For Quick Alerts
  ALLOW NOTIFICATIONS  
  For Daily Alerts

  ಕರೋಡ್ ಪತಿ ಶೋನಲ್ಲಿ ಭಾಗಿಯಾಗಿದ್ದ ಫರ್ಹಾ ಖಾನ್‌ಗೆ ಕೊರೊನಾ ಪಾಸಿಟಿವ್; ದೀಪಿಕಾ, ಅಮಿತಾಬ್ ವರದಿ ಏನು?

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ​ಪತಿ 13ನೇ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಕೊರೊನಾ ನಡುವೆಯೂ ಅಮಿತಾಬ್ 12ನೇ ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ನಡುವೆ 12ನೇ ಸೀಸನ್ ಅನ್ನು ನಡೆಸಿಕೊಡಲಾಗಿತ್ತು. ಇದೀಗ 13 ನೇ ಸೀಸನ್ ಪ್ರಾರಂಭವಾಗಿ ಈಗಾಗಲೇ ಒಂದು ವಾರದ ಮೇಲಾಗಿದೆ. ಆದರೆ ಆಗಲೇ ಕೊರೊನಾ ಭೀತಿ ಪ್ರಾರಂಭವಾಗಿದೆ.

  ಇತ್ತೀಚಿಗೆ ಕೌನ್ ಬನೇಗಾ ಕರೋಡ್ ಪತಿ 13 ಸೀಸನ್‌ನಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಫರ್ಹಾ ಖಾನ್ ಭಾಗಿಯಾಗಿದ್ದರು. ಶೋ ಚಿತ್ರೀಕರಣ ಮುಗಿದ ಬಳಿಕ ನೃತ್ಯ ನಿರ್ದೇಶಕಿ ಫರ್ಹಾ ಖಾನ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಫರ್ಹಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಫರ್ಹಾ ಖಾನ್ ಕೊರೊನಾ ಪಾಸಿಟಿವ್ ವರದಿಯಿಂದ ಅಮಿತಾಬ್, ದೀಪಿಕಾ ಸೇರಿದಂತೆ ಕೌನ್ ಬನೇಗಾ ಕರೋಡ್ ಪತಿ 13 ತಂಡದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಫರ್ಹಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಸಮಾಧಾನದ ಸುದ್ದಿ ನೀಡಿದ್ದಾರೆ. ಕೊರೊನಾ ವರದಿ ಬಗ್ಗೆ ಫರ್ಹಾ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

  "ಲೆಜೆಂಡ್ (ಅಮಿತಾಭ್) ಕೈಯಿಂದ ಸೆಲ್ಫಿಯನ್ನು ತೆಗೆದುಕೊಳ್ಳುವ ಸೌಭಾಗ್ಯ ಈ ಅದ್ಭುತ ದಿನದಂದು ಸಿಕ್ಕಿದೆ. ಶಿಕ್ಷಕರ ದಿನಾಚರಣೆಯ ವಿಶೇಷದಂದು ನಡೆಸಿದ ಸಂಚಿಕೆಯಲ್ಲಿ ಜೊತೆಯಲ್ಲಿ ಭಾಗವಹಿಸಿದ ದೀಪಿಕಾಗೆ ಧನ್ಯವಾದಗಳು.'' ಎಂದು ಬರೆದುಕೊಂಡಿದ್ದಾರೆ. ಇದೇ ಪೋಸ್ಟ ನಲ್ಲಿ ಫರ್ಹಾ ಖಾನ್ ಅದಕ್ಕೆ ಅಡಿ ಟಿಪ್ಪಣಿಯನ್ನೂ ಸೇರಿಸಿದ್ದಾರೆ. "ಈ ಚಿತ್ರವನ್ನು ನನಗೆ ಕೊರೊನಾ ಪಾಸಿಟಿವ್ ಬರುವ ಬಹಳ ದಿನಗಳ ಮೊದಲು ತೆಗೆಯಲಾಗಿತ್ತು. ಸೆಟ್​ನಲ್ಲಿ ಭಾಗವಹಿಸಿದ್ದ ಎಲ್ಲರ ಪರೀಕ್ಷೆಯನ್ನೂ ಈಗ ನಡೆಸಲಾಗಿದ್ದು, ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ" ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್​ಬಿ, ದೀಪಿಕಾ ಸೇರಿದಂತೆ ಕರೋಡ್ ಪತಿ ತಂಡದ ಹಲವರು ಸೋಂಕಿನ ಅಪಾಯದಿಂದ ಪಾರಾಗಿದ್ದಾರೆ.

