»   » 'ಬಿಗ್ ಬಾಸ್' ಶೋನಲ್ಲಿ ಹುಚ್ಚ ವೆಂಕಟ್ ಇರ್ಬೇಕ್.! ಅರ್ಥ ಆಯ್ತಾ.?

'ಬಿಗ್ ಬಾಸ್' ಶೋನಲ್ಲಿ ಹುಚ್ಚ ವೆಂಕಟ್ ಇರ್ಬೇಕ್.! ಅರ್ಥ ಆಯ್ತಾ.?

Posted By:
Subscribe to Filmibeat Kannada

''ಬಿಗ್ ಬಾಸ್' ಶೋನಲ್ಲಿ ಹುಚ್ಚ ವೆಂಕಟ್ ಇರ್ಬೇಕ್.! ಅರ್ಥ ಆಯ್ತಾ.?''....ಈ ಮಾತನ್ನ ನಾವ್ ಹೇಳ್ತಿಲ್ಲ ಸ್ವಾಮಿ....'ಬಿಗ್ ಬಾಸ್-3' ಕಾರ್ಯಕ್ರಮ ನಡೆಯುತ್ತಿರುವ ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಮುಂದೆ 'ಹುಚ್ಚ ವೆಂಕಟ್ ಅಭಿಮಾನಿಗಳು' ಕೂಗಿ ಹೇಳುತ್ತಿರುವ ಮಾತು.

ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹುಚ್ಚ ವೆಂಕಟ್ ಹೊರಬಿದ್ದಿದ್ದಾರೆ. 'ಬಿಗ್ ಬಾಸ್' ಶೋ ನಿಯಮ ಪಾಲಿಸದೇ ಇದ್ದ ಕಾರಣ ಯೂಟ್ಯೂಬ್ ಸ್ಟಾರ್ ಗೆ ಗೇಟ್ ಪಾಸ್ ನೀಡಲಾಗಿದೆ.

huccha-venkat-fans-protest

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಾದ ಈ ಅನಿರೀಕ್ಷಿತ ಬೆಳವಣಿಗೆಯಿಂದ ಹುಚ್ಚ ವೆಂಕಟ್ ಆಭಿಮಾನಿಗಳಿಗೆ ನಿರಾಸೆ ಆಗಿದೆ. ಹುಚ್ಚ ವೆಂಕಟ್ 'ಬಿಗ್ ಬಾಸ್ ವಿನ್ನರ್' ಆಗ್ಬೇಕು ಅಂತ ಬಯಸಿದ್ದ ವೀಕ್ಷಕರಿಗೆ ಬೇಸರವಾಗಿದೆ.

ಕಲರ್ಸ್ ಕನ್ನಡ ವಾಹಿನಿ ಹುಚ್ಚ ವೆಂಕಟ್ ರನ್ನ ವಾಪಸ್ ಶೋಗೆ ಕರೆಯಿಸಿಕೊಳ್ಳಬೇಕು ಅಂತ ಹುಚ್ಚ ವೆಂಕಟ್ ಅಪ್ಪಟ ಭಕ್ತರು ಇನ್ನೋವೇಟಿವ್ ಫಿಲ್ಮ್ ಸಿಟಿ ಮುಂದೆ ಪಟ್ಟು ಹಿಡಿದು ಕೂತಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

'ಬಿಗ್ ಬಾಸ್' ಮನೆಯೊಳಗೆ ಹುಚ್ಚ ವೆಂಕಟ್ ಮರಳಿ ಹೋಗುವವರೆಗೂ ಇಲ್ಲಿಂದ ಜಾಗ ಖಾಲಿ ಮಾಡಲ್ಲ ಅಂತ 'ಹುಚ್ಚ ವೆಂಕಟ್ ಸೇನೆ ಹುಡುಗರು' ಪ್ರತಿಭಟನೆ ಮಾಡ್ತಿದ್ದಾರೆ.

ಹುಚ್ಚ ವೆಂಕಟ್ ಇಲ್ಲದೇ ಶೋ ನೋಡಲ್ಲ ಅಂತ ಕೆಲವರು 'ಅಣ್ಣನ್ ಸ್ಟೈಲ್' ನಲ್ಲಿ ಕೂಗಿ ಹೇಳ್ತಿದ್ದಾರೆ. ಯಾರ್ ಏನೇ ಹೇಳಿದ್ರೂ, ''99% ಹುಚ್ಚ ವೆಂಕಟ್ ಶೋಗೆ ವಾಪಸ್ ಕರೆಸಲ್ಲ'' ಅಂತ ಕಲರ್ಸ್ ಕನ್ನಡ ವಾಹಿನಿ ಬಿಜಿನೆಸ್ ಹೆಡ್ ಹಾಗು 'ಬಿಗ್ ಬಾಸ್-3' ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸ್ಪಷ್ಟನೆ ಕೊಟ್ಟಿದ್ದಾರೆ. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

ಅಂತೂ ಇನ್ಮುಂದೆ ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ಇಲ್ಲದೆ 'ಬಿಗ್ ಬಾಸ್-3' ಕಾರ್ಯಕ್ರಮ ಉಪ್ಪಿಲ್ಲದ ಉಪ್ಪಿನಕಾಯಿ ಆಗಿರುತ್ತೋ ಇಲ್ಲ ಕಸವಿಲ್ಲದ ಸ್ವಚ್ಛ ಕೆರೆಯಂತಾಗಿರುತ್ತೋ ನೋಡೋಣ.

English summary
Fans are demanding wild card entry for YouTube Star Huccha Venkat, who has been kicked out from Bigg Boss Kannada 3 reality show for beating up Singer Ravi Muroor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada