»   » ಅಗ್ನಿ ದುರಂತ: ಧಗಧಗ ಉರಿದು ಸುಟ್ಟು ಕರಕಲಾದ 'ಬಿಗ್ ಬಾಸ್' ಮನೆ

ಅಗ್ನಿ ದುರಂತ: ಧಗಧಗ ಉರಿದು ಸುಟ್ಟು ಕರಕಲಾದ 'ಬಿಗ್ ಬಾಸ್' ಮನೆ

Posted By:
Subscribe to Filmibeat Kannada
ಧಗಧಗ ಉರಿದು ಸುಟ್ಟು ಕರಕಲಾದ 'ಬಿಗ್ ಬಾಸ್' ಮನೆ | Filmibeat Kannada

'ದೊಡ್ಮನೆ'... 'ಬಿಗ್' ಮನೆ ಅಂತೆಲ್ಲ ಕರೆಯಿಸಿಕೊಳ್ಳುತ್ತಿದ್ದ 'ಬಿಗ್ ಬಾಸ್' ಮನೆಗೆ ಬೆಂಕಿ ಬಿದ್ದಿದೆ. ಅಗ್ನಿ ಅವಘಡದಿಂದ 'ಬಿಗ್ ಬಾಸ್' ಮನೆ ಧಗಧಗ ಉರಿದಿದೆ.

ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್ ಕನ್ನಡ' ಮನೆ ನಿರ್ಮಿಸಲಾಗಿತ್ತು. ಇದೇ ಮನೆಯಲ್ಲೇ ಕಳೆದ ಮೂರು 'ಬಿಗ್ ಬಾಸ್' ಸೀಸನ್ ಗಳು ನಡೆದಿತ್ತು. ಇದೀಗ ಅದೇ ಮನೆ ಸುಟ್ಟು ಕರಕಲಾಗಿದೆ.

ಬೆಂಕಿ ಅವಘಡ: ಹೊತ್ತಿ ಉರಿದ 'ಬಿಗ್ ಬಾಸ್' ಮನೆ

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ನಿರ್ಮಿಸಲಾಗಿದ್ದ... ಪ್ರತಿ ಸೀಸನ್ ಗೂ ಮರು ನವೀಕರಣಗೊಳ್ಳುತ್ತಿದ್ದ 'ಬಿಗ್ ಬಾಸ್' ಮನೆ ಸದ್ಯ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮುಂದೆ ಓದಿರಿ...

'ಬಿಗ್ ಬಾಸ್' ಮನೆಯಲ್ಲಿ ಬೆಂಕಿ ಅವಘಡ

ಮುಂಜಾನೆ ಮೂರು ಗಂಟೆ ಹೊತ್ತಿಗೆ 'ಬಿಗ್ ಬಾಸ್' ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಮೊದಲು 'ಬಿಗ್ ಬಾಸ್' ಮನೆಯ ಪಕ್ಕದಲ್ಲಿ ಇದ್ದ ಮೇಣದ ಮ್ಯೂಸಿಯಂನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಬಳಿಕ 'ಬಿಗ್ ಬಾಸ್' ಮನೆಗೂ ಬೆಂಕಿ ವ್ಯಾಪಿಸಿದೆ. 'ಬಿಗ್ ಬಾಸ್' ಎಡಿಟಿಂಗ್ ರೂಮ್ ಸೇರಿದಂತೆ 'ಬಿಗ್ ಬಾಸ್' ಮನೆಯೊಳಗಿದ್ದ ಪೀಠೋಪಕರಣಗಳೂ ಸುಟ್ಟು ಭಸ್ಮವಾಗಿದೆ.

ಚಿತ್ರಗಳು: ಸುದೀಪ್ ಪರಿಚಯಿಸಿದ 'ಬಿಗ್ ಬಾಸ್ 5' ಅರಮನೆಯ ಅಂದ-ಚೆಂದ

ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸ

'ಬಿಗ್ ಬಾಸ್' ಮನೆಯಲ್ಲಿ ಆವರಿಸಿರುವ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೂ, ಬೆಂಕಿ ನಂದಿಸಲು ಇನ್ನೂ ಸಾಧ್ಯವಾಗಿಲ್ಲ.

ಸುಟ್ಟು ಕರಕಲಾಗಿದೆ

'ಬಿಗ್ ಬಾಸ್' ಮನೆಯ ಒಳಭಾಗಕ್ಕೂ ಬೆಂಕಿ ಆವರಿಸಿರುವುದರಿಂದ, ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಅದಾಗಲೇ ಮುಕ್ಕಾಲು ಭಾಗದಷ್ಟು 'ಬಿಗ್ ಬಾಸ್' ಮನೆ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.

ಕೋಟ್ಯಾಂತರ ರೂಪಾಯಿ ನಷ್ಟ

ಬೆಂಕಿ ಅವಘಡದಿಂದಾಗಿ ಕಲರ್ಸ್ ವಾಹಿನಿ ಹಾಗೂ 'ಬಿಗ್ ಬಾಸ್' ನಡೆಸುವ ಎಂಡೆಮಾಲ್ ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

English summary
Major fire broke out at Bigg Boss house, Innovative Film City near Bidadi Bengaluru on Thursday (Feb 22nd).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada