twitter
    For Quick Alerts
    ALLOW NOTIFICATIONS  
    For Daily Alerts

    ಇಂಡಿಯನ್ ಸ್ಪರ್ಧಿಗಳು, ಮುಖ್ಯಾಂಶಗಳು

    By Mahesh
    |

    ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ಸಿನ ನಂತರ ಈಟಿವಿಯಲ್ಲಿ ಆರಂಭಗೊಂಡಿರುವ ಮತ್ತೊಂದು ರಿಯಾಲಿಟಿ ಶೋ ಭರ್ಜರಿ ಆರಂಭದ ನಂತರ ತುಸು ಮಂಕಾದಂತೆ ಕಂಡು ಬಂದಿದೆ. ಕಿರುತೆರೆಯ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಅವರು ನಿರೀಕ್ಷೆಯಂತೆ ಹಳೆ ಚಾಳಿ ಮುಂದುವರೆಸಿದರೆ, ಸ್ಪರ್ಧಿಗಳು ರಿಹರ್ಸಲ್ ಮಾಡಿಕೊಂಡು ಕಿತ್ತಾಟವಾಡಿದಂತೆ ಇತ್ತೀಚಿನ ಎಪಿಸೋಡುಗಳಲ್ಲಿ ಕಂಡು ಬಂದಿದೆ.

    ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮವನ್ನು ಕೊಲೊಸಿಯಮ್ ಮೀಡಿಯಾ ನಿರ್ಮಾಣ ಮಾಡಿದ್ದು, ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಪ್ರಸಾರವಾಗಲಿದೆ. ಈ ಹಿಂದೆ ಅಕುಲ್ ನಿರೂಪಣೆ ಇದ್ದ ರಿಯಾಲಿಟಿ ಶೋಗಳಂತೆ ಇಂಡಿಯನ್ ರಿಯಾಲಿಟಿ ಶೋ ಕೂಡಾ ಕಂಡು ಬಂದಿದ್ದು ಪ್ರೇಕ್ಷಕರ ಭ್ರಮೆಯೋ ಅಥವಾ ಇಂಡಿಯನ್ ಟಾಸ್ಕ್ ಕೂಡಾ ಹಳೆ ರಿಯಾಲಿಟಿ ಶೋಗಳ ಟಾಸ್ಕ್ ನಂತೆ ಇರುತ್ತದೆಯೋ ಕಾದು ನೋಡಬೇಕಿದೆ.

    'Incredible ಇಂಡಿಯಾದಲ್ಲೊಂದು Impossible ಜರ್ನಿ' ಹಾಗೂ ಅದರ 14 ಜನ ಸ್ಪರ್ಧಿಗಳ ಹೆಸರು ಈಗ ಎಲ್ಲರಿಗೂ ತಿಳಿಯುವಂತಾಗಿದೆ. ಎರಡನೇ ಎಪಿಸೋಡ್ ನ ಮುಖ್ಯಾಂಶಗಳ ಜತೆಗೆ ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ...

    ಎರಡನೇ ದಿನದ ಮುಖ್ಯಾಂಶ 1

    ಎರಡನೇ ದಿನದ ಮುಖ್ಯಾಂಶ 1

    ಲಡಾಕ್ ನ ಫೆಯ್(phey) ಎಂಬ ಹೆಸರಿನ ಊರಿನಲ್ಲಿ ನೆಲೆಸಿರುವ ಸ್ಪರ್ಧಿಗಳಿಗೆ ಮೊದಲ ದಿನವೇ ರಿಯಾಲಿಟಿಶೋ ಕಷ್ಟ ತಟ್ಟಿದೆ. ಬೆಳಗ್ಗೆ ಎದ್ದು ಹಲ್ಲುಜ್ಜಲು ಬೋರ್ ವೆಲ್ ಪಂಪ್ ಒತ್ತಿದರೆ ಕೈಗೆ ತಾಗುವ ನೀರು ಮುಟ್ಟಿ ಬೆಚ್ಚಿದ್ದಾರೆ. ಹಿಮ ಪ್ರದೇಶದ ನೀರು ಅಷ್ಟು ತಣ್ಣಗಿರುತ್ತರೆ ಎಂದು ಊಹೆಯನ್ನು ಹೊಂದಿರದ ಸ್ಪರ್ಧಿಗಳು ಮುಖ ತೊಳೆಯುವುದಕ್ಕೆ ಕಷ್ಟಪಟ್ಟರು. ಸ್ಪೂರ್ತಿ ಹಾಗೂ ಭುವನ್ ಬಿಟ್ಟರೆ ಉಳಿದವರು ಸ್ನಾನ ಕೂಡಾ ಮಾಡಲಿಲ್ಲ.

