Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಬಂದ್ರು 'ಡ್ರಾಮಾ ಜ್ಯೂನಿಯರ್ಸ್', ಇನ್ಮುಂದೆ ಮಕ್ಕಳದ್ದೇ ಹವಾ!
ಪುಟ್ಟ ಮಕ್ಕಳ ಪಟಪಟ ಮಾತು, ಮುಗ್ಧತೆ, ಅವರಲ್ಲಿರುವ ಆಗಾಧವಾದ ಪ್ರತಿಭೆ, ದೊಡ್ಡವರನ್ನೂ ನಾಚಿಸುವ ಅವರ ನೆನಪಿನ ಶಕ್ತಿ, ಅವರ ಸಮಯೋಚಿತ ವಾಕ್ಚತುರತೆ ಇವೆಲ್ಲವನ್ನ ಒಳಗೊಂಡಿರುವ 'ಡ್ರಾಮಾ ಜೂನಿಯರ್ಸ್' ಮತ್ತೆ ಬರುತ್ತಿದೆ.
ಹೌದು, ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಮತ್ತು ಯಶಸ್ಸು ಕಂಡ ಕಾರ್ಯಕ್ರಮಗಳಲ್ಲಿ ಒಂದಾದ 'ಡ್ರಾಮಾ ಜ್ಯೂನಿಯರ್ಸ್' ಎರಡನೇ ಆವೃತ್ತಿ ಶುರುವಾಗುತ್ತಿದೆ. ಹೊಸ ಹೊಸ ಮಕ್ಕಳ ಜೊತೆಯಲ್ಲಿ, ಹೊಸ ಹೊಸ ಪ್ರತಿಭೆಗಳನ್ನ ಪರಿಚಯಸುವ ಮನರಂಜನೆಯ ಕಾರ್ಯಕ್ರಮ ಈ ವಾರದಿಂದ ಶುರುವಾಗುತ್ತಿದೆ.
ಹಾಗಿದ್ರೆ, ಎರಡನೇ ಆವೃತ್ತಿಯಲ್ಲಿ 'ಡ್ರಾಮಾ ಜೂನಿಯರ್ಸ್' ಹೇಗಿರುತ್ತೆ? ಯಾವೆಲ್ಲಾ ವಿಶೇಷತೆಗಳನ್ನ ಒಳಗೊಂಡಿರುತ್ತೆ ಎಂಬುದನ್ನ ಮುಂದೆ ಓದಿ......

ತ್ರಿಮೂರ್ತಿ ತೀರ್ಪುಗಾರರು
ಹಿರಿಯ ನಟಿ ಜೂಲಿ ಲಕ್ಷ್ಮಿ, ನಿರ್ದೇಶಕ ಟಿ.ಎನ್. ಸೀತಾರಾಮ್ ಹಾಗೂ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಕಾರ್ಯಕ್ರಮವನ್ನು ಲವಲವಿಕೆಯಿಂದ ನಿರೂಪಿಸುವ ಮಾಸ್ಟರ್ ಆನಂದ್ ಮತ್ತೆ 'ಡ್ರಾಮಾ ಜೂನಿಯರ್ಸ್-2'ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

8 ಕೇಂದ್ರಗಳಲ್ಲಿ ಆಡಿಷನ್ ಮಾಡಲಾಗಿತ್ತು.
ಡ್ರಾಮಾ ಜೂನಿಯರ್ಸ್ 2ನೇ ಸೀಸನ್ ಗೆ ಕರ್ನಾಟಕ ರಾಜ್ಯದ ಎಂಟು ಮುಖ್ಯ ಜಿಲ್ಲಾ ಕೇಂದ್ರಗಳಲ್ಲಿ ಆಡಿಷನ್ ಮಾಡಲಾಯಿತು. ಮಂಗಳೂರು, ಶಿವಮೊಗ್ಗ, ವಿಜಾಪುರ, ಹುಬ್ಬಳ್ಳಿ, ರಾಯಚೂರು, ಚಿತ್ರದುರ್ಗ, ಮೈಸೂರು ಮತ್ತು ಬೆಂಗಳೂರಿನಲ್ಲಿ ಆಡಿಶನ್ ಏರ್ಪಡಿಸಲಾಗಿತ್ತು.

ಆಡಿಷನ್ ನಲ್ಲಿ 15 ಸಾವಿರ ಮಕ್ಕಳು ಭಾಗಿ
'ಡ್ರಾಮಾ ಜೂನಿಯರ್ಸ್' ನ ಎರಡನೇ ಅವತರಣಿಕೆ ಆಡಿಷನ್ ನಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅಂತಿಮವಾಗಿ ಮೂವತ್ತು ಅತ್ಯದ್ಭುತ ಪ್ರತಿಭೆಗಳನ್ನು ಹೆಕ್ಕಿ ತರಲಾಗಿದೆ. ಇವರಲ್ಲಿ ಮೆಗಾ ಆಡಿಷನ್ ಮೂಲಕ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತೆ.

ಜುಲೈ 22 ರಿಂದ ಶುರು
ಜುಲೈ 22 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಜೀ-ಕನ್ನಡ ವಾಹಿನಿಯಲ್ಲಿ 'ಡ್ರಾಮ ಜೂನಿಯರ್ಸ್-2' ಪ್ರಸಾರವಾಗಲಿದೆ.

ಮೊದಲ ಆವೃತ್ತಿಯ ಮಕ್ಕಳು ಫುಲ್ ಬ್ಯುಸಿ
'ಡ್ರಾಮಾ ಜೂನಿಯರ್ಸ್' ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದ ಬಹುತೇಕ ಮಕ್ಕಳು ಇಂದು ಸ್ಟಾರ್‌ಗಳಾಗಿದ್ದಾರೆ. ರೇವತಿ ರಾಜ್ಯ ಪ್ರಶಸ್ತಿ ವಿಜೇತಳಾಗಿ ಡ್ರಾಮಾ ವೇದಿಕೆಗೆ ಗೌರವ ತಂದು ಕೊಟ್ಟಿದ್ದಾಳೆ. ಮತ್ತೊಬ್ಬ ಪ್ರತಿಭೆ ಅಮೋಘ 'ಕಾಫಿತೋಟ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಪುಟಾಣಿ ಚಿತ್ರಾಲಿ 'ವಾರಸ್ದಾರ' ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಡ್ರಾಮಾದ ಹತ್ತು ಮಕ್ಕಳು 'ಎಳೆಯರು ನಾವು ಗೆಳೆಯರು' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.