twitter
    For Quick Alerts
    ALLOW NOTIFICATIONS  
    For Daily Alerts

    ಪ್ರಚಂಡ ಕುಳ್ಳ ದ್ವಾರಕೀಶ್ ಮೋಸಂಬಿ ಮಾರಿದ ಕಥೆ

    By Rajendra
    |

    ಸಾಧನೆಯ ಜುಟ್ಟು ಹಿಡಿಯಕ್ಕೆ ಸರ್ಕಸ್ ಮಾಡಲೇಬೇಕು. ಖುಷಿಯ ಕಳಸ ಹಿಡಿಯಲಿಕ್ಕೆ ದುಃಖದ ಮಂದಿರ ಒಡೆದು ಸಾಧನೆಯ ಮಂದಿರ ಕಟ್ಟಬೇಕು. ಅಂತಹ ಮಂದಿರದ ಶಿಲ್ಪಿ ಈ ಹೊತ್ತು ನಮ್ಮ ಜೊತೆ ಇದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಇವರು.

    ಅಣ್ಣನ ಆಸೆ ಪೂರೈಸಿದ್ದಿದ್ದರೆ ಊರಲ್ಲಿ ಯಾವುದಾದರೂ ಸಣ್ಣ ವ್ಯಾಪಾರನೋ, ಅಂಗಡಿನೋ ನೋಡಿಕೊಂಡು ಇರಬೇಕಾಗಿತ್ತು. ಅದೇ ಅಣ್ಣನ ಜೊತೆಗೆ ಜಗಳ ಆಡಿ ಮೈಸೂರಿನಿಂದ ಚೆನ್ನೈಗೆ ರೈಲು ಹತ್ತುತ್ತಾರೆ. ಓಡಿ ಹೋದವನ ಮುಂದೆ ಕನಸಿನ ಚಿತ್ರ ಬಿಟ್ಟು ಬೇರೇನು ಇರಲಿಲ್ಲ. ಅಂದು ಹಾಗೆ ಓಡಿ ಹೋದ ವಾಮನಮೂರ್ತಿ ಇಂದು ಕನ್ನಡ ಚಿತ್ರರಂಗದ ತ್ರಿವಿಕ್ರಮನಂತೆ ಬೆಳೆದಿದ್ದಾರೆ.

    ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ ಸಾಹಸಿ ಇವರು. ನೂರಾರು ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತಮ್ಮ ಜೀವನದ ಐವತ್ತೆರಡು ವರ್ಷಗಳನ್ನು ಚಿತ್ರರಂಗಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ.

    ಈ ಹೊತ್ತಿಗೂ ಪ್ರಚಂಡ ಕುಳ್ಳ ಎಂತಲೇ ನಮ್ಮೆಲ್ಲರಿಗೂ ಪರಿಚಯ. ನಮ್ಮೆಲ್ಲರ ಪ್ರೀತಿಯ ಕುಳ್ಳ ಶ್ರೀ ದ್ವಾರಕೀಶ್ ಅವರು ಎಂದು ದ್ವಾರ್ಕಿಶ್ ಬಗ್ಗೆ ಸಾಕಷ್ಟು ವಿಶದವಾಗಿ ಹೇಳಿದರು ರಮೇಶ್ ಅರವಿಂದ್. ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ ಅವರು.

    Dwarakish beginning days Weekend With Ramesh

    ಬಂಗ್ಲೆ ಶಾಮರಾವ್ ದ್ವಾರಕಾಥ್, ಹುಟ್ಟಿದ್ದು 19 ಆಗಸ್ಟ್ 1942, ಅಂಬುಜಾ ಅವರ ಧರ್ಮಪತ್ನಿ. ಸಂತೋಷ್, ಯೋಗೇಶ್, ಗಿರೀಶ್, ಸುಖೇಷ್ ಮತ್ತು ಅಭಿಲಾಷ್ ಐದು ಜನ ಗಂಡು ಮಕ್ಕಳು ಜೊತೆಗೆ ಐದು ಜನ ಮೊಮ್ಮಕ್ಕಳು.

    ಎಂಜಿಎಂ ಸಂಸ್ಥೆಯಲ್ಲಿ ಸಿಂಹ ಬರುತ್ತದೆ. ಅದೇ ರೀತಿ ಅದರಿಂದ ಸ್ಫೂರ್ತಿಗೊಂಡು ತಾವು ಕರ್ನಾಟಕದ ಮ್ಯಾಪ್ ಅದರಲ್ಲಿ ದ್ವಾರಕೀಶ್ ಎಂಬ ಸಿಂಹ ಗರ್ಜಿಸುವ ರೀತಿ ಲೋಗೋ ಮಾಡಿದೆ ಎಂದು ಅವರು "ದ್ವಾರಕೀಶ್ ಅರ್ಪಿಸುವ" ಲೋಗೋದ ರಹಸ್ಯ ಬಿಚ್ಚಿಟ್ಟರು.

    ಈಗ ತಮಗೆ 73 ವರ್ಷ ವಯಸ್ಸು. ಎಲ್ಲೋ ಮನೆಯಲ್ಲಿ ಕೂತಿದ್ದಾಗ ಈಗಲೂ ಬಾಲ್ಯದ ಕೆಲವು ಘಟನೆಗಳು ನೆನಪಿಗೆ ಬರುತ್ತವೆ. ಸ್ಟುಡೆಂಟ್ ಲೈಫ್ ಜ್ಞಾಪಕ ಬರುತ್ತದೆ. ಹೆಚ್ಚಾಗಿ ಸಿನಿಮಾಗಳು ಕಾಡುತ್ತವೆ. ಅವರ ಹುಣಸೂರಿನ ಮನೆ, ಸೋದರನ ಮಾವನ ಮಗಳು ರತ್ನ ನಾಗರಾಜು, ಅಣ್ಣ ನಾಗಾರ್ಜುನ್ ಅವರ ತುಂಟಾಟಗಳನ್ನು ವಿವರಿಸಿದರು. ಯಾವಾಗಲೂ ಶೋಕಿಯಿಂದ ಇರುತ್ತಿದ್ದ ಎಂದರು.

    ತಿರುಣಾನ್ ಅಯ್ಯಂಗಾರ್ ಅಂಥ ನಮಗೆ ಮೇಷ್ಟ್ರಿದ್ದರು ಅವರು ನಮ್ಮ ಬೆರಳುಗಳ ಸಂಧಿಯಲ್ಲಿ ಬೀಗದ ಕೈ ಇಟ್ಟು ಅಮುಕುತ್ತಿದ್ದರು. ಒಮ್ಮೆ ನನಗೆ ಹಾಗೆ ಮಾಡಲು ಹೋದಾಗ ನಾನು ಮೂರ್ಛೆ ಬಂದಂತೆ ಕೆಳಗೆ ಬಿದ್ದು ಒದ್ದಾಡಿದ್ದೆ. ಬಳಿಕ ಶಾಲೆಯಲ್ಲಿ ದೊಡ್ಡ ಗದ್ದಲವಾಗಿ ಹೆಡ್ ಮಾಷ್ಟ್ರು ಬಂದು ತಿರುಣಾನ್ ಅಯ್ಯಂಗಾರ್ ಮೇಷ್ಟ್ರಿಗೆ ಚೆನ್ನಾಗಿ ಬೆದಿದ್ದರು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ ಆಗಲೇ ತಾವು ಆಕ್ಟಿಂಗ್ ಮಾಡುತ್ತಿದ್ದಾಗಿ ಹೇಳಿದರು ದ್ವಾರಕೀಶ್.

    ನಿರ್ದೇಶಕ ಭಾರ್ಗವ್ ಅವರು ನನ್ನ ತಂಗಿ ಪರಿಮಳ ಅವರನ್ನು ಮದುವೆಯಾಗಿದ್ದಾರೆ. ಎಷ್ಟೋ ಮಂದಿ ತಿಳಿದುಕೊಂಡಂತೆ ನಾನು ಭಾರ್ಗವ ಅವರ ತಂಗಿಯನ್ನು ಮದುವೆಯಲ್ಲ, ಅವರು ನನ್ನ ತಂಗಿಯನ್ನು ಮದುವೆಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ನನ್ನ ಸ್ವಂತ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಚಿತ್ರರಂಗದಲ್ಲಿದ್ದ ಕಾರಣ ತಮಗೆ ಚಿತ್ರಗಳಲ್ಲಿ ಸುಲಭವಾಗಿ ಚಾನ್ಸ್ ಸಿಕ್ಕಿತು. ಜಾತ್ರೆಗಳಲ್ಲಿ ತಾವು ಮೋಸಂಬಿ ಮಾರಿದ್ದು, ಬಳಿಕ ಎಲ್ಲಾ ಜಾತ್ರೆಗಳಿಗೂ ತಮ್ಮನ್ನು ಮೋಸಂಬಿ ಮಾರಲು ಕಳುಹಿಸಿದ್ದನ್ನು ನೆನಪಿಸಿಕೊಂಡರು. ಬಣ್ಣದಲ್ಲೇನಿದೆಯೋ ಬೆಡಗು ಹಣ್ಣಿಗೆ ರುಚಿಯೇ ಮೆರುಗು ಯಾವುದೇ ತಗೊಳ್ಳಿ ಎರಡುವರೆ ಆಣಿ ಎರಡುವರೆ ಆಣಿ ಎಂದು ಮಾರಿದ್ದನ್ನು ನೆನಪಿಸಿಕೊಂಡರು. ಡಾನ್ಸ್ ಮಾಡಿ ತಾವು ಮೋಸಂಬಿಯನ್ನು ಸಾಣಿಕೆರೆ ಜಾತ್ರೆಯಲ್ಲಿ ಮಾರಿದ್ದನ್ನು ನೆನಪಿಸಿಕೊಂಡರು. [ದ್ವಾರಕೀಶ್ ಅವರ ವೃತ್ತಿಬದುಕಿನ ಮತ್ತೊಂದು ಸೀಕ್ರೆಟ್]

    English summary
    Veteran actor, director and producer Dwarakish shares his golden moments in Weekend with Ramesh chat show airs on Zee Kannada. Dwarakish college days, cinema career, his love, marriage, second marrige all episodes are brought out on the programme.
    Wednesday, September 10, 2014, 10:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X