    ಎರಡನೇ ದಿನದ ಮುಖ್ಯಾಂಶ 2

    ಎರಡನೇ ದಿನದ ಮುಖ್ಯಾಂಶ 2

    ಬೆಳಗಿನ ನಿತ್ಯ ಕರ್ಮ ಮುಗಿಸುವುದು ಇಷ್ಟು ಕಷ್ಟವಾದರೆ ಏನು ಗತಿ ಎಂದು ಸ್ಪರ್ಧಿಗಳು ಚಿಂತಿಸಿದ್ದಾರೆ. ಪಂಕಜ್ ಮೂಗು ಮುಚ್ಚಿಕೊಂಡು ಓಪನ್ ಟಾಯ್ಲೆಟ್ ನಲ್ಲಿ ಕೆಲ ಕಾಲ ಇದ್ದು ಬಂದಿದ್ದೇ ಸಾಧನೆ. ಮಿಕ್ಕವರು ಶೌಚಾಲಯ ಪ್ರವೇಶಿಸುವ ಸಾಹಸ ಮಾಡಲೇ ಇಲ್ಲ.

    ಬೆಳಗ್ಗಿನ ತಿಂಡಿ ಏನು ಸಿಗಲಿದೆ ಎಂದು ಕಾದಿದ್ದ ಸ್ಪರ್ಧಿಗಳಿಗೆ ಸಿಕ್ಕಿದ್ದು ಲಡಾಕ್ ಹಾಗೂ ಹಿಮ ಪ್ರದೇಶಗಳಲ್ಲಿ ಸಾಮಾನ್ಯವಾಗಿ ತಿನ್ನುವ ಮೊಮೊಗಳು(ನಮ್ಮ ಕಡೆ ಮೋದಕದ ರೀತಿ) ಬೆಂಗಳೂರಿನಲ್ಲೂ ಮೊಮೊ ಸಿಗುತ್ತದೆಯಾದರೂ ಅದು ಬರೀ ಸ್ನಾಕ್ಸ್ ಆಗಿ ಸೀಮಿತವಾಗಿದೆ. ಆದರೆ, ಅಲ್ಲಿ ಇದೇ ಆಹಾರ ಎಂದಾಗ ಹೌಹಾರಿದ್ದಾರೆ. ಸುನಾಮಿ ಕಿಟ್ಟಿಯಂತೂ ಇದೇನಿದು ಮೊಮೊ ಎಂದು ಬೆಚ್ಚಿ ಉಪವಾಸ ಮುಂದುವರೆಸಿದ್ದಾನೆ. ಮುಂದೆ...

    ಊಟದ ನಂತರ

    ಊಟದ ನಂತರ

    ಸರಿಯಾಗಿ ಆಹಾರ ಸಿಗದೆ ಹಸಿದ ಹೆಬ್ಬುಲಿಯಂತಾಗಿದ್ದ ಸ್ಪರ್ಧಿಗಳು ಊರು ಸುತ್ತಲು ಹೊರಟ್ಟಿದ್ದಾರೆ. ಹತ್ತಿರದಲ್ಲಿ ಹರಿಯುವ ಸಿಂಧೂ ನದಿ ತಟದಲ್ಲಿ ನಿಂತ ಸ್ಪರ್ಧಿಗಳು ಮೇರಾ ಭಾರತ್ ಮಹಾನ್ ಎಂದು ಖುಷಿಯಿಂದ ಕೂಗಿದ್ದಾರೆ. ಆದರೆ, ರಾತ್ರಿ ವೇಳೆಗೆ ಅವರ ಖುಷಿ ಕಡಿಮೆಯಾಗಿದೆ. ಸೊಳ್ಳೆಗಳ ಕಾಟ ಎಂದು ಕೆಲವರು ಗೊಣಗಾಡಿದರೆ ಮತ್ತೆ ಕೆಲವರು ಹಾಕ್ರಪ್ಪಾ ಊಟ ಎಂದಿದ್ದಾರೆ.