  ಅಂದಹಾಗೆ ಅಮಿತಾಬ್ ಈಗಾಗಲೇ ಕೊರೊನಾ ಸೋಂಕಿನಿಂದ ಗಣಮುಖರಾಗಿದ್ದಾರೆ. ಕೊರೊನಾ ಮೊದಲ ಅಲೆ ಸಮಯದಲ್ಲಿ ಅಮಿತಾಬ್ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಚೇತರಿಸಿಕೊಂಡ ಬಳಿಕ ಮತ್ತೆ ಚಿಕ್ರೀಕರಣದಲ್ಲಿ ಭಾಗಿಯಾಗಿದ್ದರು. ಇನ್ನು ನಟಿ ದೀಪಿಕಾ ಕೂಡ ಕೊರೊನಾ ಎರಡೇನ ಅಲೆ ಸಮಯದಲ್ಲಿ ಕೊರಾನಾ ಸೋಂಕಿಗೆ ತುತ್ತಾಗಿದ್ದರು ಎನ್ನುವ ವರದಿಯಾಗಿತ್ತು. ಆದರೆ ಈ ಬಗ್ಗೆ ದೀಪಿಕಾ ಎಲ್ಲೂ ಬಹಿರಂಗ ಪಡಿಸಿಲ್ಲ.

  ಇನ್ನು ಫರ್ಹಾ ಖಾನ್ ಮತ್ತು ದೀಪಿಕಾ ಈ ವಾರದ ಕರೋಡ್ ಪತಿ ಹಾಟ್ ಸೀಟಿನಲ್ಲಿ ಕುಳಿತಿರುವ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ದೀಪಿಕಾ ಮತ್ತು ಫರ್ಹಾ ಖಾನ್ ಪ್ರಶ್ನೆಗಳಿಗೆ ಉತ್ತರ ನೀಡುವ ಜೊತೆಗೆ ಒಂದಿಷ್ಟು ತಮಾಷೆಯ ಕ್ಷಣವನ್ನು ಕಳೆದಿದ್ದಾರೆ. ಅಮಿತಾಬ್ ಜೊತೆ ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  ಕೌನ್ ಬನೇಗಾ ಕರೋಡ್​ಪತಿಯಲ್ಲಿ ಪ್ರತಿ ಶುಕ್ರವಾರ 'ಶಾನ್ದಾರ್ ಶುಕ್ರವಾರ್' ಎಂಬ ವಿಶೇಷ ಸಂಚಿಕೆ ಮೂಡಿಬರುತ್ತದೆ. ಅದರಲ್ಲಿ ಖ್ಯಾತ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಹಾಟ್ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಕರೋಡ್ ಪತಿ 13ನೇ ಸೀಸನ್‌​ನ ಪ್ರಥಮ ಸೆಲೆಬ್ರಿಟಿ ಸಂಚಿಕೆಯಲ್ಲಿ ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಅವರು 25 ಲಕ್ಷ ರೂಗಳನ್ನು ಗಳಿಸಿದ್ದರು. ಅದನ್ನು ತಮ್ಮ ಚಾರಿಟಿಗೆ ದಾನ ಮಾಡುವುದಾಗಿ ಇಬ್ಬರು ತಿಳಿಸಿದ್ದರು. ಈ ವಾರ ದೀಪಿಕಾ ಹಾಗೂ ಫರ್ಹಾ ಭಾಗವಹಿಸಿದ್ದು, ಈ ವಿಶೇಷ ಸಂಚಿಕೆ ಶುಕ್ರವಾರ ಅಂದರೆ ಸೆಪ್ಟೆಂಬರ್ 10ರಂದು ಪ್ರಸಾರವಾಗಲಿದೆ.

  English summary
  Farah khan tests positive for corona after participate in KBC show, she reveals no one tests positive from KBC set.
  Tuesday, September 7, 2021, 17:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X