ಸತ್ಯ'' - ಭಗವಾನ್, ನಿರ್ದೇಶಕ

  English summary
  Inspite of 'Gandhadagudi' incident, Dr.Rajkumar and Dr.Vishnuvardhan didn't have any differences says Journalist B.Ganapathi and Director Bhagavan in 'Weekend With Ramesh 3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X