»   » ಈಟಿವಿ ಕನ್ನಡದಲ್ಲಿ ಅತೀಂದ್ರಿಯ ಶಕ್ತಿಗಳ ಆತ್ಮಕಥೆಗಳು

ಈಟಿವಿ ಕನ್ನಡದಲ್ಲಿ ಅತೀಂದ್ರಿಯ ಶಕ್ತಿಗಳ ಆತ್ಮಕಥೆಗಳು

Posted By:
Subscribe to Filmibeat Kannada
Aathmakathegalu on Etv Kannada
ಈಗಾಗಲೆ 'ಮನೆ ಮುಂದೆ ಮಹಾಲಕ್ಷ್ಮಿ' ಎಂಬ ರಿಯಾಲಿಟಿ ಶೋಗೆ ಚಾಲನೆ ನೀಡಿರುವ ಈಟಿವಿ ಕನ್ನಡ ವಾಹಿನಿ ಈಗ ಮತ್ತೊಂದು ವಿಭಿನ್ನ ಕಾರ್ಯಕ್ರಮಕ್ಕೆ ಅಣಿಯಾಗಿದೆ. ಈ ಕಾರ್ಯಕ್ರಮ ಅತೀಂದ್ರಿಯ ಶಕ್ತಿಗಳ ಅನುಭವಗಳನ್ನು ವೀಕ್ಷಕರ ಮುಂದೆ ತಂದಿಡಲಿದೆ.

ಈ ವಿಭಿನ್ನ ಕಾರ್ಯಕ್ರಮಕ್ಕೆ 'ಆತ್ಮಕಥೆಗಳು' ಎಂದು ಹೆಸರಿಡಲಾಗಿದೆ. ಕೆಲವರಿಗೆ ಈ ರೀತಿಯ ಅತೀಂದ್ರಿಯ ಶಕ್ತಿಗಳ ಅನುಭವ ಆಗಿರುತ್ತದೆ. ಅಂತಹವರು ತಮ್ಮ ಅನುಭವಗಳನ್ನು ಆತ್ಮೀಯರೊಂದಿಗೆ ಹಂಚಿಕೊಂಡಿರುತ್ತಾರೆ.

ನಮ್ಮ ಪಂಚೇಂದ್ರಿಯಗಳಿಗೆ ನಿಲುಕದ ಈ ರೀತಿಯ ಅತೀಂದ್ರಿಯ ಅನುಭಗಳೇ 'ಆತ್ಮಕಥೆಗಳು'. ಕೆಲವು ಅಪರೂಪದ ಅನುಭವಗಳನ್ನು ವೀಕ್ಷಕರ ಮುಂದಿಡಲಾಗುತ್ತದೆ. ಈ ರೀತಿಯ ಅನುಭವ ಪಡೆದವರು ತಮ್ಮ ಕಥೆಯನ್ನು ತಾವೇ ಹೇಳಿಕೊಳ್ಳುತ್ತಾ ಹೋಗುತ್ತಾರೆ ಎನ್ನುತ್ತಾರೆ ವಾಹಿನಿಯ ನಾನ್ ಫಿಕ್ಷನ್ ಹೆಡ್ ರಾಘವೇಂದ್ರ ಹುಣಸೂರು.

ಕಥೆಗಳಿಗೆ ದೃಶ್ಯರೂಪ ಕೊಟ್ಟು ವೀಕ್ಷಕರಿಗೆ ಭಿನ್ನ ಅನುಭವ ನೀಡಲಿದೆ ಕಾರ್ಯಕ್ರಮ. ಅನುಭವಿ ತಂತ್ರಜ್ಞ ದಾಸನ್ ನಿರ್ದೇಶನ ಆತ್ಮಕಥೆಗಳು ಕಾರ್ಯಕ್ರಮಕ್ಕಿದೆ. ಜನವರಿ 19ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 10ರಿಂದ 11ಕ್ಕೆ ಈ ಕಾರ್ಯಕ್ರವನ್ನು ವೀಕ್ಷಿಸಬಹುದು.

ಗೋಲ್ಡನ್ ನಂಬರ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಬಂದವರು ತಮ್ಮ ಅತೀಂದ್ರಿಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Etv Kannada channel all set to start new programme 'Aathmakathegalu', stories of clairvoyant from 19th January at 10pm to 11pm on every Saturday and Sunday. The programme brings mystic powers which had faced by various persons in real life situation.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada