»   » ಈಟಿವಿ ಕನ್ನಡದಲ್ಲಿ ಕಾಮಿಡಿ ಸೀರಿಯಲ್ ತರರಂಪಂ

ಈಟಿವಿ ಕನ್ನಡದಲ್ಲಿ ಕಾಮಿಡಿ ಸೀರಿಯಲ್ ತರರಂಪಂ

Posted By:
Subscribe to Filmibeat Kannada
Etv Kannada
ಕನ್ನಡದ ಎಲ್ಲ ಎಂಟರ್ ಟೈನ್ ಮೆಂಟ್ ಚಾನಲ್ ಗಳೂ ನವರಸಗಳಲ್ಲಿ ಹಾಸ್ಯರಸಕ್ಕೆ ವಿಶೇಷ ಒತ್ತು ನೀಡಿವೆ. ಇದಕ್ಕೆ ಈಟಿವಿ ಕನ್ನಡ ವಾಹಿನಿ ಕೂಡ ಹೊರತಾಗಿಲ್ಲ. ಈ ಬಾರಿ ಮತ್ತೊಂದು ಹೊಸ ಹಾಸ್ಯ ಧಾರಾವಾಹಿಯನ್ನು ಹೊತ್ತು ತರುತ್ತಿದೆ.

ಈಟಿವಿ ಕನ್ನಡ ವಾಹಿನಿಯಲ್ಲಿ ನೂತನ ಕಾಮಿಡಿ ಧಾರಾವಾಹಿ 'ತರರಂಪಂ' ಆರಂಭವಾಗುತ್ತಿದೆ. ಸೆಪ್ಟೆಂಬರ್ 3ರಿಂದ ಸಂಜೆ 6ರಿಂದ 6.30ಕ್ಕೆ ಈ ಹೊಸ ಹಾಸ್ಯ ಧಾರಾವಾಹಿ ಪ್ರಸಾರವಾಗಲಿದೆ. ಹಾಸ್ಯ ಧಾರಾವಾಹಿಗಳಿಗೆ ಪ್ರೇಕ್ಷಕರು ಮನಸೋಲುತ್ತಿರುವುದು ಗೊತ್ತಿರುವ ಸಂಗತಿಯೇ.

ಇದೇ ಸ್ಲಾಟ್ ನಲ್ಲಿ 'ಅನುವಾದ' ನಿರ್ದೇಸುತ್ತಿದ್ದ ಎಂ.ಎನ್. ಜಯಂತ್ ಅವರ ಸಾರಥ್ಯದಲ್ಲೇ 'ತರರಂಪಂ' ಮೂಡಿಬರಲಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಜಯಂತ್ ಅವರ 'ಅನುವಾದ' ವಿಭಿನ್ನ ಕತೆ ಕಾರಣ ಎಲ್ಲರ ಗಮನಸೆಳೆದಿತ್ತು.

ನಿತ್ಯ ಬದುಕಿನ ಸಣ್ಣಪುಟ್ಟ ಸಂಗತಿಗಳೇ 'ತರರಂಪಂ' ಕಥಾವಸ್ತು. ಈ ಧಾರಾವಾಹಿಯಲ್ಲಿ ಆರು ಪ್ರಮುಖ ಪಾತ್ರಗಳಿರುತ್ತವೆ. ಮಹದೇವ ಹಾಗೂ ಆತನ ಕುಟುಂಬ ಸುತ್ತ ಸುತ್ತುವ ಕಥೆ.

ತನ್ನ ಮಗಳು ಲಕ್ಷ್ಮಿಯನ್ನು ಅಪಾರವಾಗಿ ಪ್ರೀತಿಸುವ ಈತ ಆಕೆ ತನ್ನ ಪಾಲಿಗೆ ಅದೃಷ್ಟದ ಲಕ್ಷ್ಮಿ ಎಂದೇ ಭಾವಿಸಿರುತ್ತಾನೆ. ಕತೆ ವಿನೋಧಭರಿತವಾಗಿ ಸಾಗುತ್ತದೆ. ವಾಣಿಶ್ರೀ ಹಾಗೂ ಲಕ್ಷ್ಮಿ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿಲ್ಲಿ ಲಲ್ಲಿ, ಪಾ.ಪ.ಪಾಂಡು ಕಾಮಿಡಿ ಸೀರಿಯಲ್ ಗಳ ಮೂಲಕ ಆರಂಭವಾದ ಈ ಟ್ರೆಂಡ್ ಮುಂದುವರಿಯುತ್ತಲೇ ಬರುತ್ತಿದೆ. ಕೌಟುಂಬಿಕ ಕಥೆಗಳ ನಡುವೆ ಈ ಪ್ರಯೋಗಗಳು ವೀಕ್ಷಕರಿಗೆ ಕಚಗುಳಿ ಯಿಡುತ್ತವೆ. ತರರಂಪಂ ಕೂಡ ತನ್ನ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದೆ ಈಟಿವಿ ಕನ್ನಡ ವಾಹಿನಿ. (ಒನ್ ಇಂಡಿಯಾ ಕನ್ನಡ)

English summary
ETV Kannada new comedy serial starts from 3rd September, 2012 at 6 pm IST from Monday to Friday. The story revolves around Mahadev and his family members. He is very fond of his daughter, Laxmi and pampers her a lot. He also considers her as his lucky charm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada