»   » ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟು ಅಲ್ಪ ರಟ್ಟು

ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟು ಅಲ್ಪ ರಟ್ಟು

Posted By:
Subscribe to Filmibeat Kannada
Bigg Boss Sudeep
ಈಟಿವಿ ಕನ್ನಡ ವಾಹಿನಿ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಪ್ರಸಾರಕ್ಕೆ ಕ್ಷಣಗಣನೆ ಶುರುವಾಗಿದೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ 13 ಸ್ಪರ್ಧಿಗಳ ವಿವರಗಳನ್ನು ಈಟಿವಿ ವಾಹಿನಿ ಗೋಪ್ಯವಾಗಿಟ್ಟಿದೆ. ಆದರೂ ಕೆಲವು ಹೆಸರುಗಳು ಬಹಿರಂಗವಾಗಿವೆ.

ಮೂಲಗಳ ಪ್ರಕಾರ, ಕಿಚ್ಚ ಸುದೀಪ್ ನಡೆಸಿಕೊಡಲಿರುವ ಈ ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ ಹಾಗೂ ಧ್ರುವ ಶರ್ಮಾ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇವರ ಜೊತೆಗೆ ನಿಖಿತ ತುಕ್ರಲ್, ಪರುಲ್ ಯಾದವ್, ಪ್ರಿಯಾಮಣಿ, ಗಂಡಹೆಂಡತಿ ಸಂಜನಾ ಹೆಸರುಗಳು ಕೇಳಿಬಂದಿವೆ.

ಇದೇ ಮಾರ್ಚ್ 24ರಿಂದ ಈಟಿವಿ ಕನ್ನಡದಲ್ಲಿ ರಾತ್ರಿ 8ಕ್ಕೆ ಪ್ರತಿದಿನ ಬಿಗ್ ಬಾಸ್ ಶೋ ಕಣ್ತುಂಬಿಕೊಳ್ಳಬಹುದು. ಪುಣೆಯ ಲೋನಾವಾಲಾ ಸೆಟ್ಸ್ ನಲ್ಲಿ ನೂರು ದಿನಗಳ ಕಾಲ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಸೆಲೆಬ್ರಿಟಿಗಳ ನಡುವೆ ಬಿರುಸಿನ ಸ್ಪರ್ಧೆ ನಡೆಯಲಿದೆ.

ಕಡೆಯವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿದವರೇ ಬಿಗ್ ಬಾಸ್. ಇಪ್ಪತ್ತನಾಲ್ಕು ಗಂಟೆಗಳ ಕಾಲ ಬಿಗ್ ಬಾಸ್ ಮನೆಯಲ್ಲಿರುವವರ ಚಲನವಲನಗಳು ರೆಕಾರ್ಡ್ ಆಗುತ್ತವೆ. ಶುಕ್ರವಾರ ಮತ್ತು ಶನಿವಾರ ಮಾತ್ರ ಸುದೀಪ್ ಇರುತ್ತಾರೆ. ಭಾನುವಾರಗಳಂದು ಎಕ್ಸ್ ಕ್ಲೂಸೀವ್ ದೃಶ್ಯಗಳು ಪ್ರಸಾರ ಮಾಡಲಾಗುತ್ತದೆ. (ಏಜೆನ್ಸೀಸ್)

English summary
The possible participants on Etv Kannada version of Bigg Boss, hosted by Kiccha Sudeep are Vijay Raghavendra, Dhruva Sharma, Priya Mani, Parul Yadav, and Sanjjanaa. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada