»   » ಈಟಿವಿ ಕನ್ನಡ ಹೊಸ ರಿಯಾಲಿಟಿ ಶೋ ಇಂಡಿಯನ್

ಈಟಿವಿ ಕನ್ನಡ ಹೊಸ ರಿಯಾಲಿಟಿ ಶೋ ಇಂಡಿಯನ್

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಎಂದಾದರೂ ನೀವು ಲಡಾಕ್ ಲೇಹ್ ನಲ್ಲಿ ವಾಸಿಸುತ್ತಾ ಅಲ್ಲಿನ ಥುಕ್ಪ ತಿಂದಿದ್ದೀರಾ? ರಾಜಸ್ತಾನದಲ್ಲಿನ ಮರುಭೂಮಿಯ ಬೆಂಗಾಡಿನಲ್ಲಿ ನೀರಿಗಾಗಿ ಹಾತೊರೆಯುತ್ತಾ ಗಂಟಲು ಒಣಗಿದ ಅನುಭವವನ್ನು ಪಡೆದಿದ್ದೀರಾ? ಹಾಗಿದ್ದರೆ ಇವೆಲ್ಲವನ್ನೂ ಅನುಭವಿಸಲು ಸಿದ್ಧರಾಗಿ. ಈಟಿವಿ ಕನ್ನಡ ವಾಹಿನಿ ಈ ರೀತಿಯ ವಿಭಿನ್ನ ರಿಯಾಲಿಟಿ ಶೋ 'ಇಂಡಿಯನ್' ನಿಮ್ಮ ಮುಂದೆ ತರುತ್ತಿದೆ.

  ಈ ರೀತಿಯ ರಿಯಾಲಿಟಿ ಶೋವನ್ನು ಮೊದಲ ಬಾರಿಗೆ ದೇಶದ 7 ರಾಜ್ಯಗಳಲ್ಲಿ ಪ್ರವಾಸ ಮಾಡುವ ಹದಿನಾಲ್ಕು ಕನ್ನಡಿಗ ಸ್ಪರ್ಧಿಗಳ ಮೂಲಕ ನಿಮ್ಮ ಮುಂದೆ ತರುತ್ತಿದೆ. ಅವಿಸ್ಮರಣೀಯ ಭಾರತವನ್ನು ತೋರಿಸುವ ಅಸಾಧ್ಯವಾದ ಈ ಪ್ರಯಾಣವು ದೇಶದ ಬೇರೆ ಬೇರೆ ಭಾಗಗಳಲ್ಲಿನ ನೈಜ ಬಣ್ಣಗಳನ್ನು ತೋರಿಸುತ್ತದೆ.

  ಅಲ್ಲಿನ ವಿಭಿನ್ನ ಜೀವನಶೈಲಿ, ಸಂಸ್ಕೃತಿ, ಪರಂಪರೆ, ಭಾಷೆ ಮತ್ತು ಆಹಾರದ ವಿವಿಧ ಆಯಾಮಗಳನ್ನು ಶೋಧಿಸುತ್ತದೆ. ವೈವಿಧ್ಯದಲ್ಲಿ ಏಕತೆಯನ್ನು ತೋರಿಸುವ ಉದ್ದೇಶದಿಂದ ಏಳು ಯುವಕರು ಮತ್ತು ಏಳು ಯುವತಿಯರು ಕೇವಲ ಕನ್ನಡಿಗರಾಗಿ ಅಷ್ಟೇ ಅಲ್ಲ ಪರಿಪೂರ್ಣ ಭಾರತೀಯರಾಗಿ ಹಿಂದಿರುಗುತ್ತಾರೆ.

  ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮವನ್ನು ಕೊಲೊಸಿಯಮ್ ಮೀಡಿಯಾ ನಿರ್ಮಾಣ ಮಾಡಿದೆ. ಈ ಕಾರ್ಯಕ್ರಮದ ಮೊದಲ ಕಂತು ಆಗಸ್ಟ್ 12ರಂದು ಮೂಡಿಬರುತ್ತಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಪ್ರಸಾರವಾಗಲಿದೆ.

  ಆಕರ್ಷಕ ಮತ್ತು ಮನಸೆಳೆಯುವ ಕಾರ್ಯಕ್ರಮ

  ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ, ವಯಾಕಾಮ್ 18 ಮತ್ತು ಈಟಿವಿ ಕನ್ನಡದ ಬಿಜಿನೆಸ್ ಹೆಡ್ ಹಾಗೂ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ರವೀಶ್ ಕುಮಾರ್ ಅವರು "ಬಿಗ್ ಬಾಸ್ ಕರ್ನಾಟಕದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ನಂತರ ನಮ್ಮ ವೀಕ್ಷಕರನ್ನು ಸೆಳೆಯುವ ವಿಭಿನ್ನ ಕಾರ್ಯಕ್ರಮದ ಅಗತ್ಯವಿತ್ತು. ಈಗ 'ಇಂಡಿಯನ್' ಶೋ ಮೂಲಕ 14 ಜನರು 14 ವಾರಗಳ ಕಾಲ ಭಾರತದ ಉದ್ದಕ್ಕೂ ಪ್ರವಾಸ ಮಾಡುತ್ತಾ ಅಲ್ಲೇ ಉಳಿದುಕೊಳ್ಳುವ ಕಲ್ಪನೆ ಅಷ್ಟೇ ಆಕರ್ಷಕವಾಗಿದೆ ಮತ್ತು ಮನೆಸೆಳೆಯುವಂತಿದೆ" ಎಂದು ಹೇಳಿದರು.

  ಶೋ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಏನಂತಾರೆ?

  ಈಟಿವಿ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರು "ಇಂಡಿಯನ್, ಇದು ಪ್ರವಾಸ ಮತ್ತು ಸಾಹಸದ ಆಕರ್ಷಕವಾದ ಸಂಯೋಜನೆಯಾಗಿದ್ದು, ಎಲ್ಲ ವಯೋಮಾನದವರಿಗೂ ಸೂಕ್ತವಾಗಿದೆ. ಕಾರ್ಯಕ್ರಮವನ್ನು ಭಾರತದ ಉದ್ದಕ್ಕೂ 7 ಬೇರೆ ಬೇರೆ ರಾಜ್ಯಗಳು ಅಂದರೆ ಜಮ್ಮು ಕಾಶ್ಮೀರ, ಗುಜರಾತ್, ರಾಜಸ್ತಾನ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಅಕುಲ್ ಬಾಲಾಜಿ ಅವರು ನಿರೂಪಕರಾಗಿ ಇರುವುದರೊಂದಿಗೆ ನಾವು ಕಾರ್ಯಕ್ರಮಕ್ಕೆ ಅಗತ್ಯವಾದ ತಂಡವನ್ನು ಹೊಂದಿದ್ದೇವೆ. ಈ ಕಾರ್ಯಕ್ರಮವು ರಾತ್ರಿ 8 ಗಂಟೆಯ ಪ್ರೈಮ್ ಟೈಮ್ ನಲ್ಲಿಯೇ ಪ್ರಸಾರವಾಗಲಿದೆ" ಎಂದರು.

  ಶೋ ಬಗ್ಗೆ ನಾನೂ ಎಕ್ಸೈಟ್ ಆಗಿದ್ದೇನೆ, ಅಕುಲ್

  ಕಾರ್ಯಕ್ರಮ ನಿರೂಪಣೆ ಮಾಡಲಿರುವ ಅಕುಲ್ ಬಾಲಾಜಿ ಅವರು "ನನಗೆ ಯಾವಾಗಲೂ ಪ್ರವಾಸ ಮಾಡುವುದು ಬಹಳ ಇಷ್ಟ. ಈ ರಿಯಾಲಿಟಿ ಕಾರ್ಯಕ್ರಮ ನನ್ನೊಳಗಿನ ಸಾಹಸಪ್ರವೃತ್ತಿಗೆ ಪ್ರೇರಣೆಯೊದಗಿಸಿದೆ. ನಮ್ಮ ದೇಶದ ವೈವಿಧ್ಯಮಯ ಜೀವನ ಶೈಲಿಯನ್ನು ನೋಡುವ ಅವಕಾಶ ಸಿಕ್ಕಿರುವುದು ಸಂತೋಷವನ್ನು ನೀಡುತ್ತದೆ ಮತ್ತು ಶೂಟಿಂಗ್ ಆರಂಭಕ್ಕಾಗಿ ಎದುರು ನೋಡುತ್ತಿದ್ದೇನೆ"

  ಭಾರತದ ವೈವಿಧ್ಯತೆಯಲ್ಲಿ ಏಕತೆ ಸಾರುವ ಶೋ

  ಈ ಕಾರ್ಯಕ್ರಮದ ಸ್ಫರ್ಧಿಗಳು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವೈವಿಧ್ಯಮಯ ಜೀವನಶೈಲಿ ಸಂಸ್ಕೃತಿಗಳಿಂದ ಬಂದಿರುತ್ತಾರೆ. ತಂಡವು ಪ್ರತಿ ಸೋಮವಾರ ಹೊಸ ರಾಜ್ಯವನ್ನು ಪ್ರವೇಶಿಸುತ್ತದೆ. ಅಲ್ಲಿನ ಸ್ಥಳೀಯ ಚಟುವಟಿಕೆಗಳ ಅಥವಾ ಕೆಲಸಗಳ ಮೂಲಕ ಆ ಒಂದು ಪ್ರದೇಶವನ್ನು ಕಾಣಲು ಪ್ರಯತ್ನಿಸುತ್ತದೆ. ಕೆಲಸಗಳು ಹೇಗಿರುತ್ತವೆಯೆಂದರೆ ಗುಜರಾತ್‍ ನ ರುಚಿಕರ ತಿಂಡಿಯನ್ನು ಮಾಡುವುದು, ರಾಜಸ್ಥಾನ್ ಪೇಟ ಸುತ್ತುವುದು ಮುಂತಾದ ಆ ರಾಜ್ಯದ ವೈಶಿಷ್ಟವನ್ನು ತೋರಿಸುವಂತಿರುತ್ತವೆ.

  ವೋಟಿಂಗ್ ಮೂಲಕ ಎಲಿಮಿನೇಷನ್

  ಪ್ರತಿಯೊಂದು ಕೆಲಸವನ್ನೂ ಆ ನಗರಕ್ಕೆ ಹೊಂದುವಂತೆ ಸವಾಲೊಡ್ಡುವ ಬೌದ್ಧಿಕ ಕೌಶಲಗಳು, ಹೊಂದಿಕೊಳ್ಳುವ ಸಾಮರ್ಥ್ಯ ಹೀಗೆ ಅತ್ಯುತ್ತಮವಾಗಿ ಫರ್ಮಾರ್ಮ್ ಮಾಡುವ ಸ್ಪರ್ಧಿ ಶುಕ್ರವಾರ ಇಮ್ಯುನಿಟಿಯನ್ನು ಪಡೆಯುತ್ತಾನೆ. ಇದು ಎಲಿಮಿನೇಶನ್ ದಿನದಂದು ಅನುಕೂಲವಾಗುತ್ತದೆ. ಆ ಕಾರ್ಯದ ವೀಕ್ ಫರ್ಮಾರ್ಮರ್ ಗಳನ್ನು ವೋಟಿಂಗ್ ಮುಖಾಂತರ ಹೊರಕಳುಹಿಸಲಾಗುತ್ತದೆ.

  ಲಡಾಕ್ ನಿಂದ ಆರಂಭವಾಗುವ ಕಾರ್ಯಕ್ರಮ

  ಈ ಕಾರ್ಯಕ್ರಮ ಲಡಾಕ್ ನಲ್ಲಿ ಆರಂಭವಾಗುತ್ತದೆ. ಹದಿನಾಲ್ಕು ವಾರಗಳ ನಂತರ ಅಂದರೆ 98 ಎಪಿಸೋಡ್ ಗಳ ನಂತರ ಕನ್ಯಾಕುಮಾರಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಸ್ಪರ್ಧಿಗಳು ಹತ್ತು ದಿನಗಳ ಕಾಲ ಆಯಾ ರಾಜ್ಯದ ವಿಶಿಷ್ಟತೆಯನ್ನು ಅರಿಯಲು ಇರುತ್ತಾರೆ. ರಾಜ್ಯದ ಅನೇಕ ಆಯಾಮಗಳನ್ನು ಅರಿತುಕೊಳ್ಳುತ್ತಾರೆ. ಅವರು ಮನೆಗೆ ಕೇವಲ ಕನ್ನಡಿಗರಾಗಿ ಅಷ್ಟೇ ಅಲ್ಲ ಸಂಪೂರ್ಣ ಭಾರತೀಯರಾಗಿ ಹಿಂತಿರುಗಿ ಬರುತ್ತಾರೆ.

  ಆಗಸ್ಟ್ 12ರಂದು ಈಟಿವಿ ಕನ್ನಡಕ್ಕೆ ಟ್ಯೂನ್ ಆಗಿ

  ಆದ್ದರಿಂದ ಕರ್ನಾಟಕದ ಸ್ಪರ್ಧಿಗಳಿಗೆ ಬೇರೆ ಪ್ರದೇಶದ ಜನರ ವಿಭಿನ್ನ ಸಂಸ್ಕೃತಿಗಳನ್ನು, ಸಂಪ್ರದಾಯಗಳನ್ನು ಹಾಗೂ ಜೀವನವನ್ನು ಅನುಭವಿಸುವುದಕ್ಕಾಗಿ ಅವಕಾಶವನ್ನು ನೀಡಿದಾಗ ಏನಾಗುತ್ತದೆ? ಶೋ ಆಗಸ್ಟ್ 12ರಿಂದ ಪ್ರಾರಂಭಗೊಳ್ಳುತ್ತಿದೆ. ನಿಮ್ಮಲ್ಲಿನ ಸಾಹಸಿ ಭಾವನೆಯನ್ನು ಜಾಗೃತಗೊಳಿಸಿಕೊಳ್ಳಿ ಮತ್ತು ಈಟಿವಿ ಕನ್ನಡಕ್ಕೆ ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ಟ್ಯೂನ್ ಆಗಿ.

  English summary
  ETV Kannada brings to you a first of its kind adventure reality show – ‘Indian’ that will explore seven states in India through the eyes of fourteen Kannadiga contestants. Hosted by Akul Balaji and produced by Colosceum Media, the show will premier on 12th August and will air every Monday to Friday from 8pm to 9pm.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more