For Quick Alerts
  ALLOW NOTIFICATIONS  
  For Daily Alerts

  ಮಾಜಿ ಬಿಗ್‌ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿ ಸೊನಾಲಿ ಹಠಾತ್ ನಿಧನ

  |

  ಹಿಂದಿ ಬಿಗ್‌ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ, ನಟಿ ಹಾಲಿ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಹಠಾತ್ತನೆ ನಿಧನ ಹೊಂದಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.

  ಹಿಂದಿ ಬಿಗ್‌ಬಾಸ್ ಸೀಸನ್ 14ರಲ್ಲಿ ಭಾಗವಹಿಸಿದ್ದ ಸೊನಾಲಿ ಪೋಗಟ್ ಗೋವಾಕ್ಕೆ ಭೇಟಿ ನೀಡಿದ್ದರು. ಅಲ್ಲಿ ಚಿತ್ರೀಕರಣವೊಂದರಲ್ಲಿ ಭಾಗವಹಿಸಿದ್ದರು. ನಿನ್ನೆ (ಆಗಸ್ಟ್ 22) ತಮಗೆ ಸುಸ್ತಾಗುತ್ತಿದೆ ಎಂದು ತಮ್ಮ ಸಿಬ್ಬಂದಿ ಬಳಿ ಹೇಳಿದ್ದರು. ಸೊನಾಲಿಯನ್ನು ಗೋವಾದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೊನಾಲಿ ಅಲ್ಲಿಯೇ ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದೆ.

  ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದ ಸೊನಾಲಿ ಪೋಗಟ್ ನಿಧನಕ್ಕೆ ಕೆಲವು ಗಂಟೆಗಳ ಮುಂಚೆಯೂ ಕೆಲವು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಪ್ರೊಫೈಲ್ ಪಿಕ್ಚರ್ ಸಹ ಬದಲಾಯಿಸಿದ್ದರು.

  ನಟಿಯಾಗಿರುವ ಜೊತೆಗೆ ರಾಜಕೀಯದಲ್ಲಿಯೂ ಸೊನಾಲಿ ಸಕ್ರಿಯರಾಗಿದ್ದರು. ಕಳೆದ ಹರಿಯಾಣಾ ವಿಧಾನಸಭೆ ಚುನಾವಣೆಯಲ್ಲಿ ಅಧಮ್‌ಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಸದಸ್ಯೆಯಾಗಿದ್ದ ಸೊನಾಲಿ ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ದರು.

  ಸೊನಾಲಿ ಪೋಗಟ್ ನಿಧನಕ್ಕೆ ಹಲವು ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಬಿಗ್‌ಬಾಸ್ ವಿನ್ನರ್ ವಿಂಧು ಧಾರಾ ಸಿಂಗ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸೊನಾಲಿ ನಿಧನದ ಬಗ್ಗೆ ಟ್ವೀಟ್ ಮಾಡಿದ್ದು ಸಂತಾಪ ಸೂಚಿಸಿದ್ದಾರೆ.

  ಪ್ರಿಯಾಂಕಾ ಬಾನುಬೋಖಡೆ, ಪ್ರಶಾಂತ್ ಶಿವನ್, ಪಲ್ಲವಿ ಪಾಠಕ್ ಇನ್ನೂ ಹಲವರು ಸೊನಾಲಿ ಪೋಗಟ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಗೋವಾದಲ್ಲಿ ಸೊನಾಲಿಯ ಮರಣೋತ್ತರ ಪರೀಕ್ಷೆ ಇಂದು ನಡೆದಿದ್ದು, ಹರಿಯಾಣಾದಿಂದ ಅವರ ಪೋಷಕರು ಗೋವಾಕ್ಕೆ ಆಗಮಿಸಿದ್ದಾರೆ. ಸೊನಾಲಿಯ ಅಂತ್ಯಕ್ರಿಯೆ ಹರಿಯಾಣದ ಅವರ ಹಳ್ಳಿಯಲ್ಲಿ ನಡೆಯಲಿದೆ.

  Recommended Video

  Anirudh | Anup Bhandari | ಕಿರುತೆರೆಗೆ ಬರ್ತಾರ ನಿರ್ದೇಶಕ ಅನೂಪ್ ಭಂಡಾರಿ! | Jothe Jotheyali *Sandalwood
  English summary
  Former Hindi Bigg Boss contestant Sonali Phogat passes away on August 22 in Goa. She was 41 years of age.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X