For Quick Alerts
  ALLOW NOTIFICATIONS  
  For Daily Alerts

  ಸುಜಾತಾರನ್ನು ಸೆರೆಮನೆಗೆ ಕಳುಹಿಸಿ ಕಣ್ಣೀರಾಕಿದ ದುನಿಯಾ ರಶ್ಮಿ

  |
  Bigg Boss Kannada 7 : Who is the best performer and who is the worst performer ?

  ಕಳಪೆ ಪ್ರದರ್ಶನ ನೀಡಿದ್ದಾರೆ ಎನ್ನುವ ಕಾರಣಕ್ಕೆ ಸುಜಾತಾ ಬಿಗ್ ಬಾಸ್ ಮನೆಯ ಸೆರೆಮನೆ ಸೇರಿದ್ದಾರೆ. ಆಪಲ್ ವಿಚಾರಕ್ಕೆ ಗಲಾಟೆ ಮಾಡಿದ್ದ ಸುಜಾತಾ ಈಗ ಬಿಗ್ ಮನೆಯ ಕಂಬಿ ಎಣಿಸುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ನಲ್ಲಿ ಸೆರೆಮನೆ ಸೇರಿದ ಮೊದಲ ಸ್ಪರ್ಧಿ ಸುಜಾತಾ ಆಗಿದ್ದಾರೆ. ಈ ವಾರ ದುನಿಯಾ ರಶ್ಮಿ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಈ ವಾರದ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿ ಮತ್ತು ಉತ್ತಮ ಸ್ಪರ್ಧಿ ಯಾರು ಎಂದು ಕ್ಯಾಪ್ಟನ್ ಆಗಿದ್ದ ರಶ್ಮಿ ಹೇಳಬೇಕಿತ್ತು.

  ರಶ್ಮಿ ಈ ವಾರದ ಉತ್ತಮ ಸ್ಪರ್ಧಿ ಭೂಮಿ ಶೆಟ್ಟಿಗೆ ನೀಡಿದರು. ಆದರೆ ಕಳಪೆ ಬೋರ್ಡ್ ಹಾಕಿಸಿಕೊಳ್ಳುವ ವಿಚಾರದಲ್ಲಿ ಗೊಂದಲ, ಗದ್ದಲ್ಲ ಏರ್ಪಟ್ಟಿತ್ತು. ಈ ವಿಚಾರವಾಗಿ ಪ್ರಿಯಾಂಕಾ ರೊಚ್ಚಿಗೆದ್ದಿದ್ದರು. ರಶ್ಮಿ ಈ ಹಿಂದೆಯು ಪ್ರಿಯಾಂಕಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಮತ್ತೀಗ ಪ್ರಿಯಾಂಕಾ ಹೆಸರನ್ನೆ ಹೇಳಿ ರಶ್ಮಿ ಪ್ರಿಯಾಂಕಾ ಕೆಂಗಣ್ಣಿಗೆ ಗುರಿಯಾಗಿದ್ದರು.

  'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!

  "ಈ ವಾರ ಟಾಸ್ಕ್ ಚೆನ್ನಾಗಿ ಮಾಡಿದ್ದೇನೆ. ಆದರೂ ಜೈಲಿಗೆ ಹೋಗಬೇಕಾ" ಎನ್ನುವುದು ಪ್ರಿಯಾಂಕಾ ವಾದ. ಕೊನೆಗೆ ರಶ್ಮಿ, ಸುಜಾತಾ ಅವರಿಗೆ ಕಳಪೆ ಬೋರ್ಡ್ ಹಾಕಿ ಜೈಲಿಗೆ ಕಳುಹಿಸಿದರು.

  ಅಡುಗೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಸುಜಾತಾ ಸೆರೆಮನೆಗೆ ಹೋಗಿದ್ದರಿಂದ ಅಡುಗೆ ಜವಾಬ್ದಾರಿಯನ್ನು ಪ್ರಿಯಾಂಕಾಗೆ ವಹಿಸಿದ್ದಾರೆ. ಇದೆಲ್ಲ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರಶ್ಮಿ ಕಣ್ಣೀರಾಕಲು ಶುರು ಮಾಡಿದರು. ಸುಜಾತಾ ಅವರನ್ನು ಜೈಲಿಗೆ ಕಳುಹಿಸಿದ ಬೇಸರದ ಜೊತೆಗೆ ಪ್ರಿಯಾಂಕಾ ನಡೆದುಕೊಂಡ ರೀತಿ ನೋಡಿ ರಶ್ಮಿ ಅತ್ತಿದ್ದಾರೆ.

  ನಿನ್ನೆಯ ಎಪಿಸೋಡ್ ನಲ್ಲಿ ಹೆಚ್ಚಾಗಿ ಜೈಲಿಗೆ ಹೋಗಿರುವ ವಿಚಾರವೆ ಎಲ್ಲರ ಬಾಯಲ್ಲು ಚರ್ಚೆಯಾಗುತ್ತಿತ್ತು. ಪ್ರಿಯಾಂಕಾ ಯಾವಾಗಲು ನಾನೆ ಟಾರ್ಗೆಟ್ ಆಗಬೇಕಾ ಎನ್ನುವುದು ಅವರ ಬೇಸರ. ಪ್ರಿಯಾಂಕಾ ಮನೆಯಲ್ಲಿ ಏನು ಕೆಲಸ ಮಾಡುವುದಿಲ್ಲ ಎನ್ನುವುದು ರಶ್ಮಿಯ ಮಾತು. ಎರಡೇ ವಾರದಲ್ಲಿ ಬಿಗ್ ಮನೆಯಲ್ಲಿ ಮನಸ್ತಾಪ, ಗಲಾಟೆ, ಕಿತ್ತಾಟ ತಾರಕಕ್ಕೇರಿದೆ. ಇನ್ನು ಮುಂದಿನ ದಿನಗಳಲ್ಲಿ ಬಿಗ್ ಮನೆ ಹೇಗೆ ರಂಗೇರಲಿದೆ ಎನ್ನುವುದು ಕಾದು ನೋಡಬೇಕು

  English summary
  Duniya Rashmi tears for Sujata being sent to jail in big boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X