»   » ಮಿಸ್ ಮಾಡ್ದೆ ನೋಡಿ, 'ಸೂಪರ್ ಮಿನಿಟ್' ಗ್ರ್ಯಾಂಡ್ ಫಿನಾಲೆ

ಮಿಸ್ ಮಾಡ್ದೆ ನೋಡಿ, 'ಸೂಪರ್ ಮಿನಿಟ್' ಗ್ರ್ಯಾಂಡ್ ಫಿನಾಲೆ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಗೇಮ್ ಷೋ 'ಸೂಪರ್ ಮಿನಿಟ್'ನ ಗ್ರ್ಯಾಂಡ್ ಫಿನಾಲೆ ಇದೇ ಜನವರಿ 24 ಮತ್ತು 25, ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿವೆ.

ಈ ವರೆಗಿನ ಸಂಚಿಕೆಗಳಲ್ಲಿ ಭಾಗವಹಿಸಿ ಟ್ರೈ ಬ್ರೇಕರ್ ವರೆಗೆ ಹೋಗಿ ಸೋತ ಸ್ಪರ್ಧಿಗಳು, ಗ್ರ್ಯಾಂಡ್ ಫಿನಾಲೆಯ ಅಂತಿಮ ಹಣಾಹಣಿಯ ಕಣದಲ್ಲಿದ್ದಾರೆ. ನಟಿಯರಾಗಿರುವ ನಿಖಿತಾ ತುಕ್ರಾಲ್, ದೀಪಿಕಾ ಕಾಮಯ್ಯ, ನೀತು, ಶ್ವೇತಾ ಚೆಂಗಪ್ಪ, ಅನುಶ್ರೀ, 'ಅಗ್ನಿ ಸಾಕ್ಷಿ'ಯ ಸಿದ್ಧಾರ್ಥ, ರಾಜೇಶ್ವರಿ, 'ಯಶೋದೆ'ಯ ನೀತಾ, 'ಚರಣದಾಸಿ'ಯ ಕಾವ್ಯ, 'ಅಕ್ಕ' ಅನುಪಮಾ ಹಾಗೂ ಬ್ರಹ್ಮಾಂಡ ಗುರೂಜಿ - 10 ಲಕ್ಷ ರೂಪಾಯಿ ಗೆಲ್ಲುವ ಕೊನೆಯ ಅವಕಾಶಕ್ಕಾಗಿ ಸೆಣಸಾಡಲಿದ್ದಾರೆ.

Super Minute Grand Finale1

ಚಿಟಪಟ ಮಾತುಗಳಿಂದ ಮನಸೊರೆಗೊಂಡ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಯೋಗರಾಜ್ ಭಟ್ಟರ ಒಗ್ಗರಣೆ ಗ್ರ್ಯಾಂಡ್ ಫಿನಾಲೆಯಲ್ಲಿರುವುದು ಸಂಚಿಕೆಯ ವಿಶೇಷ.

ಅನಂತ್ ನಾಗ್, ಜಗ್ಗೇಶ್, ರಕ್ಷಿತ್ ಶೆಟ್ಟಿ, ಪರೂಲ್ ಯಾದವ್, ಐಶಾನಿ ಶೆಟ್ಟಿ ಮತ್ತು ಹರಿಕೃಷ್ಣ ಅತಿಥಿಗಳಾಗಿ 'ಸೂಪರ್ ಮಿನಿಟ್' ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಗ್ರ್ಯಾಂಡ್ ಫಿನಾಲೆಗಾಗಿ ಸ್ಪೆಷಲ್ಲಾಗಿ ಹಾಕಲಾಗಿದ್ದ ಅದ್ದೂರಿ ಸೆಟ್ ನಲ್ಲಿ ಈಗಾಗಲೇ ಸಂಚಿಕೆ ಚಿತ್ರೀಕರಣವಾಗಿದ್ದು, ಯಾರು ಗೆಲುವಿನ ಮೆಟ್ಟಿಲೇರಿದ್ದಾರೆ ಅನ್ನುವುದು ಸದ್ಯಕ್ಕೆ ಗುಟ್ಟಾಗಿದೆ. [ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್]

2014 ಆಗಸ್ಟ್ 30 ರಿಂದ ಪ್ರಸಾರ ಆರಂಭಿಸಿದ 'ಸೂಪರ್ ಮಿನಿಟ್' ಇಲ್ಲಿವರೆಗೂ ಒಟ್ಟು 41 ಸಂಚಿಕೆಗಳನ್ನು ಪೂರೈಸಿದೆ. ಮಕ್ಕಳಿಂದ ಮುದುಕರವೆಗೆ, ಸೆಲೆಬ್ರಿಟಿಗಳಿಂದ ಶ್ರೀಸಾಮಾನ್ಯರವರೆಗೆ 'ಸೂಪರ್ ಮಿನಿಟ್' ಎಲ್ಲರ ಮನಸೊರೆಗೊಂಡಿದೆ. [ಮಿನಿಟ್ ಆಟಕ್ಕೆ ಶೇಕ್ ಆದ ಸ್ಪೋಟಕ ಸುದ್ದಿ ನಿರೂಪಕರು!]

Super Minute Grand Finale2

ಏಳು ವರ್ಷಗಳ ನಂತ್ರ ಕಿರುತೆರೆಗೆ ಹಿಂದಿರುಗಿದ ಗೋಲ್ಡನ್ ಸ್ಟಾರ್ ಗಣೇಶ್, 'ಸೂಪರ್ ಮಿನಿಟ್' ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜನಪ್ರಿಯ ತಾರೆಗಳಾದ ರವಿಚಂದ್ರನ್, ಶಿವರಾಜ್ ಕುಮಾರ್, ಮಾಲಾಶ್ರೀ, ಕ್ರಿಕೆಟ್ ತಾರೆಗಳಾದ ಶ್ರೀಶಾಂತ್, ವಿಜಯ್ ಭಾರದ್ವಾಜ್, ರಾಜಕಾರಣಿಗಳಾದ ರೇಣುಕಾಚಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಗಣ್ಯರು 'ಸೂಪರ್ ಮಿನಿಟ್'ನಲ್ಲಿ ಪಾಲ್ಗೊಂಡಿದ್ದರು. (ಫಿಲ್ಮಿಬೀಟ್ ಕನ್ನಡ)

English summary
ETV Kannada's popular game show Super Minute Grand Finale episodes will be aired on Jan 24th and 25th at 8pm. Here is the report on the specialities of the Grand Finale Episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada