For Quick Alerts
  ALLOW NOTIFICATIONS  
  For Daily Alerts

  ಕಪಿಲ್ ಶರ್ಮಾ ಶೋ ವಿರುದ್ಧ FIR ದಾಖಲು: ಸಂಕಷ್ಟದಲ್ಲಿ ಶೋ

  |

  ಹಿಂದಿ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಕಪಿಲ್ ಶರ್ಮಾ ಶೋ ಕೂಡ ಒಂದು. ಕಾಮಿಡಿ ಮೂಲಕ ಪ್ರೇಕ್ಷಕರನ್ನು ನಗೆಗಡಲಿಲ್ಲಿ ತೇಲಿಸುವ ಈ ಶೋ ಈಗ ಸಂಕಷ್ಟಕ್ಕೆ ಸಿಲುಕಿದೆ. ಕಪಿಲ್ ಶರ್ಮಾ ನಡೆಸಿಕೊಡುವ ಕಾಮಿಡಿ ಶೋ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಮಧ್ಯಪ್ರದೇಶದ ಶಿವಪುರದ ಡಿಸ್ಟ್ರಿಕ್ ಕೋರ್ಟ್‌ನಲ್ಲಿ ಎಫ್ ಐ ಆರ್ ದಾಖಲಾಗಿದೆ.

  ಶೋನಲ್ಲಿ ಕಲಾವಿದರು ಕೋರ್ಟ್ ದೃಶ್ಯ ಮಾಡುವ ವೇಳೆ ಮದ್ಯಪಾನ ಮಾಡಿದ ದೃಶ್ಯ ತೋರಿಸಿದ ಕಾರಣ ಎಫ್ ಐ ಆರ್ ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಜೆಎಮ್ ಕೋರ್ಟ್‌ನಲ್ಲಿ ಎಫ್ ಐ ಆರ್ ಆಗಿದ್ದರು, ಅಕ್ಟೋಬರ್ 1, 2021ರಂದು ವಿಚಾರಣೆ ನಡೆಯಲಿದೆ.

  ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಕಪಿಲ್ ಶರ್ಮಾ, ಎಪಿಸೋಡ್‌ಗೆ ಎಷ್ಟು ಗೊತ್ತೆ?ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಕಪಿಲ್ ಶರ್ಮಾ, ಎಪಿಸೋಡ್‌ಗೆ ಎಷ್ಟು ಗೊತ್ತೆ?

  ಇಂಡಿಯಾ ಟುಡೇ ವರದಿಯ ಪ್ರಕಾರ ವಕೀಲರು ದೂರಿನಲ್ಲಿ, "ಸೋನಿ ಟಿವಿಯಲ್ಲಿ ಪ್ರಸಾರವಾದ ಕಪಿಲ್ ಶರ್ಮಾ ಶೋ ತುಂಬಾ ಕಳಪೆಯಾಗಿದೆ. ಅವರು ಮಹಿಳೆಯ ಬಗ್ಗೆ ಅಸಭ್ಯವಾಗಿ ಟೀಕೆ ಮಾಡುತ್ತಾರೆ. ಒಂದು ಸಂಚಿಕೆಯಲ್ಲಿ ವೇದಿಕೆ ಮೇಲೆ ನ್ಯಾಯಾಲಯವನ್ನು ಸ್ಥಾಪಿಸಲಾಗಿದ್ದು ಅದರಲ್ಲಿ ನಟರು ಸಾರ್ವಜನಿಕವಾಗಿ ಮದ್ಯಸೇವಿಸುತ್ತಿರುವುದು ಕಂಡು ಬಂದಿದೆ. ಇದು ನ್ಯಾಯಾಂಗ ನಿಂದನೆ" ಎಂದು ಆರೋಪ ಮಾಡಿದ್ದಾರೆ.

  ಕಪಿಲ್ ಶರ್ಮಾ ಶೋನಲ್ಲಿ ಕಪಿಲ್ ಶರ್ಮಾ ನಿರೂಪಣೆ ಮಾಡುತ್ತಾರೆ. ಸುಮೋನಾ ಚಕ್ರವರ್ತಿ, ಭಾರ್ತಿ ಸಿಂಗ್, ಕೃಷ್ಣ ಅಭಿಷೇಕ್, ಸುದೇಶ್ ಲೆಹ್ರಿ ಮತ್ತು ಹೆಚ್ಚಿನವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ಶೋ ಇದಾಗಿದ್ದು, ಕಪಿಲ್ ಶರ್ಮಾ ಈ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಈ ಶೋಗೆ ಕಪಿಲ್ ಶರ್ಮಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದು, ಸಂಭಾವನೆ ವಿಚಾರ ಇತ್ತೀಚಿಗಷ್ಟೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  English summary
  FIR filed against Kapil Sharma Show for showing alcohol in a courtroom set.
  Friday, September 24, 2021, 15:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X