»   » 'ಟಿವಿ' ದುರ್ಯೋಧನ 'ಬಿಗ್'ವಿಮಾನಕ್ಕೆ ರೀ ಎಂಟ್ರಿ!

'ಟಿವಿ' ದುರ್ಯೋಧನ 'ಬಿಗ್'ವಿಮಾನಕ್ಕೆ ರೀ ಎಂಟ್ರಿ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ 8ರ ವಿಮಾನದಿಂದ ಎಲ್ಲರ ಮೆಚ್ಚುಗೆಯ ಸ್ಪರ್ಧಿಮಿನಿಷಾ ಔಟ್ ಆಗಿದ್ದು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟ ಬೆನ್ನಲ್ಲೇ ಟಿವಿ ಮಹಾಭಾರತದ 'ದುರ್ಯೋಧನ' ಪುನೀತ್ ಇಸ್ಸಾರ್ ಅವರು ಮನೆಯಿಂದ ಮತ್ತೊಮ್ಮೆ ಹೊರಕ್ಕೆ ನಡೆದಿದ್ದಾರೆ. ಮೂಲಗಳ ಪ್ರಕಾರ ಅವರನ್ನು ಮನೆಯಿಂದ ಬಲವಂತವಾಗಿ ಹೊರ ಹಾಕಲಾಗಿದೆ. ಅದರೆ, ಪುನೀತ್ ರೀ ಎಂಟ್ರಿ ಕೊಡುವ ಸುದ್ದಿ ಪಕ್ಕಾ ಆಗಿದೆ. ಇತರೆ ಸ್ಪರ್ಧಿಗಳ ಬಳಿ ಕ್ಷಮೆ ಬೇಡುವ ದೃಶ್ಯ ತಪ್ಪಿಸಿಕೊಳ್ಳಬೇಡಿ

ಪುನೀತ್ ಇಸ್ಸಾರ್ ಹಾಗೂ ಮಿನಿಷಾ ಇಬ್ಬರಲ್ಲಿ ಯಾರು ಮನೆಯಿಂದ ಹೊರ ಬೀಳುತ್ತಾರೆ ಎಂಬುದು ಗೊಂದಲಮಯವಾಗಿತ್ತು. ಕೊನೆಗೆ ನಿರೂಪಕ ಸಲ್ಮಾನ್ ಖಾನ್ ಅವರು ಲಂಬಾರನ್ನು ಮನೆಯಿಂದ ಹೊರಬರುವಂತೆ ಆಹ್ವಾನಿಸಿದ್ದರು. ಇದಕ್ಕೂ ಮುನ್ನ ಇಬ್ಬರನ್ನು ರಹಸ್ಯ ಕೋಣೆಯಲ್ಲಿರಿಸಲಾಗಿತ್ತು. ಅದರೆ, ರಹಸ್ಯ ಕೋಣೆಯಿಂದ ಪುನೀತ್ ಅವರು ಮತ್ತೆ ಮನೆಗೆ ಹಿಂತಿರುಗುವ ಅವಕಾಶ ಸಿಕ್ಕಿತ್ತು. [ಮೊದಲ ಎಲಿಮಿನೇಷನ್ನಲ್ಲೇ ಸಲ್ಲೂ ತುಂಟಾಟ]

ಇಬ್ಬರಿಗೂ ನಮ್ಮಲ್ಲಿ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬುದು ತಿಳಿದಿರಲಿಲ್ಲ. ಪ್ರೇಕ್ಷಕರಲ್ಲೂ ಈ ಕುತೂಹಲ ಉಳಿಯುವಂತೆ ಮಾಡುವಲ್ಲಿ ಸಲ್ಮಾನ್ ಯಶಸ್ವಿಯಾದರು.ಮೊದಲಿಗೆ ಸ್ಪರ್ಧಿಗಳಿಂದ ವಿದಾಯಗೊಂಡು ರಹಸ್ಯ ಕೋಣೆ ತಲುಪಿದರು. ನಂತರ ಪ್ರೇಕ್ಷಕರಿಗೆ ತಿಳಿಯುವಂತೆ ಬಿಗ್ ಬಾಸ್ ಮನೆಯಿಂದ ಹೊರ ನಡೆದರು. ಇದೇ ಗತಿ ಈಗ ಪುನೀತ್ ಇಸ್ಸಾರ್ ಗೂ ಆಗಿದೆ. ಇಷ್ಟಕ್ಕೂ ಪುನೀತ್ ಇಸ್ಸಾರ್ ರನ್ನು ಮನೆಯಿಂದ ಅಥವಾ ಬಿಗ್ ಬಾಸ್ ವಿಮಾನದಿಂದ ಹೊರ ಹಾಕಿದ್ದು ಏಕೆ? ಉತ್ತರ ಮುಂದಿದೆ. [ಗೊಂದಲ, ಅಚ್ಚರಿಯ ಎಲಿಮಿನೇಷನ್]

