»   » ಅಪ್ಪು 'ಫ್ಯಾಮಿಲಿ ಪವರ್' ಕಾರ್ಯಕ್ರಮದ 5 ಸ್ವಾರಸ್ಯಕರ ಸಂಗತಿ!

ಅಪ್ಪು 'ಫ್ಯಾಮಿಲಿ ಪವರ್' ಕಾರ್ಯಕ್ರಮದ 5 ಸ್ವಾರಸ್ಯಕರ ಸಂಗತಿ!

Posted By:
Subscribe to Filmibeat Kannada
ಪುನೀತ್ ರಾಜ್ ಕುಮಾರ್ ಫ್ಯಾಮಿಲಿ ಪವರ್ ಶೋ | 5 ಸ್ವಾರಸ್ಯಕರ ಸಂಗತಿಗಳು | Filmibeat Kannada

ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಇಂದಿನಿಂದ ಪ್ರಸಾರ ಆಗುತ್ತಿದೆ.

'ಫ್ಯಾಮಿಲಿ ಪವರ್' ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಪಕ್ಕಾ ಫ್ಯಾಮಿಲಿ ರಿಯಾಲಿಟಿ ಶೋ ಆಗಿರುವ 'ಫ್ಯಾಮಿಲಿ ಪವರ್' ತುಂಬ ವಿಭಿನ್ನವಾಗಿದೆ. ಅಂದಹಾಗೆ ಈ ಕಾರ್ಯಕ್ರಮದ ಕೆಲ ವಿಶೇಷತೆಗಳು ಮುಂದಿದೆ ಓದಿ...

ಜನರ ನಾಲೆಜ್ ಬೇಕು

ಪುನೀತ್ ಅವರೇ ಹೇಳಿರುವ ಹಾಗೆ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ 'ಜನರಲ್ ನಾಲೆಜ್ ಬೇಡ, ಜನರ ನಾಲೆಜ್ ಸಾಕು' ನಿಮ್ಮ ಅಮ್ಮ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕಾರ್ಯಕ್ರಮದಲ್ಲಿ ಇರುತ್ತದೆ.

2 ಕುಟುಂಬಗಳು, 4 ಸುತ್ತುಗಳು

ಕಾರ್ಯಕ್ರಮದಲ್ಲಿ ಎರಡು ಬೇರೆ ಬೇರೆ ಕುಟುಂಬಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಒಟ್ಟು ನಾಲ್ಕು ಸುತ್ತು ಕಾರ್ಯಕ್ರಮದಲ್ಲಿ ಇರುತ್ತದೆ.

5 ಸ್ಪರ್ಧಿಗಳು, 3 ಜನರೇಷನ್

ಒಂದು ತಂಡದಲ್ಲಿ ಒಂದು ಕುಟುಂಬದ 5 ಜನ ಸ್ಪರ್ಧಿಗಳು ಇರುತ್ತಾರೆ. ಒಂದು ಫ್ಯಾಮಿಲಿಯ 3 ಜನರೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಅಂದರೆ.. ಮಕ್ಕಳು ಅವರ ತಂದೆ ಅಥವಾ ತಾಯಿ ಜೊತೆಗೆ ತಾತ ಅಥಾವ ಅಜ್ಜಿ ಒಂದು ತಂಡದಲ್ಲಿ ಇರಬೇಕು.

ಸಿಂಪಲ್ ಪ್ರಶ್ನೆಗಳು

ಕಾರ್ಯಕ್ರಮದಲ್ಲಿ ಫ್ಯಾಮಿಲಿಗೆ ಸಂಬಂದಪಟ್ಟ ಸಿಂಪಲ್ ಪ್ರಶ್ನೆಗಳು ಇರುತ್ತದೆ. ಉದಾಹರಣೆಗೆ 'ನಿಮ್ಮ ತಾಯಿ ಹುಟ್ಟಿದ ದಿನ ಯಾವುದು..?', 'ಅಪ್ಪನ ವಯಸ್ಸು ಎಷ್ಟು..?' 'ಮಗನ ಬೆಸ್ಟ್ ಫ್ರೆಂಡ್ ಯಾರು..?' ಈ ರೀತಿ ಪ್ರಶ್ನೆ ಕೇಳಲಾಗುತ್ತದೆ.

'ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು?

10 ಲಕ್ಷ ಬಹುಮಾನ

ಎರಡು ಕುಟುಂಬಗಳ ನಡುವೆ ನಡೆಯುವ ಈ ಸ್ಪರ್ಧೆಯಲ್ಲಿ ಗೆಲ್ಲುವವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಪುನೀತ್ ಫ್ಯಾಮಿಲಿಯಲ್ಲಿ ಯಾರ ಸ್ವಭಾವ ಹೇಗೆ? ಅಪ್ಪು ಬಿಚ್ಚಿಟ್ಟ ಸಂಗತಿ.!

ಇಂದಿನಿಂದ ಶುಭಾರಂಭ

ಪುನೀತ್ ಅವರ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಇಂದಿನಿಂದ ಶುರುವಾಗುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Actor Puneeth Rajkumar's 'Family Power' reality show specialty's. ಪುನೀತ್ ರಾಜ್ ಕುಮಾರ್ ಅವರ 'ಫ್ಯಾಮಿಲಿ ಪವರ್' ಕಾರ್ಯಕ್ರಮ ವಿಶೇಷತೆಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada