»   » ಪುನೀತ್ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಯಾವಾಗ ಶುರು..?

ಪುನೀತ್ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಯಾವಾಗ ಶುರು..?

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ 'ಫ್ಯಾಮಿಲಿ ಪವರ್' ಎನ್ನುವ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಬರುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಈ ಕಾರ್ಯಕ್ರಮದ ಪ್ರಸಾರದ ದಿನಾಂಕ ಹಾಗೂ ಸಮಯ ನಿಗದಿ ಆಗಿದೆ.

'ಫ್ಯಾಮಿಲಿ ಪವರ್' ಕಾರ್ಯಕ್ರಮ ಇದೇ ತಿಂಗಳು ಶುರು ಆಗಲಿದೆ. ನವೆಂಬರ್ 25 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದೆ. ವಿಶೇಷ ಅಂದರೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಪುನೀತ್ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಒಂದೇ ಸಮಯದಲ್ಲಿ ಬರಲಿದೆ.

family-power-reality-show-will-telecast-from-november-25th

'ಬಿಗ್ ಬಾಸ್' ರಾತ್ರಿ 9.30ರ ವರೆಗೆ ಪ್ರಸಾರ ಆಗಲಿದ್ದು, ಇಬ್ಬರು ಸ್ಟಾರ್ ಗಳು ಒಂದೇ ಟೈಂ ನಲ್ಲಿ ಬೇರೆ ಬೇರೆ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, 'ಫ್ಯಾಮಿಲಿ ಪವರ್' ಒಂದು ಗೇಮ್ ಶೋ ಆಗಿದೆ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಫ್ಯಾಮಿಲಿ ಕಾರ್ಯಕ್ರಮವಾಗಿದೆ. ಪುನೀತ್ ರಾಜ್ ಕುಮಾರ್ 'ಕನ್ನಡದ ಕೋಟ್ಯಾಧಿಪತಿ' ಬಳಿಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರ ವೀಕ್ಷಕರ ಕುತೂಹಲ ಹೆಚ್ಚಿಸಿದೆ.

English summary
'Family Power' reality show will telecast from November 25th. ಪುನೀತ್ ರಾಜ್ ಕುಮಾರ್ ಅವರ 'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ನವೆಂಬರ್ 25ರಿಂದ ಪ್ರಸಾರ ಆಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada