»   » ಸಮಸ್ತ ಕುಟುಂಬಕ್ಕೆ ಸಮೃದ್ಧ ನಗು 'ಮಜಾ ಟಾಕೀಸ್'

ಸಮಸ್ತ ಕುಟುಂಬಕ್ಕೆ ಸಮೃದ್ಧ ನಗು 'ಮಜಾ ಟಾಕೀಸ್'

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿ ವೀಕ್ಷಕರನ್ನು ಖುಷಿಯಾಗಿಡಲು ಹೊಸ ಕಾರ್ಯಕ್ರಮ ಆರಂಭಿಸುತ್ತಿದೆ. ಸಮಸ್ತ ಕುಟುಂಬಕ್ಕೆ ಸಮೃದ್ಧ ನಗು ಹಂಚುವ ಮಜಾ ಟಾಕೀಸ್ ಕಾಮಿಡಿ ಶೋ ಇದೇ ಫೆಬ್ರವರಿ 7ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಮಜಾ ಟಾಕೀಸ್ ಒಂದು ಕುಟುಂಬದ ಚೌಕಟ್ಟಿನೊಳಗೆ ವಿಭಿನ್ನ ಸಮಕಾಲೀನ ವಿಷಯಗಳನ್ನು ಹಾಸ್ಯಮಯವಾಗಿ ಪ್ರಸ್ತುತಪಡಿಸುವ ಕಾರ್ಯಕ್ರಮ. ನಿರೂಪಕ ಹಾಗೂ ನಟ ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ ನ ಸೂತ್ರಧಾರ. [ಗೂಳಿ ಮೇಲೆ ನೋಡಿ 'ರಾಜ ರಾಜೇಂದ್ರ'ನ ಕಸರತ್ತು]

ಮಿಮಿಕ್ರಿ ದಯಾನಂದ್, ವಿ.ಮನೋಹರ್ ಅವರಂತಹ ಜನಪ್ರಿಯ ಹಾಸ್ಯ ಕಲಾವಿದರು 'ಮಜಾ ಟಾಕೀಸ್'ನ ಪ್ರಮುಖ ಭೂಮಿಕೆಯಲ್ಲಿದ್ದಾರೆ. ವಿಶೇಷವೆಂದರೆ ನಟಿ ಶ್ವೇತಾ ಚೆಂಗಪ್ಪ, ಅಪರ್ಣಾ ಹಾಗೂ ಉಷಾ ಭಂಡಾರಿ ಮಜಾ ಟಾಕೀಸ್ ಕಾರ್ಯಕ್ರದಮ ಸದಸ್ಯೆಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Maja Talkies

'ಮಜಾ ಟಾಕೀಸ್'ನ ವಿಶೇಷ ವೀಕ್ಷಕರಾಗಿ ಪ್ರತಿ ಸಂಚಿಕೆಯಲ್ಲೂ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇರುತ್ತಾರೆ. ತಮ್ಮ ವಿಶಿಷ್ಟ ನಗುವಿನ ಮೂಲಕ ಕಾರ್ಯಕ್ರಮಕ್ಕೆ ಎಕ್ಸ್ ಟ್ರಾ ಮಜಾ ತಂದುಕೊಡಲಿದ್ದಾರೆ.

'ಮಜಾ ಟಾಕೀಸ್'ನ ಪ್ರತಿ ಸಂಚಿಕೆಯಲ್ಲೂ ವಿಶೇಷ ಆಹ್ವಾನಿತರು ರಂಜನೆಗೆ ಹೊಸ ರಂಗು ನೀಡಲಿದ್ದಾರೆ. ಶರಣ್, ಪೂಜಾಗಾಂಧಿ, ಅಮೂಲ್ಯಾ, ರಕ್ಷಿತ್ ಶೆಟ್ಟಿ, ಪರೂಲ್ ಯಾದವ್, ಐಶಾನಿ ಶೆಟ್ಟಿ, ಜೆಕೆ ಅಲ್ಲದೆ, ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಪ್ರೇಮ್ ಭಾಗವಹಿಸಿರುವ ಸಂಚಿಕೆಗಳು ಈಗಾಗಲೆ ಚಿತ್ರೀಕರಣಗೊಂಡಿವೆ.

ಮುಂಬರುವ ದಿನಗಳಲ್ಲಿ ದರ್ಶನ್, ಸುದೀಪ್ ಸೇರಿದಂತೆ ಚಿತ್ರರಂಗದ ಜನಪ್ರಿಯ ಕಲಾವಿದರು, ತಂತ್ರಜ್ಞರು, ಕಿರುತೆರೆಯ ಜನಪ್ರಿಯ ವ್ಯಕ್ತಿಗಳು, ರಾಜಕೀಯ, ಕ್ರೀಡೆ, ಸಮಾಜಸೇವೆ, ಸಾಹಿತ್ಯ ಹಾಗೂ ಇತರ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಗಳನ್ನು ಮಜಾ ಟಾಕೀಸ್ ಗೆ ಆಹ್ವಾನಿಸುವ ಯೋಜನೆ ವಾಹಿನಿಗೆ ಇದೆ.

ಶುದ್ಧ ಹಾಸ್ಯ ಈ ಕಾರ್ಯಕ್ರಮದ ಜೀವಾಳ. ಹಾಗಿದ್ದರೂ ಹಾಸ್ಯದ ಜೊತೆಯಲ್ಲಿ ಲಘು ಹರಟೆಯ ಗುಣವೂ ಇರುತ್ತದೆ. ಈ ಕಾರ್ಯಕ್ರಮದ ಮೂಲಕ ಈಟಿವಿ ಕನ್ನಡ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಲಿದೆ ಎನ್ನುತ್ತಾರೆ ಈಟಿವಿ ಬಿಜಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್. (ಫಿಲ್ಮಿಬೀಟ್ ಕನ್ನಡ)

English summary
Etv Kannada all set to launch a new comedy show titled as 'Maja Talkies'. Srujan Lokesh will host the show. The show telecasts from 7th Februay, 2015 at 8 to 9 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada