»   » ನಟಿ ಭಾರತಿ ಕುರಿತು ಡಾ.ವಿಷ್ಣುವರ್ಧನ್ ತುಂಬಾ ಪೊಸ್ಸೆಸ್ಸಿವ್ ಆಗಿದ್ರಂತೆ.!

ನಟಿ ಭಾರತಿ ಕುರಿತು ಡಾ.ವಿಷ್ಣುವರ್ಧನ್ ತುಂಬಾ ಪೊಸ್ಸೆಸ್ಸಿವ್ ಆಗಿದ್ರಂತೆ.!

Posted By:
Subscribe to Filmibeat Kannada

ಹೇಳಿ ಕೇಳಿ... ನಟಿ ಭಾರತಿ 60 ರ ದಶಕದ ಜನಪ್ರಿಯ ನಟಿ.. ಹರೆಯದ ಹುಡುಗರ ಕನಸಿನ ರಾಣಿ.. ಅದೆಷ್ಟೋ ಯುವಕರಿಗೆ ಸ್ವಪ್ನ ಸುಂದರಿ ಆಗಿದ್ದ ಭಾರತಿ, ವಿಷ್ಣುವರ್ಧನ್ ರವರ ಪಾಲಿಗೂ ಮನದರಸಿ.

ನಟಿ ಭಾರತಿ ರವರ ಅಭಿನಯಕ್ಕೆ ಮನಸೋತು.. ಅವರ ಅಭಿಮಾನಿಯಾಗಿ.. ಅವರ ಎಲ್ಲ ಚಿತ್ರಗಳನ್ನು ತಪ್ಪದೇ ನೋಡುತ್ತಿದ್ದ ವಿಷ್ಣುವರ್ಧನ್, ಅದೇ ಭಾರತಿ ರವರನ್ನ ಪ್ರೀತಿಸಿ, ಮದುವೆ ಆದ ಬಳಿಕ ಅದನ್ನೇ ಮುಂದುವರಿಸಲಿಲ್ಲ. ಕಾರಣ, ಭಾರತಿ ಕುರಿತು ವಿಷ್ಣು ತುಂಬಾ ಪೊಸ್ಸೆಸ್ಸಿವ್ ಆಗಿದ್ರಂತೆ.! ['ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಲ್ಲ' ಎಂದು ಚಿತ್ರವನ್ನೇ ಕ್ಯಾನ್ಸಲ್ ಮಾಡಿದ್ರಂತೆ ಭಾರತಿ.!]

Dr.Vishnuvardhan was very possessive says wife Actress Bharathi

ಹೀಗಂತ ಹೇಳಿದವರು ಬೇರೆ ಯಾರೂ ಅಲ್ಲ... ಸ್ವತಃ ನಟಿ ಭಾರತಿ ವಿಷ್ಣುವರ್ಧನ್. ಅದು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ.!

''ಮದುವೆ ಮುಂಚೆ ನನ್ನ ಎಲ್ಲಾ ಸಿನಿಮಾಗಳನ್ನ ಅವರು (ವಿಷ್ಣುವರ್ಧನ್) ನೋಡುತ್ತಿದ್ದರು. ಆದ್ರೆ ಮದುವೆ ಆದ್ಮೇಲೆ ಅವರು (ವಿಷ್ಣುವರ್ಧನ್) ನನ್ನ ಜೊತೆ ನನ್ನ ಸಿನಿಮಾ ನೋಡುತ್ತಿರಲಿಲ್ಲ. ಅವರು ತುಂಬಾ ಪೊಸ್ಸೆಸ್ಸಿವ್ ಆಗಿದ್ರು. ನನ್ನ ಮುಂದೆ ನನ್ನ ಹೆಂಡತಿ ಬೇರೆಯವರ ಜೊತೆ ಆಕ್ಟ್ ಮಾಡೋದು ಇಷ್ಟ ಆಗಲ್ಲ ಅಂತಿದ್ರು'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಭಾರತಿ ಹೇಳಿದರು. [ಡಾ.ವಿಷ್ಣುವರ್ಧನ್-ಭಾರತಿ 'ಪ್ರೇಮದ ಕಾದಂಬರಿ' ಶುರು ಆಗಿದ್ದು ಹೇಗೆ.?]

''ಮದುವೆ ಆದ್ಮೇಲೆ ನಾನು 20 ಸಿನಿಮಾಗಳನ್ನ ಕ್ಯಾನ್ಸಲ್ ಮಾಡಿದೆ. ಸಂಸಾರದಲ್ಲಿ ನಾನು ಎಲ್ಲರ ಜೊತೆ ಅಡ್ಜಸ್ಟ್ ಆಗಬೇಕಿತ್ತು'' ಎಂದು ತಮ್ಮ ಹಳೇ ನೆನಪುಗಳನ್ನ ನಟಿ ಭಾರತಿ ವಿಷ್ಣುವರ್ಧನ್ ಮೆಲುಕು ಹಾಕಿದರು. [ವಿಷ್ಣು-ಭಾರತಿ ಮದುವೆ ದಿನ ದೊಡ್ಡ ಗಲಾಟೆ: ಆರತಕ್ಷತೆಯಲ್ಲಿ ವರನ ಉಂಗುರವೇ ಕಳುವು.!]

ಪ್ರೀತಿಸಿ, ಹಿರಿಯರನ್ನ ಒಪ್ಪಿಸಿ, ಮದುವೆ ಆದ ಡಾ.ವಿಷ್ಣುವರ್ಧನ್ ಮತ್ತು ಭಾರತಿ ದಂಪತಿ ಕನ್ನಡ ಚಿತ್ರರಂಗದಲ್ಲಿಯೇ ಮಾದರಿ ಜೋಡಿ ಅಂದ್ರೆ ಖಂಡಿತ ತಪ್ಪಾಗುವುದಿಲ್ಲ.

English summary
''Kannada Actor Late Dr.Vishnuvardhan was very possessive about me'' says Wife Actress Bharathi in Zee Kannada's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada