For Quick Alerts
  ALLOW NOTIFICATIONS  
  For Daily Alerts

  ಕಿಡಿಗೇಡಿಗಳು ಕಡ್ಡಿಗೀರಿದ್ದಕ್ಕೆ, ಕಪಾಲಿ ಥಿಯೇಟರ್ ಮುಂದೆ ವಿಷ್ಣುಗೆ ಕಪಾಳಮೋಕ್ಷ.!

  By Harshitha
  |

  ಕಾಕನಕೋಟೆಯ ಮಸಾಲೆ ಬೆಟ್ಟದಲ್ಲಿ... 'ಗಂಧದ ಗುಡಿ' ಚಿತ್ರದ ಚಿತ್ರೀಕರಣ ಸಮಯದಲ್ಲಿ ಅಚಾತುರ್ಯದಿಂದ ನಡೆದ ಒಂದು ಘಟನೆ ಡಾ.ವಿಷ್ಣುವರ್ಧನ್ ರವರ ವ್ಯಕ್ತಿತ್ವಕ್ಕೆ ಕಳಂಕ ಹೊರಿಸಿತು.

  ಈ ಘಟನೆಯಿಂದ ಶುರುವಾದ ವಿವಾದದಿಂದಾಗಿ ಡಾ.ವಿಷ್ಣುವರ್ಧನ್ ಅನುಭವಿಸಿದ ನೋವು ಯಾವ ಶತ್ರುಗೂ ಬೇಡ. 'ಸಾಹಸ ಸಿಂಹ'ನಿಗೆ ಕಿಡಿಗೇಡಿಗಳು ಕಾಟ ಕೊಟ್ರು. 'ಅಭಿನಯ ಭಾರ್ಗವ'ನ ಮನೆಗೆ ಕಲ್ಲು ತೂರಿದ್ರು. 'ಹೃದಯವಂತ'ನಿಗೆ ಕಪಾಳಮೋಕ್ಷ ಮಾಡಿದ್ರು. ಮಾಡದ ತಪ್ಪಿಗೆ ಜೀವನ ಪರ್ಯಂತ ನೋವು ಅನುಭವಿಸಿದ್ರು ವಿಷ್ಣುವರ್ಧನ್.['ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.!]

  ಈ ವಿಚಾರವನ್ನ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟವರು ಡಾ.ವಿಷ್ಣುವರ್ಧನ್ ಆಪ್ತ, ಹಿರಿಯ ನಿರ್ದೇಶಕ ಭಾರ್ಗವ. ಮುಂದೆ ಓದಿ....

  ಸ್ವಂತ ಮನೆ ಬಿಟ್ಟು ಚೆನ್ನೈಗೆ ತೆರಳಿದರು

  ಸ್ವಂತ ಮನೆ ಬಿಟ್ಟು ಚೆನ್ನೈಗೆ ತೆರಳಿದರು

  ''ಅವತ್ತು ದುರಭಿಮಾನಿಗಳ ಸಂಖ್ಯೆ ಜಾಸ್ತಿ ಇತ್ತು. ವಿಷ್ಣುವರ್ಧನ್ ಎಷ್ಟು ನೋವು ಅನುಭವಿಸಿದ್ದಾರೆ ಅಂತ ನನಗೆ ಗೊತ್ತು. ಈ ತೊಂದರೆಯಿಂದಾಗಿ ಪಾಪ ಅವರು ತಮ್ಮ ಸ್ವಂತ ಮನೆಯನ್ನ ಬಿಟ್ಟು ಚೆನ್ನೈಗೆ ಹೋದರು. ಚಿತ್ರೀಕರಣ ಇರುವಾಗ ಮಾತ್ರ ಚೆನ್ನೈನಿಂದ ಬಂದು ಅಶೋಕ ಹೋಟೆಲ್ ನಲ್ಲಿ ಇರುತ್ತಿದ್ದರು'' - ಭಾರ್ಗವ, ಹಿರಿಯ ನಿರ್ದೇಶಕ [ಡಾ.ರಾಜ್-ಡಾ.ವಿಷ್ಣು ನಡುವೆ ಇತ್ತೇ ದ್ವೇಷ.? ರಟ್ಟಾಯ್ತು ಅನೇಕರಿಗೆ ತಿಳಿಯದ ರಹಸ್ಯ.!]

