»   » ಧೂಳ್ ಎಬ್ಸಿ ಚಿಂದಿಉಡಾಯಿಸುವ ಈಟಿವಿ ಪ್ರೋಗ್ರಾಂ

ಧೂಳ್ ಎಬ್ಸಿ ಚಿಂದಿಉಡಾಯಿಸುವ ಈಟಿವಿ ಪ್ರೋಗ್ರಾಂ

Posted By:
Subscribe to Filmibeat Kannada
Dhee Juniors on Etv Kannada
ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳು ವೈವಿಧ್ಯಭರಿತವಾಗಿದ್ದು ಇದೀಗ ಮಕ್ಕಳಿಗಾಗಿ ಮತ್ತೊಂದು ರಿಯಾಲಿಟಿ ಶೋ ಆರಂಭಿಸಿದೆ. ಡಾನ್ಸ್ ರಿಯಾಲಿಟಿ ಶೋ ಆದ ಈ ಕಾರ್ಯಕ್ರಮದಲ್ಲಿ 7 ರಿಂದ 12 ವರ್ಷದೊಳಗಿನ ಮಕ್ಕಳು ಭಾಗವಹಿಸಿ ಮೈನವಿರೇಳಿಸುವ ನೃತ್ಯ ಮಾಡಲಿದ್ದಾರೆ.

ಈ ಹೊಸ ಕಾರ್ಯಕ್ರಮಕ್ಕೆ 'ಢೀ ಜೂನಿಯರ್ಸ್' ಎಂದು ಹೆಸರಿಡಲಾಗಿದೆ. ಇದೇ ಜುಲೈ 28ರಿಂದ ಪ್ರತಿ ಶನಿವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಮಕ್ಕಳಿಗಾಗಿ ನಡೆಯುತ್ತಿರುವ ಅತಿದೊಡ್ಡ ನೃತ್ಯ ಕಾರ್ಯಕ್ರಮ ಇದಾಗಿದೆ. ಅನುಭವಿ ಕೊರಿಯೋಗ್ರಾಫರ್ ಗಳ ನೃತ್ಯ ತರಬೇತಿಯಲ್ಲಿ ಮಕ್ಕಳು ಕುಣಿಯಲಿದ್ದಾರೆ.

'ಧೂಳ್ ಎಬ್ಸಿ ಚಿಂದಿಉಡಾಯ್ಸಿ' ಎಂಬುದು 'ಢೀ ಜೂನಿಯರ್ಸ್' ಕಾರ್ಯಕ್ರಮದ ಸಬ್ ಟೈಟಲ್. ಕಿರುತೆರೆಯಲ್ಲಿ ಈಗಾಗಲೆ ತಮ್ಮದೇ ಆದಂತಹ ಶೈಲಿಯ ನಿರೂಪಣೆಗೆ ಹೆಸರಾಗಿರುವ ಅನುಶ್ರೀ ಕಾರ್ಯಕ್ರಮದ ನಿರೂಪಕಿ.

ವಿಜಯಶಾಲಿ ಜೋಡಿಗಳಿಗೆ ಅತ್ಯಾಕರ್ಷಕ ಭಾರಿ ಮೊತ್ತದ ಬಹುಮಾನ ದೊರೆಯುತ್ತದೆ. ಇದು ನೃತ್ಯಪಟುಗಳಿಗೆ ಮಾತ್ರವಲ್ಲದೆ ಅವರನ್ನು ತರಬೇತಿಗೊಳಿಸಿದ ಕೊರಿಯೋಗ್ರಾಫರ್‌ಗಳಿಗೂ ಕೂಡಾ ಸ್ಪರ್ಧೆ.

ಈ ಹಿಂದೆ ಇದೇ ಸರಣಿಯಲ್ಲಿ ಢೀ (ಬಿಗ್ಗೆಸ್ಟ್ ಡಾನ್ಸ್ ಶೋ) ಕಾರ್ಯಕ್ರಮವನ್ನು ಈಟಿವಿ ಕನ್ನಡ ವಾಹಿನಿ ನಡೆಸಿತ್ತು. ಆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆಗ ಕಿರುತೆರೆ ತಾರೆ ಶ್ವೇತಾ ಚೆಂಗಪ್ಪ ಕಾರ್ಯಕ್ರಮವನ್ನು ನಿರೂಪಿಸಿದ್ದರು.

ಅನುಭವಿ ಕೊರಿಯೋಗ್ರಾಫರ್‌ಗಳಾದ ಸಾಯಿ ಲಕ್ಷ್ಮಣ್, ವಿಜಯನಗರ ಮಂಜು, ಧನಕುಮಾರ ಮತ್ತು ಕಲೈ ತರಬೇತಿ ನೀಡಿದ್ದರು. 6 ಯುವ ಜೋಡಿಗಳ ಮಧ್ಯೆ ನಡೆದ ನೃತ್ಯ ಹಣಾಹಣಿಯನ್ನು ಇಮ್ರಾನ್, ಹರ್ಷ ಮತ್ತು ಮಾಲೂರ್ ಶ್ರೀನಿವಾಸ್ ಅವರು ತೀರ್ಪುಗಾರರಾಗಿದ್ದರು. ಈ ಬಾರಿಯ ಕಾರ್ಯಕ್ರಮ ಇನ್ನೂ ವೈವಿಧ್ಯಭರಿತವಾಗಿ ಮೂಡಿಬರುತ್ತಿದೆ ಎಂದು ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್)

English summary
Dhee Juniors, a talent show that features dance performances by children to air on Etv Kannada from 28th July at 9 pm on every Saturday. The biggest dance show ever for kids in karnataka 7-12 years old dynamites- boys and girls.
Please Wait while comments are loading...