ಎಲಿಮಿನೇಷನ್ ಆಗಲು ಕಾರಣ ಸ್ಪಷ್ಟವಿದೆ
  

ಎಲಿಮಿನೇಷನ್ ಆಗಲು ಕಾರಣ ಸ್ಪಷ್ಟವಿದೆ

ಇತ್ತೀಚಿನ ಟಾಸ್ಕ್ ವೊಂದರಲ್ಲಿ ಪುನೀತ್ ಅವರು ಆರ್ಯ ಬಬ್ಬರ್ ಮೇಲೆ ಕೈ ಮಾಡಿ ಗಾಯಗೊಳಿಸಿದ್ದರು. ತಕ್ಷಣವೇ ಗಂಟು ಮೂಟೆ ಕಟ್ಟುವಂತೆ ಬಿಗ್ ಬಾಸ್ ಆದೇಶಿಸಿದ್ದರು. ಗೌತಮ್ ಗುಲಾಟಿಯಂತೂ ಪುನೀತ್ ನಿರ್ಗಮನ ಕಂಡು ಕಣ್ಣೀರಿಟ್ಟಿದ್ದ.

ಕ್ಷಮೆ ಬೇಡಿದ ಪುನೀತ್ ಇಸ್ಸಾರ್
  

ಕ್ಷಮೆ ಬೇಡಿದ ಪುನೀತ್ ಇಸ್ಸಾರ್

ಮಾರ್ಷಲ್ ಆರ್ಟ್ಸ್ ಪ್ರಯೋಗ ಮಾಡಿದ್ದು ನನ್ನ ತಪ್ಪು ಎಂದು ಒಪ್ಪಿಕೊಂಡ ಪುನೀತ್ ಅವರು ಇತರೆ ಸ್ಪರ್ಧಿಗಳಲ್ಲಿ ಕ್ಷಮೆಯಾಚಿಸಿದ್ದರು. ಪುನೀತ್ ಅವರ ಭಾವುಕ ಕ್ಷಮೆಯಾಚನೆಯಲ್ಲಿ ನಾಟಕೀಯತೆ ಕಾಣದ ಇತರೆ ಸ್ಪರ್ಧಿಗಳು ಅವರನ್ನು ಕ್ಷಮಿಸಲು ಮುಂದಾಗಿರುವ ಸುದ್ದಿ ಬಂದಿದೆ. ಪುನೀತ್ ನಮ್ಮೊಂದಿಗೆ ಶೋ ನಲ್ಲಿ ಮುಂದುವರೆಯಲು ನಮ್ಮೆಲ್ಲರ ಆಕ್ಷೇಪಣೆ ಏನು ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಪುನೀತ್ ಪುನರ್ ಆಗಮನ ಸಾಧ್ಯವೇ?
  

ಪುನೀತ್ ಪುನರ್ ಆಗಮನ ಸಾಧ್ಯವೇ?

ಪುನೀತ್ ಇಸ್ಸಾರ್ ಅವರು ಈ ಬಾರಿ ಲಕ್ಕಿಯಾದರೂ ಹೆಚ್ಚು ದಿನ ಮನೆಯಲ್ಲಿ ಉಳಿಯುವುದು ಕಷ್ಟ. ಇತರೆ ಸ್ಪರ್ಧಿಗಳ ನಡುವೆ ಹಿರಿಯನಾಗಿ ಹೆಚ್ಚು ಭಾವುಕನಾಗಿ ಕಂಡು ಬರುವ ಪುನೀತ್ ಅವರು ಮುಂದಿನ ಕೆಲ ವಾರಗಳಲ್ಲೇ ಮನೆಯಿಂದ ಹೊರಬೀಳುವ ಲಕ್ಷಣಗಳಿವೆ ಎಂಬ ಸುದ್ದಿಯೂ ಇದೆ. ಅದರೆ, ಭಾವುಕನಾದರೂ ಪುನೀತ್ ಅವರು ಪ್ರಬಲ ಸ್ಪರ್ಧಿಯಂತೂ ಹೌದು.

ಏನಾಗುವುದೋ ಕಾದು ನೋಡೋಣ
  

ಏನಾಗುವುದೋ ಕಾದು ನೋಡೋಣ

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿಶೋ ಬಿಗ್ ಬಾಸ್ ನಲ್ಲಿ ಹೆಚ್ಚು ದಿನ ಉಳಿಯಲು ಇತರೆ ಸ್ಪರ್ಧಿಗಳ ಮನಸ್ಥಿತಿಯನ್ನು ಅರಿಯಬೇಕಾದ ಅಗತ್ಯವಿದೆ. ನನ್ನ ಪಾಡಿಗೆ ನಾನಿರುತ್ತೇನೆ ಎಂದರೆ ಆಗುವುದಿಲ್ಲ ಎಂಬ ಸತ್ಯ ಮಿನಿಷಾ ಎಲಿಮಿನೇಷನ್ ನಿಂದ ಇತರೆ ಸ್ಪರ್ಧಿಗಳಿಗೆ ಅರಿವಾಗಿದೆ. ಈ ಸತ್ಯ ಇತರರಿಗಿಂತ ಮುಂಚಿತವಾಗಿ ಅರಿತಿರುವ ಪುನೀತ್ ಕಥೆ ಏನಾಗುವುದೋ ಕಾದು ನೋಡೋಣ

English summary
Puneet Issar was thrown out of the Bigg Boss 8 last night but Filmibeat has the exclusive news that the actor will be soon coming back on the show after apologizing to the contestants wholeheartedly.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada