For Quick Alerts
  ALLOW NOTIFICATIONS  
  For Daily Alerts

  ಹುಚ್ಚ ವೆಂಕಟ್ ಔಟ್ ; ನಮ್ಮ ಓದುಗರು ಏನಂತಾರೆ?

  By Harshitha
  |

  ಹರೆಯದ ಹುಡುಗಿಯರ ಕನಸಲ್ಲಿ ಕಾಡುವ ಸುರಸುಂದರಾಂಗ ಏನಲ್ಲ. 'ಹೀರೋ'ಗೆ ಮಿನಿಮಂ ಇರಲೇಬೇಕಾದ ಮೈಕಟ್ಟು ಇಲ್ಲ. ತೆರೆಮೇಲೆ ಇವರನ್ನ ನೋಡಿ ಚಪ್ಪಾಳೆ ತಟ್ಟಿದವರ ಸಂಖ್ಯೆ ನಮಗಂತೂ ಗೊತ್ತಿಲ್ಲ. ಹೀಗಿದ್ದರೂ, ಮಿಸ್ಟರ್ ಹುಚ್ಚ ವೆಂಕಟ್ ಎಲ್ಲರ ಹಾಟ್ ಫೇವರಿಟ್.

  ಎಡವಟ್ಟು ಮತ್ತು ಅವಾಂತರಗಳಿಂದಲೇ ವರ್ಲ್ಡ್ ಫೇಮಸ್ ಆಗಿರುವ 'ಟಿ.ಆರ್.ಪಿ. ಕಿಂಗ್' ಹುಚ್ಚ ವೆಂಕಟ್ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದಿದ್ದಾಗಿದೆ. 'ಬಿಗ್ ಬಾಸ್' ಮನೆಯಲ್ಲಿ ಎಂಟರ್ ಟೈನ್ಮೆಂಟ್ ಎಲಿಮೆಂಟ್ ಆಗಿದ್ದ ಹುಚ್ಚ ವೆಂಕಟ್, 'ಕಿಕ್ ಔಟ್' ಆದ್ಮೇಲೆ ಶೋನ ನೀವು ನೋಡ್ತೀರಾ? [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಈ ಪ್ರಶ್ನೆಯನ್ನ ನಿನ್ನೆಯಷ್ಟೇ ನಾವು ಕೇಳಿದ್ವಿ. ಇದಕ್ಕೆ ಓದುಗರಿಂದ ಸಿಕ್ಕ ಪ್ರತಿಕ್ರಿಯೆ Amazing..! ಹುಚ್ಚ ವೆಂಕಟ್ ಇಲ್ಲದ 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ನಮ್ಮ ಓದುಗರು ಏನೆಲ್ಲಾ ಹೇಳಿದ್ದಾರೆ ಅಂತ ಅವರ ನಾಮಧೇಯ ಸಮೇತ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ......

  ಮಿಸ್ ಯು ವೆಂಕಟ್

  ಮಿಸ್ ಯು ವೆಂಕಟ್

  ''ಬಿಗ್ ಬಾಸ್' ಕಾರ್ಯಕ್ರಮವನ್ನ ನಾನು ಈ ಹಿಂದೆ ನೋಡಿರಲಿಲ್ಲ. ಈ ಬಾರಿ ನಾನು ಈ ಶೋ ನೋಡೋಕೆ ಕಾರಣ ವೆಂಕಟ್. ಅವರು ಗ್ರೇಟ್ ಎಂಟರ್ಟೈನರ್. ಅವರು ಎಲಿಮಿನೇಟ್ ಆಗಿರುವ ಕಾರಣದಿಂದ ನಾನು ಈಗ ಶೋ ನೋಡುತ್ತಿಲ್ಲ. ಇನ್ಮುಂದೆ ಕೂಡ ನೋಡಿ ಟೈಮ್ ವೇಸ್ಟ್ ಮಾಡಲ್ಲ. ಮಿಸ್ ಯು ವೆಂಕಟ್'' - ರಂಗ [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

  ಹೊಗಳಿಕೆಗೆ ಅರ್ಹರು ಯಾರು?

  ಹೊಗಳಿಕೆಗೆ ಅರ್ಹರು ಯಾರು?

  ''ಆತನೊಬ್ಬನಿಗಾಗಿ ಆ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಬಿಗ್ ಬಾಸ್ ಕಾರ್ಯಕ್ರಮವನ್ನು ಮನರಂಜನೆಗಾಗಿ ಮಾತ್ರ ನೋಡುವ ಸಾವಿರಾರು ಪ್ರೇಕ್ಷಕರಿದ್ದಾರೆ. ಖಂಡಿತವಾಗಿ ಬಿಡದೇ ಆ ಕಾರ್ಯಕ್ರಮವನ್ನು ನೋಡುತ್ತೇವೆ. ಕಾರ್ಯಕ್ರಮದಲ್ಲಿ ಹಿಂಸಾತ್ಮಕ/ಅಸಹ್ಯಕರ ಘಟನೆಗಳೇನಾದರೂ ಬಂದಾಗ/ನಡೆದಾಗ ಮಾತ್ರ ಆ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಿಬಿಡುತ್ತೇವೆ ಅಷ್ಟೆ. ಯಾರೊಬ್ಬರಿಗೋಸ್ಕರವಾಗಿ ಮಾತ್ರ ನಾವು ಕಾರ್ಯಕ್ರಮಗಳನ್ನು ನೋಡುವುದಿಲ್ಲ. ಅಲ್ಲಿರುವ ಸದಸ್ಯರುಗಳೆಲ್ಲರೂ ನಮ್ಮವರೇ - ಸಂಭಾವಿತರಾಗಿರುವವರೆಗೆ. ಯಾರೇ ಆಗಲಿ, ಯಾವುದೇ ಕಾರ್ಯಕ್ರಮದಲ್ಲಿ ಹುಚ್ಚುಚ್ಚಾಗಿ ನಡೆದುಕೊಂಡರೂ ಅದು ಅಕ್ಷಮ್ಯ. ಎಲ್ಲರೂ ಅವರವರ ಲಕ್ಷ್ಮಣರೇಖೆಯೊಳಗಿರುವುದು ಕ್ಷೇಮ. ರೆಹಮಾನ್ ಮತ್ತು ಶೃತಿಯವರು ತಮ್ಮ ಪರಿಧಿಯೊಳಗಿರಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆವರು ಹೊಗಳಿಕೆಗೆ ಅರ್ಹರು'' - ವಿಶ್ವಮಾನವ

  ನಮಗೆ ಬೇಕಾಗಿಲ್ಲ.!

  ನಮಗೆ ಬೇಕಾಗಿಲ್ಲ.!

  ''ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ ನಮಗೆ ಬೇಡ - ಧನು
  ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ ನಾವು ನೋಡುವುದಕ್ಕೆ ಆಗಲ್ಲ. ವಿ ಲವ್ ಹುಚ್ಚ ವೆಂಕಟ್'' - ಕಣ್ಣ [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

  ನೋಡೇ ನೋಡ್ತೀವಿ.!

  ನೋಡೇ ನೋಡ್ತೀವಿ.!

  ''ಹುಚ್ಚ ವೆಂಕಟ್ ಇಲ್ಲದೇ ಇದ್ದರೂ ನಾವು ಬಿಗ್ ಬಾಸ್ ನೋಡ್ತೀವಿ. ಅವರದ್ದೇ ಆದ ಡಬ್ಬಾ ಡೈಲಾಗ್ಸ್ ನಿಂದ ಇತರೆ ಸ್ಪರ್ಧಿಗಳನ್ನು ನಿಂದಿಸುವುದು ನಮಗೆ ಇಷ್ಟವಿಲ್ಲ'' - ಆಶಾ