    ಮರುದಿನ ಹಾಗೂ ಹೀಗೂ ಗೋಧಿ ಹಿಟ್ಟು ಪಡೆದು ಪೂರಿ ಮಾಡಿಕೊಂಡು ಚೆನ್ನಾಗಿ ತಿಂದಿದ್ದಾರೆ. ಅದರೆ, ಜತೆಯಲ್ಲಿ ತಂದಿದ್ದ ಕುಡಿಯುವ ನೀರು ಖಾಲಿಯಾಗಿದ್ದಕ್ಕೆ ಹುಡುಗಿಯರು ಕಿರುಚಾಡಿದ್ದಾರೆ. ನೀರು ಟಾಯ್ಲೆಟ್ ಗೂ ಬಳಸಿದ್ದರಿಂದ ಖರ್ಚಾಯಿತು ಎಂದು ಸಮಾಜಾಯಿಸಿಕೊಟ್ಟರೂ ಕೇಳಲಿಲ್ಲ.

    ಟಾಸ್ಕ್ ಹಾಗೂ ಕಿರಿಕ್

    ಟಾಸ್ಕ್ ಹಾಗೂ ಕಿರಿಕ್

    ಹುಡುಗಿಯರ ಗುಂಪು ಕೊಟ್ಟಿಗೆ ಕ್ಲೀನ್ ಮಾಡುವ ಕೆಲಸ ಮಾಡಿದರೆ, ಹುಡುಗರು ಹುಲ್ಲು ಕುಯ್ಯಲು ಆರಂಭಿಸಿದರು. ಹುಲ್ಲು ಕುಯ್ಯುವ ಅಭ್ಯಾಸ ಇದ್ದ ಸುನಾಮಿ ಕಿಟ್ಟಿ, ಮಹೇಶ್ ಗೂ ಇಲ್ಲಿ ಅಚ್ಚರಿ ಕಾದಿತ್ತು. ಹುಲ್ಲು ಕುಯ್ದ ಮೇಲೆ ಅದನ್ನು ಕಟ್ಟುವ ರೀತಿ ವಿಶಿಷ್ಟವಾಗಿತ್ತು.

    ಇತ್ತ ಹುಡುಗಿಯರು ಮೊದಲ ಬಾರಿಗೆ ಹಸುವನ್ನು ಅಷ್ಟು ಹತ್ತಿರದಿಂದ ನೋಡಿ ಮುಟ್ಟಿದ ಆನಂದದಲ್ಲಿದ್ದರು. ಕೆಚ್ಚಲಿಗೆ ಕೈ ಹಾಕಿ ಹಾಲು ಹಿಂಡುವ ರೀತಿಯನ್ನು ಬೀದರ್ ನ ಹುಡುಗಿ ತೋರಿಸಿಕೊಟ್ಟ ಮೇಲೆ ಇತರೆ ಸ್ಪರ್ಧಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.
    ರಾತ್ರಿ ವೇಳೆಗೆ ಸುನಾಮಿ ಕಿಟ್ಟಿ ಹಾಗೂ ಉಡುಪಿ ಸ್ಪರ್ಧಿ ಜತೆ ಕಿರಿಕ್ ಶುರುವಾಯಿತು, ಬಹುಭಾಷಾ ಕೋವಿದ ಪಂಕಜ್ ಅಂತೂ ಅವಾಚ್ಯ ಶಬ್ದಗಳ ಮಹಾಪೂರವನ್ನೆ ಹರಿಸಿಬಿಟ್ಟ.

    #1 ಪ್ರದೀಪ್

    #1 ಪ್ರದೀಪ್

    ಎಚ್ ಡಿ ಕೋಟೆಯಿಂದ ಬಂದ ಪ್ರದೀಪ್ ಜಿಕೆ ಅಲಿಯಾಸ್ ಸುನಾಮಿ ಕಿಟ್ಟಿ. ಹೊಸ ಜಾಗ, ಹೊಸ ಜನ ಏನು ಮಾತಾಡಬೇಕೋ ತಿಳಿಯುವುದಿಲ್ಲ.

    ನಾನು ಏನೇ ಮಾಡಿದರೂ ಸ್ಪೀಡ್, ಫಾಸ್ಟ್ , ಬೆಳಗ್ಗಿನ ಜಾವ ಐದಕ್ಕೆ ಎದ್ದು ತರಕಾರಿ ತಂದು ಹಾಕಿ ಮಾರಾಟ ಮಾಡುವುದೇ ನನ್ನ ಕೆಲಸ. ನಾಲ್ಕನೇ ಕ್ಲಾಸ್ ನಲ್ಲೇ ದೊಣ್ಣೆ ವರಸೆ, ಕತ್ತಿ ವರಸೆ, ಕರಾಟೆ ಕಲಿತೆ. ಗೋಲ್ಡ್ ಮೆಡಲ್ ಗಳು ಸಿಕ್ಕಿದೆ. ಆದರೆ, ಮಣ್ಣಲ್ಲಿ ಕೊಳೆಯುವ ಪ್ರತಿಭೆಯಾಗಿಬಿಟ್ಟಿದ್ದೇನೆ. ಯಾರು ಇದ್ದರೂ ನನಗೆ ಚಿಂತೆಯಿಲ್ಲ. ಕೋಟೆ ಹುಲಿ ಮುಟ್ಟಿದ್ರೆ ಬಿಲಿ, ಮೈಸೂರು ಮೈಯಲ್ಲಾ ಚೂರು ಎಂದು ಹೇಳುತ್ತೀನಿ

    #2 ದಿವ್ಯಾ ಬೆಂಗಳೂರು

    #2 ದಿವ್ಯಾ ಬೆಂಗಳೂರು

    ಮದುವೆಯಾಗೊ ವಯಸ್ಸು ಇವಳು ನೋಡಿದರೆ ಸದಾಕಾಲ ಬೈಕು ಹತ್ತಿ ಸುತ್ತುತ್ತಾಳೆ .ಏನಾದರೂ ಹೆಚ್ಚ್ಚು ಕಮ್ಮಿಯಾಗುತ್ತೆ ಎಂದು ಭಯ ಆಗುತ್ತೆ ಎಂದು ದಿವ್ಯಾ ಅಪ್ಪ ಹೇಳ್ತಾರೆ. ಆದರೆ, ಬೆಂಗಳೂರಿನ ಮಧ್ಯಮ ವರ್ಗದಿಂದ ಬಂದ ದಿವ್ಯಾಗೆ ಇಂಡಿಯನ್ ವೇದಿಕೆ ಮೂಲಕ ಹುಡುಗಿಯರಿಗೂ ಹುಡುಗರಂತೆ ಶಕ್ತಿ, ಯುಕ್ತಿ ಇದೆ ಎಂಬುದನ್ನು ನಿರೂಪಿಸುವ ಚಲವಿದೆಯಂತೆ.

    #3 ರಮ್ಯಾಶ್ರೀ, ಬೆಂಗಳೂರು

    #3 ರಮ್ಯಾಶ್ರೀ, ಬೆಂಗಳೂರು

    ತುಂಬಾನೇ ಡಿಫಿಕಲ್ಟೀ ಇದೆ ಇದರಲ್ಲಿ ಅದಕ್ಕೆ ಈ ಶೋ ಒಪ್ಪಿಕೊಂಡೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಇದು ಚಾಲೆಂಜಿಂಗ್ ಆದ ಕೆಲಸ. ನಾನು ಸ್ವಲ್ಪ ಮೂಡಿ ಎಲ್ಲರೊಡನೆ ತಕ್ಷಣಕ್ಕೆ ಬೆರೆಯುವುದಿಲ್ಲ. ಇದನ್ನು ನೋಡಿ ನನ್ನನ್ನು ಜನ ಆಹಂಕಾರಿ ಎನ್ನುತ್ತಾರೆ. ಅದಕ್ಕೆ ನಾನು ಕೇರ್ ಮಾಡುವುದಿಲ್ಲ.

    #4 ಭುವನ್, ಕೊಡಗು

    #4 ಭುವನ್, ಕೊಡಗು

    ದೊಡ್ಡ ಕುಟುಂಬದಿಂದ ಬಂದಿರುವ ಭುವನ್ ಪೊನ್ನಣ್ಣ ಈಗಾಗಲೆ ಕನ್ನಡ ಚಿತ್ರರಂಗ ಪರಿಚಯ ಹೊಂದಿದ್ದಾರೆ. ಗಣೇಶ್ ಅಭಿಯನದ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯ ಅನುರಾಗ್ ಕಶ್ಯಪ್ ಚಿತ್ರ 'ಪಾಂಚ್' ಗೂ ಆಯ್ಕೆಯಾಗಿದ್ದಾರೆ.

    ಸದಾ ಪಾರ್ಟಿ ಮಾಡುವ ಮನಸ್ಸು ಇರುವ ಭುವನ್' ಇಂಡಿಯನ್' ಶೋಗೆ ಥ್ರಿಲ್ ಗಾಗಿ ಬಂದಿದ್ದೇನೆ ಎನ್ನುತ್ತಿದ್ದಾರೆ.
    #5 ಗಮ್ಯ, ಕೊಡಗು

    #5 ಗಮ್ಯ, ಕೊಡಗು

    ಪಾರ್ಟಿ ಮೋಜು ಮಸ್ತಿಗಳ ಜತೆ ಬೆಳೆದಿರುವ ಗಮ್ಯ ಬಿದ್ದಪ್ಪಳಿಗೆ ಸ್ವತಂತ್ರವಾಗಿರುವುದು ಇಷ್ಟವಂತೆ. ನನ್ನ ಒಳ್ಳೆಯತನವನ್ನು ನನ್ನ ದೌರ್ಬಲ್ಯ ಎಂದು ತಿಳಿದುಕೊಳ್ಳಬೇಡಿ. ನನ್ನ ಬೆನ್ನ ಹಿಂದೆ ಮಾತನಾಡುವವರ ಬಗ್ಗೆ ಯಾವುದೇ ಕರುಣೆ ಇಲ್ಲ ಎನ್ನುತ್ತಾರೆ.

    #6 ಮಹೇಶ್, ಬೆಂಗಳೂರು

    #6 ಮಹೇಶ್, ಬೆಂಗಳೂರು

    ಡೇರ್ ಡೆವಿಲ್ ಮಹೇಶ್ ಕಟ್ಟಡದಿಂದ ಕಟ್ಟಡಕ್ಕೆ ಜಂಗನೆ ಹಾರುವ ಮನುಷ್ಯ, ಉತ್ತಮ ಫಿಟ್ನೆಸ್ ಇಟ್ಟುಕೊಂಡಿರುವ ಮಹೇಶ್ ಯಾವುದೇ ಟಾಸ್ಕ್ ಮಾಡಲು ರೆಡಿ ಎನ್ನುತ್ತಿದ್ದಾರೆ. ಚಿತ್ರದುರ್ಗದಲ್ಲಿ ಸ್ಟಂಟ್ ಮಾಡಿ ತೋರಿಸಿದ ಮೇಲೆ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಆದರೆ, ಮನೆಯ ಕಷ್ಟವನ್ನು ನೀಗಿಸಲು ಇಂಡಿಯನ್ ಶೋ ಗೆಬಂದಿದ್ದಾರೆ.

    #7 ನಿರುಷ, ಬೆಂಗಳೂರು

    #7 ನಿರುಷ, ಬೆಂಗಳೂರು

    ಮನೆಯವರಿಗಿಂತ ಫ್ರೆಂಡ್ ಜತೆ ಹೆಚ್ಚು ಕಾಲ ಕಳೆಯಲು ಇಷ್ಟಪಡುವ ಪುಟ್ಟ ದೇಹ ಪಟಪಟ ಮಾತಿನ ಮಲ್ಲಿ ನಿರುಷಗೆ ಪುನೀತ್ ರಾಜ್ ಕುಮಾರ್ ಜತೆ ನಟಿಸುವ ಆಸೆಯಿದೆಯಂತೆ. ಕರ್ನಾಟಕ ಬಿಟ್ಟು ಬೇರೆ ರಾಜ್ಯಕ್ಕೆ ಕಾಲಿಡದ ನಿರುಷ ಈಗ ಇಂಡಿಯಾ ಫುಲ್ ಟೂರ್ ಮಾಡಲು ಸಿದ್ಧರಾಗಿದ್ದಾರೆ. ದೈಹಿಕವಾಗಿ ಕುಳ್ಳಗಿದ್ದರೂ ಮಾನಸಿಕವಾಗಿ ನಾನು ತುಂಬಾ ಸ್ಟ್ರಾಂಗ್ ಎಂದು ಹೇಳುತ್ತಾರೆ.

