»   » ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಒರಿಜಿನಲ್ ಹೆಸರು ನಿಮ್ಗೊತ್ತಾ.?

ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಒರಿಜಿನಲ್ ಹೆಸರು ನಿಮ್ಗೊತ್ತಾ.?

Posted By:
Subscribe to Filmibeat Kannada

ಕ್ರೇಜಿ ಸ್ಟಾರ್...ಕನಸುಗಾರ...ರವಿಮಾಮ...ಶೋ ಮ್ಯಾನ್...ರಣಧೀರ...ಇವೆಲ್ಲಾ ವಿ.ರವಿಚಂದ್ರನ್ ರವರಿಗೆ ಲಭಿಸಿರುವ ಅಭಿಮಾನದ ಬಿರುದುಗಳು.

ಛಲಬಿಡದೆ ಒಂದಲ್ಲಾ ಒಂದು ಭಿನ್ನ-ವಿಭಿನ್ನ ಸಿನಿಮಾ ಮಾಡುವ 'ಹಠವಾದಿ' ರವಿಚಂದ್ರನ್ ಬಗ್ಗೆ 'ಗೊತ್ತಿಲ್ಲ' ಎನ್ನುವಂಥದ್ದು ಏನೂ ಇರಲಿಕ್ಕಿಲ್ಲ ಅಂತ ನೀವು ಅಂದುಕೊಂಡಿರಬಹುದು. [ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಬೇಸರವಾಗಿದೆ.! ಅಸಲಿ ಕಾರಣ ಇಲ್ಲಿದೆ.!]

ತೆರೆದ ಪುಸ್ತಕದಂತೆ, ಯಾವುದೇ ವಿಷಯದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡುವ ರವಿಚಂದ್ರನ್, ಇದುವರೆಗೂ ತಮ್ಮ ಅಂತರಂಗದ ಶಕ್ತಿ ಹಾಗೂ ತಮ್ಮ ನಿಜವಾದ ಹೆಸರು ಬಗ್ಗೆ ಎಲ್ಲೂ ಉಲ್ಲೇಖ ಮಾಡಿರ್ಲಿಲ್ಲ.!

ಆ ರಹಸ್ಯ ಮೊನ್ನೆ ನಡೆದ 'ಕಲರ್ಸ್ ಸೂಪರ್' ವಾಹಿನಿಯ ಲಾಂಚ್ ಕಾರ್ಯಕ್ರಮದ ವೇಳೆ ಬಹಿರಂಗವಾಯ್ತು. ಮುಂದೆ ಓದಿ.....

ರವಿಚಂದ್ರನ್ ರವರ ನಿಜವಾದ ಹೆಸರೇನು.?

ರವಿಚಂದ್ರನ್ ರವರ ನಿಜವಾದ ಹೆಸರಿಗೂ, ಅವರ ಅಂತರಂಗದ ಶಕ್ತಿಗೂ, ದೇವರಿಗೂ, ಅವಿನಾಭಾವ ಸಂಬಂಧ ಇದೆ. ಅದರ ಬಗ್ಗೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ರವಿಚಂದ್ರನ್ ಮಾತನಾಡಿದ್ದಾರೆ. ಅದನ್ನ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ರವಿಚಂದ್ರನ್ ಒರಿಜಿನಲ್ ಹೆಸರು....

''ನನಗೆ ಈಶ್ವರ ಅಂದ್ರೆ ತುಂಬಾ ಇಷ್ಟ. ನನ್ನ ಒರಿಜಿನಲ್ ಹೆಸರು ಈಶ್ವರ ಅಂತ. ನನ್ನ ಜಾತಕದ ಪ್ರಕಾರ ನನ್ನ ತಾಯಿ, ತಂದೆ ಈಶ್ವರ ಅಂತ ಹೇಳೋರು. ನನಗೆ ಅದು ಗೊತ್ತಿರಲಿಲ್ಲ'' - ವಿ.ರವಿಚಂದ್ರನ್

ಈಶ್ವರ ತೆಗೆದುಕೊಂಡ ಮೇಲೆ....

''ಏಕಾಂಗಿ' ಆದ್ಮೇಲೆ ಎಲ್ಲೋ ಒಂದು ಕಡೆ ನಾನು ಮೊದಲ ಬಾರಿ ಈಶ್ವರ statue ತೆಗೆದುಕೊಂಡೆ. ಅದು ತೆಗೆದುಕೊಂಡ ಮೇಲೆ ನಾನು 'ಮಲ್ಲ' ಸಿನಿಮಾ ಮಾಡಿದ್ದು. 'ಮಲ್ಲ' ಪಾತ್ರ ಬರೆದಿದ್ದೂ ಆಗಲೇ. ಅಲ್ಲಿಂದ ನನಗೆ ಪಾಸಿಟೀವ್ ಎನರ್ಜಿ ಶುರು ಆಯ್ತು'' - ವಿ.ರವಿಚಂದ್ರನ್

'ಶಿವ' ನನಗೆ ಶಕ್ತಿ

''ಎಲ್ಲೇ ಹೋದರೂ, ಯಾವ ಜಾಗಕ್ಕೆ ಹೋದರೂ, ಒಂದು ಗದ್ದೆಗೆ ಇಳಿದರೂ, ನನಗೆ ಶಿವನ ದೇವಸ್ಥಾನ ಸಿಗೋದು. ಆ ತರಹ 'ಶಿವ' ನನಗೆ ಇಷ್ಟ ಆಗಲು ಶುರು ಆಯ್ತು. 'ಶಿವ' ಅಂದ್ರೆ ನನಗೆ strength ಇದ್ದ ಹಾಗೆ'' - ವಿ.ರವಿಚಂದ್ರನ್

ಶಿವನೇ ಕರೆಯಿಸಿಕೊಳ್ಳುತ್ತಾನೆ..?

''ನನಗೆ ಯಾವಾಗ ಬೇಕೋ, ಆಗ ನನ್ನನ್ನ 'ಶಿವ' ದೇವಸ್ಥಾನಕ್ಕೆ ಕರೆಯಿಸಿಕೊಳ್ಳುತ್ತಾನೆ'' - ವಿ.ರವಿಚಂದ್ರನ್

ನನಗೆ ಲಕ್ಕಿ ಅಂದ್ರೆ....

''ನನಗೆ ನನ್ನ ತಂದೆ ಆಶೀರ್ವಾದ ಲಕ್ಕಿ. ನನ್ನ ತಾಯಿ ನಗುನಗುತ್ತಾ ಇದ್ರೆ ಸಾಕು. ನಾನು ಎಲ್ಲೇ ಹೋಗ ಬೇಕಾದರೂ ನನ್ನ ತಾಯಿ ನನಗೆ ಬಂದು ನೀರು ಕೊಡಬೇಕು. ಅದೇ ನನಗೆ ಲಕ್ಕಿ. ನನ್ನ ತಾಯಿಗೆ ಹುಷಾರಿರಲಿಲ್ಲ. ಈಗ ನನ್ನ ಹುಟ್ಟುಹಬ್ಬ ಆದ್ಮೇಲೆ ನಾರ್ಮಲ್ ಆಗಿದ್ದಾರೆ'' - ವಿ.ರವಿಚಂದ್ರನ್

ಸೂಪರ್ ಮತ್ತು ಸ್ಟುಪಿಡ್..?

''ಸೂಪರ್' ಎನ್ನುವ ಕಾಮೆಂಟ್, 'ಸ್ಟುಪಿಡ್' ಎನ್ನುವ ಕಾಮೆಂಟ್...ಎರಡೂ ಸಿಕ್ಕಿದ್ದು 'ಅಪೂರ್ವ'ಗೆ. ನಾನು 'ಸೂಪರ್' ತೆಗೆದುಕೊಳ್ಳುವವನು.'' - ವಿ.ರವಿಚಂದ್ರನ್ [ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]

English summary
Do you know what is the original name of Kannada Actor Crazy Star V.Ravichandran.? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada