»   » ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಅಣ್ಣಾವ್ರ ವಿಶೇಷ

ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಅಣ್ಣಾವ್ರ ವಿಶೇಷ

Posted By:
Subscribe to Filmibeat Kannada

ಅಭಿಮಾನಿ ದೇವರುಗಳೆಂದೇ ಆರಾಧಿಸುತ್ತಿದ್ದ ಪದ್ಮಭೂಷಣ, ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜಕುಮಾರ್ ಅವರನ್ನು ಏಪ್ರಿಲ್ ತಿಂಗಳು ಬಂತೆಂದರೆ ಮತ್ತಷ್ಟು-ಮಗದಷ್ಟು ನೆನಪುಗಳ ಬುತ್ತಿ ಬಿಚ್ಚಿಡುವ ಕಾಲ ನಮ್ಮ ನಾಡಿನ ಜನತೆಗೆ.

ಕನ್ನಡ ಚಲನಚಿತ್ರ ರಂಗವನ್ನು ಉತ್ತುಂಗಕ್ಕೇರಿಸಿದ ಮೇರುನಟನ ಸ್ಮರಣಾರ್ಥ ಸುವರ್ಣವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಐಡಿಯಾ ಸ್ಟಾರ್ ಸಿಂಗರ್‍ ಒಂದು ಸಂಚಿಕೆಯನ್ನು ಡಾ.ರಾಜ್ ಅವರಿಗೆಂದು ಅರ್ಪಿಸುತ್ತಿದೆ. ಈ ವಿಶೇಷ ಸಂಚಿಕೆ ಇದೇ ಏಪ್ರಿಲ್ 6ರ ಭಾನುವಾರದಂದು ರಾತ್ರಿ 9:00 ಗಂಟೆಗೆ ಪ್ರಸಾರವಾಗುವುದು.

ರಾಜ್ ರನ್ನು ದೊಡ್ಡ ಮಾಮ ಎನ್ನುತ್ತಿದ್ದ ಶ್ರೀಮುರಳಿ

'ಸ್ಟಾರ್ ಸಿಂಗರ್' ಕಾರ್ಯಕ್ರಮದ ಡಾ .ರಾಜ್ ವಿಶೇಷ ಸಂಚಿಕೆಗೆ ಅತಿಥಿಯಾಗಿ ಆಗಮಿಸಿ ಅವರೊಂದಿಗೆ ತಮ್ಮ ಒಡನಾಟ, ಅನುಭವ ಹೇಗಿದ್ದವು ಎಂದು ಹಂಚಿಕೊಂಡವರು ನಟ ಶ್ರೀ ಮುರುಳಿ. ಕನ್ನಡ ಚಿತ್ರರಂಗಕ್ಕೆ ದೊಡ್ಡಣ್ಣನಂತಿದ್ದ ರಾಜ್ ರನ್ನು ದೊಡ್ಡ ಮಾಮಾ ಎಂದೇ ಕರೆಯುತ್ತಿದ್ದರಂತೆ!

ರಾಜ್ ರೊಂದಿಗಿನ ಶ್ರೀಮುರಳಿ ಒಡನಾಟ

ಈ ದೊಡ್ಡ ಮಾಮಾನೊಂದಿಗೆ ಮಾತು, ಊಟ, ವಿಚಾರ - ವಿನಿಮಯ ಮೊದಲಾದ ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಮೆಲುಕು ಹಾಕುತ್ತಾ ಅವರನ್ನು ಕನ್ನಡ ಚಿತ್ರರಂಗದ ಸಂಸ್ಥೆ [ಇನ್ಸ್ ಟಿಟ್ಯೂಟ್] ಎಂದು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಅತ್ಯುತ್ತಮ ಸಿಂಗರ್ ಗೆ ಗಿಟಾರ್ ಉಡುಗೊರೆ

ಅಷ್ಟೇ ಅಲ್ಲದೇ ಈ ವಿಶೇಷ ಸಂಚಿಕೆಯಲ್ಲಿ ಹಾಡುವ ಸ್ಟಾರ್ ಸಿಂಗರ್ ಟಾಪ್ 8 ಗಾಯಕರಲ್ಲಿ ಅತ್ಯುತ್ತಮ ಗಾಯಕರಿಗೆ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಂದ ಒಂದು ಗಿಟಾರ್ ಪ್ರಶಸ್ತಿಯಾಗಿ ನೀಡಲಾಗುತ್ತದೆ.

ಡಾ.ರಾಜ್ ಮತ್ತು ಕಲ್ಪನಾ ವೇಷದಲ್ಲಿ ನಿರೂಪಣೆ

ಈ ಸಂಚಿಕೆಯಲ್ಲಿ ನಮ್ಮ ಕಾರ್ಯಕ್ರಮದ ಸ್ಪರ್ಧಿಗಳು ರಾಜಕುಮಾರ್ ಹಾಡುಗಳನ್ನೇ ಆಯ್ಕೆ ಮಾಡಿ ಹಾಡುವುದು ಒಂದು ವಿಶೇಷವಾದರೆ, ಡಾ.ರಾಜ್ ಮತ್ತು ಕಲ್ಪನಾ ವೇಷದಲ್ಲಿ ನಮ್ಮ ನಿರೂಪಕರು ನಿರೂಪಣೆ ಮಾಡಲಿದ್ದಾರೆ. ಇಂತಹ ವಿಶೇಷ ಸಂಚಿಕೆಯನ್ನು ತಪ್ಪದೇ ನೋಡಿ, ಭಾನುವಾರ (ಏ.6) ಸಂಜೆ 9 ಗಂಟೆಗೆ.

English summary
Suvarna Channel popular music reality show Idea Star Singer will launch Dr. Rajkumar Special on April 6th, 2014. The special episode will telecast on April 6 th Sunday 9PM. Silent Star Srimurali (Latest movie Ugramm) shares his relationship with Dr Rajkumar on this special episode.
Please Wait while comments are loading...