  ''ನಮ್ಮ ಕುಟುಂಬ ಸಮೇತ ನಾವು ಬಿಗ್ ಬಾಸ್ ನೋಡ್ತೀವಿ. ಯಾಕಂದ್ರೆ ಇನ್ಮುಂದೆ ಮನೆಯಲ್ಲಿ ಅವಾಚ್ಯ ಶಬ್ದಗಳನ್ನು ಯಾರೂ ಬಳಸುವುದಿಲ್ಲ. ನೋಡ್ತೀವಿ...ನೋಡ್ತೀವಿ...ನೋಡ್ತೀವಿ...ಏನ್ ಹುಚ್ಚ ವೆಂಕಟ್ ಅಮಿತಾಬ್ ಬಚ್ಚನ್ನಾ ಅಥವಾ ಸುದೀಪಾ. ಆಫ್ಟರ್ ಆಲ್ ಎ ಜೋಕರ್'' - ಮುರಳಿ.ಎಚ್.ಎಸ್

  ನನ್ ಮಗಂದ್.!

  ನನ್ ಮಗಂದ್.!

  ''ನನ್ ಮಗಂದ್ ಹುಚ್ಚ ವೆಂಕಟ್ ಇಲ್ಲದೇ ಇರುವ ಬಿಗ್ ಬಾಸ್ ಶೋ ನು ಒಂದ್ ಶೋ ನಾ.'' - ನಾಗಭೂಷಣ್ ['ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?]

  ಡಲ್ಲೋ ಡಲ್ಲು.!

  ಡಲ್ಲೋ ಡಲ್ಲು.!

  ''ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ ನೋಡೋಕೆ ಆಗಲ್ಲ'' - ಮಂಜು

  ''ನಿನ್ನೆ ಸುದೀಪ್ ಅಷ್ಟು ನಗಿಸಿದ್ರೂ ಹುಚ್ಚ ವೆಂಕಟ್ ಇಲ್ಲದೇ ಬಿಗ್ ಬಾಸ್-3 ಡಲ್ ಹೊಡೀತಿತ್ತು. ಮುಂಚಿನ ತರಹ 1 ಗಂಟೆ ಚಾನಲ್ ಚೇಂಜ್ ಮಾಡದೆ ಬಿಗ್ ಬಾಸ್ ಅಂತು ನೋಡಲ್ಲ. ಹುಚ್ಚ ವೆಂಕಟ್ ಹುಚ್ಚಾಟ ಮೇನ್ ಅಟ್ರ್ಯಾಕ್ಷನ್. ಸುದೀಪ್ ಶನಿವಾರ ಎಪಿಸೋಡ್ ನಲ್ಲಿ ಯಾವಾಗ ನೋಡಿದ್ರೂ ಫ್ಲರ್ಟ್ ಬಗ್ಗೆ ಡಬಲ್ ಮೀನಿಂಗ್ ಬರೋ ತರಹ ಮಾತನಾಡುತ್ತಾರೆ. ಅವರ ಆಂಕರಿಂಗ್ ಕೂಡ ಬೋರ್ ಹೊಡೆಸುತ್ತಿದೆ'' - ಸೋಮಶೇಖರ್

  ಬ್ಯಾನ್ ಆಗ್ಬೇಕ್.!

  ಬ್ಯಾನ್ ಆಗ್ಬೇಕ್.!

  ''ಹುಚ್ಚ ವೆಂಕಟ್ ಇಲ್ಲದೆ ನಾನು ಬಿಗ್ ಬಾಸ್-3 ನೋಡಲ್ಲ. ಬ್ಯಾನ್ ಮಾಡ್ಬೇಕ್ ಬಿಗ್ ಬಾಸ್ ನಾ'' - ರಾಕೇಶ್

  ''ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ ನೋಡಲ್ಲ. ಎಲ್ಲರೂ ಹುಚ್ಚ ವೆಂಕಟ್ ನ ಟಾರ್ಗೆಟ್ ಮಾಡ್ತಿದ್ದಾರೆ'' - ಗುರು

  ಮೆಂಟಲ್.!

  ಮೆಂಟಲ್.!

  ''ಶ್ರುತಿ ಮತ್ತು ರೆಹಮಾನ್ ಗಾಗಿ ನಾವು ಬಿಗ್ ಬಾಸ್ ನೋಡ್ತೀವಿ.'' - ಪರಿಮಳ

  ''ವೆಂಕಟ್ ಒಬ್ಬ ದೊಡ್ಡ ಮೆಂಟಲ್. ಅವನಿಗೆ ನಾನು ಅನ್ನೋದು ಬಹಳ ಇದೆ. ಫಿಲ್ಮ್ ಇಂಡಸ್ಟ್ರಿ ಇವನು ಒಬ್ಬನಿಂದ ನಡೀತಾ ಇದೆ ಅನ್ನೋ ತರಹ ಆಡ್ತಾನೆ. ಬರಿ ಬೊಗಳೆ ಬಿಡ್ತಾನೆ. ಇವನ ಮುಖಕ್ಕೆ ಒಬಾಮಾ ಇವನ ಫ್ರೆಂಡ್ ಅಂತೆ. ಅವನ ಫಿಲ್ಮ್ ರಿಲೀಸ್ ಆದ್ರೆ ಅವನ ಫ್ಯಾನ್ಸ್ ಕೂಡ ನೋಡಲ್ಲ'' - ಕನ್ನಡಿಗ

   ಕಿಚ್ಚನಿಗಾಗಿ ನೋಡ್ತೀವಿ.!

  ಕಿಚ್ಚನಿಗಾಗಿ ನೋಡ್ತೀವಿ.!

  ''ಹುಚ್ಚ ವೆಂಕಟ್ ಗಾಗಿ ನೋಡಲ್ಲ. ಕಿಚ್ಚ ಸರ್ ಗಾಗಿ ನೋಡ್ತೀನಿ'' - ಶರಣ್

  ನಾವ್ ನೋಡಲ್ಲ.!

  ನಾವ್ ನೋಡಲ್ಲ.!

  'ಬಿಗ್ ಬಾಸ್' ತುಂಬಾ ಬೋರಿಂಗ್. ನಾವು ನೋಡಲ್ಲ ಅಂತ ಕಾಮೆಂಟ್ ಮಾಡಿರೋರ ಸಂಖ್ಯೆಯೇ ಜಾಸ್ತಿ.

  ನನ್ ಎಕ್ಕಡ

  ನನ್ ಎಕ್ಕಡ

  ''ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ ನನ್ ಎಕ್ಕಡ'' - ಶಾಮ್

  ''ಹುಚ್ಚ ವೆಂಕಟ್ ಇಲ್ಲದೆ ಹೋದರೆ ಬಿಗ್ ಬಾಸ್-3 ಬೋರಿಂಗ್ ಆಗಿರುತ್ತೆ. ಈ ವಾರದಿಂದ ವೆಂಕಟ್ ಫ್ಯಾನ್ಸ್ ಬಿಗ್ ಬಾಸ್ ಶೋ ನೋಡಲ್ಲ.'' - ಪ್ರಸಾದ್

  ರಿಯಲ್ ಬಿಗ್ ಬಾಸ್.!

  ರಿಯಲ್ ಬಿಗ್ ಬಾಸ್.!

  ''ರಿಯಲ್ ಬಿಗ್ ಬಾಸ್ ಹುಚ್ಚ ವೆಂಕಟ್'' - ರವಿ.ಪಿ

  ''ನನ್ ಎಕ್ಕಡ ಕೂಡ ಬಿಗ್ ಬಾಸ್ ನೋಡಲ್ಲ'' - ಅಜಿತ್

  [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

  ಕನ್ನಡಿಗರು ನೋಡ್ತಾರೆ

  ಕನ್ನಡಿಗರು ನೋಡ್ತಾರೆ

  ''ಯಾರ್ ಇಲ್ಲಾಂದ್ರೂ ಪರ್ವಾಗಿಲ್ಲ. ಕಿಚ್ಚನಿಗಾಗಿ ಬಿಗ್ ಬಾಸ್ ನೋಡ್ತೀವಿ'' - ಪವಿತ್ರ

  ''ಯಾರಿಂದಲೂ ಶೋ ನಡೆಯುತ್ತಿಲ್ಲ. ನಾವು ಕನ್ನಡಿಗರು ಡಾ.ರಾಜ್ ಕುಮಾರ್ ರನ್ನ ಕಳೆದುಕೊಂಡು ಬದುಕುತ್ತಿದ್ದೇವೆ. ಅಂದ್ಮೇಲೆ ವೆಂಕಟ್ ಬಗ್ಗೆ ಇಷ್ಟೊಂದು ಮಾತೇಕೆ'' - ವೆಂಕಟೇಶ್.ಎನ್.ಎಸ್.

  ನೋಡಲ್ಲ...ನೋಡಲ್ಲ...!

  ನೋಡಲ್ಲ...ನೋಡಲ್ಲ...!

  ''ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ ನಾವು ನೋಡಲ್ಲ. ಅವರು ಮುಗ್ಧ ಮನಸ್ಸು ಉಳ್ಳವರು. ಸುದೀಪ್ ನೀವು ಕೊಟ್ಟ ಶಿಕ್ಷೆ ತಪ್ಪು. ಮತ್ತೆ ನಮ್ಮ ಹುಚ್ಚ ವೆಂಕಟ್ ಗೆ ಎಂಟ್ರಿಕೊಡಿಸಿ. ಅವರು ಇಲ್ಲದ ಬಿಗ್ ಬಾಸ್ ಸೊನ್ನೆ'' - Emimoc Mary

  ''ನೋಡಲ್ಲ...ನೋಡಲ್ಲ...ನೋಡಲ್ಲ...ಅಣ್ಣ ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ ನೋಡಲ್ಲ.'' - ತಿಪ್ಪೇಶ್

  ಬಿಟ್ಟಿ ಬಿಲ್ಡಪ್ ಯಾಕೆ?

  ಬಿಟ್ಟಿ ಬಿಲ್ಡಪ್ ಯಾಕೆ?

  ''ಬಿಗ್ ಬಾಸ್ ಒಂದು ಇಂಟರ್ ನ್ಯಾಷನಲ್ ಶೋ. ಇಲ್ಲಿವರೆಗೂ ಬಿಗ್ ಬಾಸ್ ನಲ್ಲಿ 40ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧಿಸಿದ್ದಾರೆ. ಯಾರಿಗೂ ಕೊಡದೆ ಇರುವ ಬಿಟ್ಟಿ ಬಿಲ್ಡಪ್ ಈ ಹುಚ್ಚನಿಗೆ ಯಾಕೆ ಕೊಡ್ತಿದ್ದೀರಾ. ನಾನಂತೂ ಒಂದು ದಿನ ಶೋನೂ ಮಿಸ್ ಮಾಡಿಕೊಳ್ಳಲ್ಲ'' - ಕಿಚ್ಚ

  ಇತರರಿಗೆ ಮಾತಿನ ಪೆಟ್ಟು

  ಇತರರಿಗೆ ಮಾತಿನ ಪೆಟ್ಟು

  ರೆಹಮಾನ್ ಮತ್ತು ಗಾಯಕ ರವಿ ಮುರೂರು ಮೇಲೆ ಗರಂ ಆಗಿರುವ ಓದುಗರ ಸಂಖ್ಯೆ ಹೆಚ್ಚು

  ನಿರ್ಧಾರ ಸರಿ

  ನಿರ್ಧಾರ ಸರಿ

  ಹುಚ್ಚ ವೆಂಕಟ್ ವಿಚಾರವಾಗಿ ಕಲರ್ಸ್ ಕನ್ನಡ ವಾಹಿನಿ ತೆಗೆದುಕೊಂಡ ನಿರ್ಧಾರ ಸರಿ ಅಂತ ವಾದ ಮಾಡುವವರೂ ಇದ್ದಾರೆ.

  English summary
  Will you watch Bigg Boss Kannada 3 show without Huccha Venkat? Filmibeat Kannada readers have given awesome response to this question. Read the article to know the readers views.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X