ಡ್ರಾಮಾ ಜ್ಯೂನಿಯರ್ಸ್ ವಿನ್ನರ್ಸ್: ಪುಟ್ಟರಾಜು ಹಾಗೂ ಚಿತ್ರಾಲಿ
ಜೀ ಟಿವಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಡ್ರಾಮಾ ಜ್ಯೂನಿಯರ್ಸ್' ಗ್ರ್ಯಾಂಡ್ ಫಿನಾಲೆಯಲ್ಲಿ ಗದಗಿನ ಪುಟ್ಟರಾಜು ಹಾಗೂ ಮಂಗಳೂರಿನ ಚಿತ್ರಾಲಿ ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಭಾನುವಾರ ಸಂಜೆ ಗದಗ್ ನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಪುಟ್ಟರಾಜು ಹಾಗೂ ಚಿತ್ರಾಲಿರನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು. ಮಹೇಂದ್ರ ಮೊದಲ ರನ್ನರ್ ಅಪ್ ಆಗಿದ್ದರೆ, ಅಮೋಘಾ ಎರಡನೇ ರನ್ನರ್ ಅಪ್ ಆಗಿದ್ದಾರೆ. ವಿಜೇತರ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಹಾಕಿಲ್ಲ.

ಫೈನಲ್ ನಲ್ಲಿ ಯಾರು ಯಾರಿದ್ದರು?: ಅಚಿಂತ್ಯಾ, ತುಷಾರ್, ಪುಟ್ಟರಾಜು, ಚಿತ್ರಾಲಿ, ಮಹೇಂದ್ರ, ರೇವತಿ ಹಾಗೂ ತೇಜಸ್ವಿನಿ ಅವರು ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಿದ್ದರು. ಪುಟ್ಟರಾಜು ಹಾಗೂ ಅಚಿಂತ್ಯಾ ಜನಪ್ರಿಯ ಸ್ಪರ್ಧಿಗಳಾಗಿದ್ದರು.
ರಮೇಶ್ ಅರವಿಂದ್ ನಿರೂಪಣೆಯ ಜನಪ್ರಿಯ ಟಾಕ್ ಶೋ 'ವೀಕೆಂಡ್ ವಿಥ್ ರಮೇಶ್' ಶೋ ಮುಗಿದ ಬಳಿಕ ಏಪ್ರಿಲ್ 30ರಿಂದ ಡ್ರಾಮಾ ಜ್ಯೂನಿಯರ್ಸ್ ಆರಂಭವಾಗಿತ್ತು. ಮಾಸ್ಟರ್ ಆನಂದ್ ಕಾರ್ಯಕ್ರಮದ ನಿರೂಪಣೆ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಜಡ್ಜ್ ಗಳಾಗಿ ಟಿಎನ್ ಸೀತಾರಾಮ್, ಹಿರಿಯ ಕಲಾವಿದೆ ಲಕ್ಷ್ಮಿ ಹಾಗೂ ನಟ ವಿಜಯ್ ರಾಘವೇಂದ್ರ ಅವರು ಕಾಣಿಸಿಕೊಂಡಿದ್ದರು.


Click it and Unblock the Notifications











