For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲಿ ಪ್ರಸಾರವಾದ ಮೊಟ್ಟ ಮೊದಲ ಕನ್ನಡ ಸಿನಿಮಾ ಯಾವುದು ಗೊತ್ತೆ?

  |

  ಭಾರತದಲ್ಲಿ ಟಿವಿ ಆರಂಭವಾದಾಗ ಇದ್ದುದ್ದು ಒಂದೇ ಚಾನೆಲ್ ದೂರದರ್ಶನ ಅಥವಾ ಡಿಡಿ ನ್ಯಾಷನಲ್. 1959 ರಲ್ಲಿ ಪ್ರಯೋಗಾತ್ಮಕ ಪ್ರಸಾರ ಪ್ರಾರಂಭವಾದರೂ ಪರಿಣಾಮಕಾರಿಯಾಗಿ ಪ್ರಸಾರ ಆರಂಭವಾಗಿದ್ದು 70 ರ ದಶಕದ ನಂತರವೇ.

  ಡಿಡಿ ನ್ಯಾಶನಲ್ ಹಿಂದಿ ಭಾಷೆಯ ಚಾನೆಲ್ ಆಗಿತ್ತು. ಸುದ್ದಿಗಳು, ಕಾರ್ಯಕ್ರಮಗಳು ಬಹುತೇಕ ಹಿಂದಿಯಲ್ಲಿಯೇ ಇರುತ್ತಿದ್ದವು. ಇತರ ಭಾಷೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದುದು ಬಹಳ ಅಪರೂಪ.

  ಭಾರತದ ಮೊತ್ತ ಮೊದಲ ಟಿವಿ ಚಾನೆಲ್‌ನಲ್ಲಿ ಮೊದಲ ಬಾರಿಗೆ ಕನ್ನಡದ ಸಿನಿಮಾ ಪ್ರಸಾರವಾಗಿದ್ದು ಬಹಳ ವಿಶೇಷ ಸಂದರ್ಭದಲ್ಲಿ. ಮೊದಲ ಬಾರಿಗೆ ಕನ್ನಡಿಗರು ಟಿವಿಯಲ್ಲಿ ನೋಡಿದ ಕನ್ನಡ ಸಿನಿಮಾ ಡಾ.ರಾಜ್‌ಕುಮಾರ್ ಅವರದ್ದು ಎಂಬುದು ವಿಶೇಷ.

  ಮೊದಲ ಬಾರಿಗೆ ಪ್ರಸಾರವಾದ ಸಿನಿಮಾ

  ಮೊದಲ ಬಾರಿಗೆ ಪ್ರಸಾರವಾದ ಸಿನಿಮಾ

  1981ರ ಕನ್ನಡ ರಾಜ್ಯೋತ್ಸವದ ದಿನದಂದು ಮೊದಲ ಬಾರಿಗೆ ಕನ್ನಡ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಅಣ್ಣಾವ್ರ 'ಶಂಕರ್-ಗುರು' ಸಿನಿಮಾವನ್ನು ಪ್ರಸಾರ ಮಾಡಲಾಯಿತು.

  ಅಣ್ಣಾವ್ರು ನಮ್ಮೂರಿಗೆ ಬಂದಿದ್ದಾರೆಂದು ಸಂಭ್ರಮಿಸಿದ್ದ ಜನ

  ಅಣ್ಣಾವ್ರು ನಮ್ಮೂರಿಗೆ ಬಂದಿದ್ದಾರೆಂದು ಸಂಭ್ರಮಿಸಿದ್ದ ಜನ

  ಟಿವಿಗಳು ಬಹಳ ಅಪರೂಪವಾಗಿದ್ದ ಆ ಕಾಲದಲ್ಲಿಯೂ ಊರುಗಳಲ್ಲಿ, ನಗರ, ಪಟ್ಟಣಗಳಲ್ಲಿ ಟಿವಿಗಳನ್ನು ಹೊರಗೆ ಇಟ್ಟು ಎಲ್ಲರೂ ಸೇರಿ ಅಣ್ಣಾವ್ರ ಸಿನಿಮಾವನ್ನು ನೋಡಿ ಸಂಭ್ರಮಿಸಲಾಗಿತ್ತು. 'ರಾಜ್‌ ಕುಮಾರ್ ಅವರು ನಮ್ಮ ಊರಿಗೆ ಬಂದಿದ್ದಾರೆ' ಎಂದು ಹಾರಗಳನ್ನು ಹಾಕಿ, ಆರತಿ ಮಾಡಿ ಜನ ಸಂಭ್ರಮಿಸಿದ್ದರು ಅಂದು.

  1991 ರಲ್ಲಿ ಚಂದನ ಟಿವಿ ಪ್ರಸಾರವಾಯಿತು

  1991 ರಲ್ಲಿ ಚಂದನ ಟಿವಿ ಪ್ರಸಾರವಾಯಿತು

  ಆ ನಂತರ ಕನ್ನಡಿಗರಿಗಾಗಿಯೇ ಡಿಡಿ ಚಂದನ ಚಾನೆಲ್‌ ಅನ್ನು 1991 ರ ಆಗಸ್ಟ್ 15ರಂದು ಪ್ರಸಾರ ಮಾಡಲಾಯಿತು. ಆ ನಂತರ ಪ್ರತಿ ವಾರ ರಾಜ್‌ಕುಮಾರ್ ಸಿನಿಮಾಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳನ್ನು ಕನ್ನಡಿಗರು ನೋಡುವಂತಾಯಿತು. ಕನ್ನಡದಲ್ಲಿಯೇ ವಾರ್ತೆ ಕೇಳುವ,ಇತರೆ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಪ್ರಾಪ್ತಿಯಾಯಿತು.

  ಚಂದನ ಖ್ಯಾತಿಗಳಿಸಲು ಅಣ್ಣಾವ್ರ ಸಿನಿಮಾಗಳ ನೆರವು

  ಚಂದನ ಖ್ಯಾತಿಗಳಿಸಲು ಅಣ್ಣಾವ್ರ ಸಿನಿಮಾಗಳ ನೆರವು

  ನಂತರದ ದಿನಗಳಲ್ಲಿ ಡಿಡಿ ಚಂದನ ಬಹುಬೇಗ ಖ್ಯಾತಿಗಳಿಸಲು ಡಾ.ರಾಜ್‌ಕುಮಾರ್ ಅವರು ಹಾಗೂ ಅವರ ಸಿನಿಮಾಗಳು ಪ್ರಮುಖ ಪಾತ್ರವಹಿಸಿದವು. ಅದೇ ಸಮಯದಲ್ಲಿ ಸ್ಟಾರ್ ಮತ್ತು ಸನ್ ನೆಟ್‌ವರ್ಕ್‌ಗಳು ಭಾರತದಲ್ಲಿ ಖಾಸಗಿ ಚಾನೆಲ್‌ ಆರಂಭಿಸಿ ಬಹುಬೇಗ ಖ್ಯಾತಿ ಗಳಿಸಿದವು.

  English summary
  Dr Rajkumar Birthday Special: First ever Kannada movie to telecast on Television is Dr Rajkumar's Shankar Guru. Movie telecasted on the year of 1981, November 01.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X