   ವಿಷ್ಣುವರ್ಧನ್ ಗೆ ಕಪಾಳಮೋಕ್ಷ

  ವಿಷ್ಣುವರ್ಧನ್ ಗೆ ಕಪಾಳಮೋಕ್ಷ

  ''ಒಂದು ದಿನ ವಿಷ್ಣುವರ್ಧನ್, ಕಪಾಲಿ ಥಿಯೇಟರ್ ಹತ್ತಿರ ಕಾರ್ ನಲ್ಲಿ ಹೋಗುವಾಗ, ಕಾರ್ ನ ನಿಲ್ಲಿಸಿ, ಕಾರಿನಿಂದ ಕೆಳಗೆ ಇಳಿಸಿ, ಜನ ಕಪಾಳಕ್ಕೆ ಹೊಡೆದಿದ್ದಾರೆ. ಇಷ್ಟೆಲ್ಲ ನೋವು ಅನುಭವಿಸಿದ್ದಾರೆ'' - ಭಾರ್ಗವ, ಹಿರಿಯ ನಿರ್ದೇಶಕ

  ವಿಷ್ಣುಗಾಗಿ ಹಾಡಿದ ಡಾ.ರಾಜ್

  ವಿಷ್ಣುಗಾಗಿ ಹಾಡಿದ ಡಾ.ರಾಜ್

  ''ವರ್ಷಗಳ ನಂತರ ಎಲ್ಲವೂ ತಣ್ಣಗೆ ಆಯ್ತು. ಎಲ್ಲರೂ ಒಂದಾದರು. ಡಾ.ರಾಜ್ ಕುಮಾರ್ ರವರು ವಿಷ್ಣುವರ್ಧನ್ ರವರ 'ಜನನಿ ಜನ್ಮಭೂಮಿ' ಚಿತ್ರಕ್ಕೆ ಬಂದು ಹಾಡಿದ್ದಾರೆ. ಅದು ವಿಷ್ಣುವರ್ಧನ್ ಗಾಗಿ ರಾಜ್ ಕುಮಾರ್ ಹಾಡಿದ ಹಾಡು'' - ಭಾರ್ಗವ, ಹಿರಿಯ ನಿರ್ದೇಶಕ

  ವಿಷ್ಣುವರ್ಧನ್ ಗೆ ಮಾತ್ರ ತೊಂದರೆ

  ವಿಷ್ಣುವರ್ಧನ್ ಗೆ ಮಾತ್ರ ತೊಂದರೆ

  ''ಕಾಲಕ್ರಮೇಣ ಎಲ್ಲರೂ ಒಂದಾದರು. ಆದ್ರೆ ಆ ಘಟನೆ ನಡೆದಾಗ ಏನು ಮಾಡಬಹುದಾಗಿತ್ತು ಎಂದರೆ, ಪತ್ರಿಕಾ ಮಿತ್ರರನ್ನ ಕರೆಯಿಸಿ, ಒಂದೇ ವೇದಿಕೆ ಮೇಲೆ ಇಬ್ಬರೂ ಹೇಳಿಕೆ ಕೊಡಬಹುದಿತ್ತು. ಹಾಗೆ ಮಾಡಿದಿದ್ರೆ, ಇಷ್ಟು ಬೆಳೆಯುತ್ತಿರಲಿಲ್ಲ. ಆದ್ರೆ, ಹಾಗೆ ಮಾಡಲಿಲ್ಲ. ಅದನ್ನ ಅಲ್ಲಿಗೆ ಬಿಟ್ಟುಬಿಟ್ಟರು. ಮಧ್ಯೆ ಇದ್ದವರು ಪೆಟ್ರೋಲ್ ಹಾಕಿದರು, ಕಡ್ಡಿ ಗೀರಿದರು, ಬಾಂಬ್ ಹಾಕಿದರು. ಇದರಿಂದ ತೊಂದರೆ ಆಗಿದ್ದು ವಿಷ್ಣುವರ್ಧನ್ ಗೆ ಮಾತ್ರ'' - ಭಾರ್ಗವ, ಹಿರಿಯ ನಿರ್ದೇಶಕ

  English summary
  Dr.Vishnuvardhan was slapped in front of Kapali Theater after 'Gandhadagudi' incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X