Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9 Grand Finale: ಬಿಗ್ ಬಾಸ್ ಕನ್ನಡ ಸೀಸನ್ 9 ಟ್ರೋಫಿಗೆ ಮುತ್ತಿಡುತ್ತಾರಾ ರಾಕೇಶ್ ಅಡಿಗ?
ಕನ್ನಡದ ಬಿಗ್ ಬಾಸ್ 9 ಮುಗಿಯುವ ಹಂತ ಬಂದು ತಲುಪಿದೆ. ಫೈನಲ್‌ಗೆ ಬಂದಿರುವ ಟಾಪ್ ಐದು ಸ್ಪರ್ಧಿಗಳಲ್ಲಿ ಒಳಗೊಳಗೇ ಜಟಾಪಟಿಯೂ ಶುರುವಾಗಿದೆ.
ವೀಕ್ಷಕರಿಗೆ ಈಗ ಬಿಗ್ ಬಾಸ್ ಸೀಸನ್ - 09 ರ ವಿನ್ನರ್ ಯಾರಾಗಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ. ಇನ್ನೂ ಕೆಲವರು ತಮ್ಮ ಫೇವರಿಟ್ ಕಂಟೆಸ್ಟೆಂಟ್ ಗೆಲ್ಲಲಿ ಎಂದು ಬಯಸಿದ್ದಾರೆ.
ಸೈಲೆಂಟ್
ಆಗಿ
ಬಿಗ್‌ಬಾಸ್
ಕನ್ನಡ
ಸೀಸನ್
9ರ
ಫೈನಲ್
ಪ್ರವೇಶಿಸಿದ
ದಿವ್ಯಾ
ಉರುಡುಗಾ
ಜರ್ನಿ
ಹೇಗಿತ್ತು?
ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗುತ್ತಾರೆ ಎಂಬ ಕುತೂಹಲ ನಿಮಗಿರಬಹುದು. ಕೆಲ ವೀಕ್ಷಕರು ರಾಕೇಶ್ ಅಡಿಗ ವಿನ್ ಆಗಲಿ ಎಂದು ಬಯಸಿದ್ದಾರೆ. ಹಾಗಾದರೆ ರಾಕೇಶ್ ಅಡಿಗ ಅವರ ಬಿಗ್ ಬಾಸ್ ಜರ್ನಿ ಬಗ್ಗೆ ಡೀಟೇಲ್ ಆಗಿ ನೋಡೋಣ ಬನ್ನಿ.

ಟಫ್ ಫೈಟ್ ಕೊಡುತ್ತಿರುವ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 9 ಫಿನಾಲೆಗೆ ಇನ್ನು ಒಂದೇ ದಿನ ಬಾಕಿ ಇದೆ. ಎಲ್ಲರಿಗೂ ವೀಕ್ಷಕರು ವೋಟ್ ಮಾಡುತ್ತಿದ್ದಾರೆ. ಪ್ರತಿ ಸ್ಪರ್ಧಿ ಕೂಡ ಟಫ್ ಫೈಟ್ ಕೊಡುತ್ತಿದ್ದಾರೆ. ರಾಕೇಶ್ ಅಡಿಗ ಬಿಗ್ ಬಾಸ್ ಒಟಿಟಿ ಇಂದಲೂ ಮನೆಯಲ್ಲಿದ್ದಾರೆ. ರಾಕೇಶ್ ಅಡಿಗ ಮನೆಯಲ್ಲಿದ್ದ ಯಾವ ಸಂದರ್ಭದಲ್ಲೂ ಎಕ್ಸೈಟ್ ಆಗಲಿಲ್ಲ. ಸಮಾಧಾನವಾಗಿ ಆಟವಾಡಿದ್ದಾರೆ. ಜಗಳವಾಡದೇ, ಕೋಪ ಮಾಡಿಕೊಳ್ಳದೇ, ಮನೆಯವರ ನಡುವೆ ಇದ್ದುಕೊಂಡೇ ಒಂಟಿಯಾಗಿ ಗುರುತಿಸಿಕೊಂಡವರು ರಾಕೇಶ್ ಅಡಿಗ. ಎಲ್ಲಾ ಆಟಗಳನ್ನು ಚೆನ್ನಾಗಿ ಆಡಿರುವ ರಾಕೇಶ್ ಅಡಿಗ ಅವರು, ಇತರೆ ಸ್ಪರ್ಧಿಗಳಿಗಿಂತ ಡಿಫರೆಂಟ್ ಆಗಿದ್ದಾರೆ.

ಅಡಿಗ ದಿ ಬೆಸ್ಟ್ ಕಂಟೆಸ್ಟೆಂಟ್
ಬಿಗ್ ಬಾಸ್ ಎಲ್ಲೂ ಕೂಡ ರಾಕೇಶ್ ಅಡಿಗ ಕೆಟ್ಟ ಭಾಷೆಯನ್ನು ಬಳಸಿಲ್ಲ. ಅನುಚಿತವಾಗಿ ವರ್ತಿಸಲಿಲ್ಲ. ಮನೆಯಲ್ಲಿದ್ದ ಎಲ್ಲಾ ಸದಸ್ಯರ ಜೊತೆಗೂ ಒಂದೇ ರೀತಿಯ ಕನೆಕ್ಷನ್ ಇಟ್ಟುಕೊಂಡಿದ್ದಾರೆ. ಅಮೂಲ್ಯ ಜೊತೆಗೆ ಹೆಚ್ಚು ಗುರುತಿಸಿಕೊಂಡರೂ ಕೂಡ ಕಾವ್ಯಶ್ರೀ, ಅನುಪಮಾ, ದಿವ್ಯಾ ಉರುಡಗಾ ಅವರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅಲ್ಲದೇ ಬಿಗ್ ಬಾಸ್ ವೇದಿಕೆಗೆ ಮುಜುಗರವಾಗುವಂತೆ ಎಲ್ಲೂ ನಡೆದುಕೊಂಡಿಲ್ಲ. ಇತರರಿಗೆ ಹೋಲಿಸಿದರೆ ರಾಕೇಶ್ ಅಡಿಗ ದಿ ಬೆಸ್ಟ್ ಕಂಟೆಸ್ಟೆಂಟ್ ಆಗಿದ್ದಾರೆ. ಯಾರೊಂದಿಗೂ ಜಗಳ ಮಾಡಿಕೊಳ್ಳದ, ಸದಾ ನಗುತ್ತಿರುವ ರಾಕೇಶ್ ಅಡಿಗ ಅವರಿಗೆ ಜನಪ್ರಿಯತೆ ಜೊತೆ ಅವರು ಗೆಲ್ಲುವ ಅಗತ್ಯವಿದೆ. ಬಿಗ್ ಬಾಸ್ ಟೈಟಲ್‌ನಿಂದ ಲೈಫ್ ಚೇಂಜ್ ಆಗಬೇಕು ಎಂದರೆ, ರಾಕೇಶ್ ಅಡಿಗ ಗೆಲ್ಲಬೇಕು.

ಅಭಿಮಾನಿಗಳ ಮನ ಗೆದ್ದಿರುವ ರಾಕಿ
ರಾಕೇಶ್ ಅಡಿಗ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ಗಾಯಕರಾಗಿ ಸಕ್ರಿಯರಾಗಿದ್ದಾರೆ. ಜೋಶ್' ಚಿರಪರಿಚಿತರಾದ ರಾಕೇಶ್, ನಂತರ ಮನಸಾಲಜಿ', ಮಂದಹಾಸ' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಕೆಲ ಚಿತ್ರಗಳಲ್ಲಿ ಖಳನಾಯಕನಾಗಿಯೂ ನಟಿಸಿರುವ ರಾಕೇಶ್ ಕೋಟಿಗೊಂದು ಲವ್ ಸ್ಟೋರಿ' ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿದ್ದರು. ರ್ಯಾಪ್ ಗೀತೆಗಳನ್ನು ಹಾಡಿ ಗಮನ ಸೆಳೆದಿರುವ ರಾಕೇಶ್, ಬಿಗ್ ಬಾಸ್ ಕನ್ನಡ ಒಟಿಟಿಯಿಂದಲೂ ಮುಂದುವರಿದಿರುವ ರಾಕೇಶ್ ಸದಾ ತಾಳ್ಮೆಯಿಂದ ಇರುತ್ತಾರೆ. ಕಿಚ್ಚನಿಂದ ಚಪ್ಪಾಳೆ ಪಡೆದ ರಾಕೇಶ್ ಅಭಿಮಾನಿಗಳ ಮನಸ್ಸನ್ನೂ ಗೆದ್ದಿದ್ದಾರೆ.

ರಾಕಿಗೆ ಸಿಗಲಿ ವಿನ್ನರ್ ಪಟ್ಟ!
ಇನ್ನು ಜೀವನದಲ್ಲಿ ರಾಕೇಶ್ ಅವರೇ ಹೇಳಿದಂತೆ ತುಂಬಾ ಕಷ್ಟ ಪಟ್ಟಿದ್ದಾರೆ. ಈಗ ಮತ್ತೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆಯನ್ನೂ ಹೊಂದಿದ್ದಾರೆ. ಹೀಗಾಗಿ ಬಿಗ್ ಬಾಸ್ ನಲ್ಲಿ ರಾಕೇಶ್ ಅಡಿಗ ಗೆದ್ದರೆ, ಅವರ ಮುಂದಿನ ಬದುಕು ಹಸನಾಗುತ್ತದೆ ಎನ್ನುವುದು ವೀಕ್ಷಕರ ಅಭಿಪ್ರಾಯ. ಬಿಗ್ ಬಾಸ್ ನಲ್ಲಿ ಸಿಗುವ ಹಣದಿಂದ ರಾಕೇಶ್ ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು ಎಂಬುದು ಅಭಿಮಾನಿಗಳ ಆಸೆಯಾಗಿದೆ.