    #8 ಮಿಥುನ್ ಶೇಠ್, ಉಡುಪಿ

    #8 ಮಿಥುನ್ ಶೇಠ್, ಉಡುಪಿ

    ಹತ್ತು ಜನರಲ್ಲಿ ಒಬ್ಬನಾಗಿರಲು ನನಗೆ ಇಷ್ಟವಿಲ್ಲ. ಯಾವಾಗಲೂ ನಂ.1 ಆಗಿರಬೇಕು ಎಂಬುದು ನನ್ನ ಗುರಿ. ಮಾಧ್ಯಮ ರಂಗಕ್ಕೆ ಸೇರಿ ಸಾಕಷ್ಟು ಕಲಿತಿದ್ದೇನೆ. ಮಣಿಪಾಲ್ ವಿವಿಯಲ್ಲಿ ವಿದ್ಯಾರ್ಥಿಗಳ ನಾಯಕ ನಾಗಿದ್ದೆ. ಉಡುಪಿ ದೇಗುಲದ ಎದುರಿನ ಜ್ಯುವೆಲ್ಲರಿ ಅಂಗಡಿ, ಮನೆ ನಮ್ಮದು, ಯಾವಾಗಲೂ ಸುಖವನ್ನೆ ಕಂಡಿದ್ದೇನೆ. ಉಡುಪಿಯ ನದಿಗಳಲ್ಲಿ ಈಜಿದ್ದೇನೆ. ಈಗ ದೊಡ್ಡ ಸಮುದ್ರದಲ್ಲಿ ಈಜಲು ಬರುತ್ತಿದ್ದೇನೆ.

    #9 ಸ್ಪೂರ್ತಿ ಬೆಂಗಳೂರು

    #9 ಸ್ಪೂರ್ತಿ ಬೆಂಗಳೂರು

    ಚಾನೆಲ್, ನಿರೂಪಣೆ ಎಲ್ಲವೂ ನನಗೆ ಬಯಸದೇ ಬಂದ ಅವಕಾಶ. 10ನೇ ಕ್ಲಾಸಿನಲ್ಲಿದ್ದಾಗಲೇ ನನಗೆ ಇಲ್ಲಿನ ನಡೆ ನುಡಿ ಪರಿಚಯವಾಗಿತ್ತು. ಮುಂದೆ ಕೆಲವು ಚಿತ್ರಗಳನ್ನು ನಟಿಸಿದೆ. ಆದರೆ, ಅಮ್ಮನ ಮುದ್ದಿನ ಮಗಳಾಗಿ ಬೆಳೆದಿರುವ ನನಗೆ ಇಂಡಿಯನ್ ರಿಯಾಲಿಟಿ ಶೋ ಹೊಸ ಅನುಭವ ನೀಡುತ್ತದೆ

    #10 ಸುಷ್ಮಾರಾಜ್, ಉಡುಪಿ

    #10 ಸುಷ್ಮಾರಾಜ್, ಉಡುಪಿ

    ಬೆಂಗಳೂರಿನ ಯೆಲ್ಲೋ ಪೇಜಸ್ ನಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ವರ್ಕ್ ಮಾಡುತ್ತಿರುವ ಗುಂಗರು ಕೂದಲಿನ ಹುಡುಗಿ ಗೆ ಪರಂಪರಾಗತವಾಗಿ ಬಂದ ಹುಲಿವೇಷ ಹಾಕುವ ಕಲೆ ತಿಳಿದಿದೆ. ಚಿಕ್ಕಿದಿನಲ್ಲಿ ಶಕೀರಾ ಡ್ಯಾನ್ಸ್ ನೋಡಿ ಈಗ ಬೆಲ್ಲಿ ಡ್ಯಾನ್ಸರ್ ಕಲೆ ಒಲಿಸಿಕೊಂಡಿದ್ದಾರೆ. ಹುಲಿವೇಷದ ಬಗ್ಗೆ ಇಡೀ ವಿಶ್ವವೇ ತಿಳಿಸಿಕೊಡಲು ಇಚ್ಛಿಸಿದಾರೆ.

    #11 ಸೌಮ್ಯ, ಹುಬ್ಬಳ್ಳಿ

    #11 ಸೌಮ್ಯ, ಹುಬ್ಬಳ್ಳಿ

    'ನನ್ನ ಮಗಳು ಗಗನಸಖಿಯಾಗಬೇಕು' ಎಂಬ ಅಮ್ಮನ ಕನಸು ನನಸು ಮಾಡಿರುವ ಹುಬ್ಬಳ್ಳಿ ಹುಡುಗಿ ಸೌಮ್ಯ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆಕಾಲಿಟ್ಟರು. ಮುಂಬೈನ ಅಡ್ಜೆಸ್ಟ್ ಮೆಂಟ್ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೆ ಬೆಂಗಳೂರಿಗೆ ಮರಳಿದೆ. ಮಿಸ್ ಬೆಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್ ತಲುಪಿದೆ. ಇಡೀ ದೇಶ ಸುತ್ತಿದ್ದೇನೆ. ಈಗ ಸ್ಪರ್ಧೆಯಲ್ಲಿದ್ದೇನೆ.

    #12 ವಿನೋದ್ ಬೆಂಗಳೂರು

    #12 ವಿನೋದ್ ಬೆಂಗಳೂರು

    ಅಥ್ಲೆಟಿಕ್ಸ್, ವಾಲಿಬಾಲ್ ಆಡಿಕೊಂಡು ರಾಷ್ಟ್ರಮಟ್ಟಕ್ಕೆ ಬೆಳೆದ ಬೆಂಗಳೂರು ಹುಡುಗ ವಿನೋದ್ ಈ ಹಿಂದೆ ಆರ್ಮಿಯಲ್ಲಿದ್ದರು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ವಾಪಸ್ ಬಂದರು. ನಂತರ ಅಂಚೆ ಇಲಾಖೆಯಲ್ಲಿ ವೃತ್ತಿಯಲ್ಲಿದ್ದಾರೆ. ನನಗಿರುವ ಟ್ಯಾಲೆಂಟಿಗೆ ನಾನು ಯಾವತ್ತು ಸೋತಿಲ್ಲ. ನಾನು ಸೋಲಲ್ಲ ಎನ್ನುತ್ತಾರೆ.

    #13 ಪಂಕಜ್ ಉಪಾಧ್ಯಾಯ ಬೆಂಗಳೂರು

    #13 ಪಂಕಜ್ ಉಪಾಧ್ಯಾಯ ಬೆಂಗಳೂರು

    ಬೆಂಗಳೂರು ಬಿಟ್ಟು 14 ವರ್ಷ ಇದ್ದೆ. ಸುಮಾರು 12 ಭಾಷೆ ಕಲಿತ್ತಿದ್ದೇನೆ. ನನಗೆ ನನ್ನ ತಾಯಿಯೇ ದೇವರು. ನಾನು ಹಿಂದಿ ಭಾಷಿಕ ಆದರೆ, ಉತ್ತಮ ಕನ್ನಡ ಮಾತನಾಡಲು ಇಷ್ಟಪಡುತ್ತೇನೆ. ಪ್ರವಾಸ ಎಂದರೆ ನನಗೆ ಹುಚ್ಚು. ನಾನು ಇಲ್ಲಿಗೆ ಬಂದಿರುವುದು ಮನರಂಜನೆ ನೀಡಲು ಮಾತ್ರ

    #14 ಪ್ರದೀಪ್ ಶಿವಮೊಗ್ಗ

    #14 ಪ್ರದೀಪ್ ಶಿವಮೊಗ್ಗ

    ನಾನು ಚಿಕ್ಕಂದಿನಲ್ಲಿ ತುಂಬಾ ಸಣ್ಣಗಿದ್ದೆ. ನಂತರ ಕಷ್ಟಪಟ್ಟು ದೇಹ ದಂಡಿಸಿ ಒಳ್ಳೆ ಮೈಕಟ್ಟು ಬೆಳೆಸಿಕೊಂಡೆ. ನಟನೆ ಹಾಗೂ ಮಾಡೆಲಿಂಗ್ ನಲ್ಲಿ ನನಗೆ ಆಸಕ್ತಿ ಹೆಚ್ಚಿದೆ. ನಾನು ಒಂದೆರಡು ವಾರ ಇದ್ದು ಹೋಗಲು ಬಂದಿಲ್ಲ. ಈ ಶೋ ಗೆಲ್ಲುವುದು ನನ್ನ ಗುರಿ

    English summary
    The 14 contestants from different places, who have come together to participant in ETV's Indian, started their journey with great energy. On the day two of their stay with the Indian team, they have realised that it will be not a bed of roses for them.
    Wednesday, August 14, 2013, 19:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X