»   » 500 ಜನರಲ್ಲಿ 'ಶನಿ' ಪಾತ್ರಕ್ಕೆ ಸುನೀಲ್ ಆಯ್ಕೆಯಾಗಲು ಈ ಡೈಲಾಗ್ ಕಾರಣ

500 ಜನರಲ್ಲಿ 'ಶನಿ' ಪಾತ್ರಕ್ಕೆ ಸುನೀಲ್ ಆಯ್ಕೆಯಾಗಲು ಈ ಡೈಲಾಗ್ ಕಾರಣ

Posted By:
Subscribe to Filmibeat Kannada
ಶನಿ ಕನ್ನಡ ಧಾರಾವಾಹಿಯ ಸುನಿಲ್ ಕುಮಾರ್ ಹಿನ್ನೆಲೆ | ಈ ವಿಡಿಯೋ ನೋಡಿ | Filmibeat Kannada

ಕನ್ನಡ ಕಿರುತೆರೆ ಲೋಕದಲ್ಲಿ ಪೌರಾಣಿಕ ಧಾರಾವಾಹಿಗಳು ತುಂಬಾನೇ ಕಡಿಮೆ. ಅಂತಹ ಸೀರಿಯಲ್ ಗಳಿಗೆ ಬಂಡವಾಳ ಹೆಚ್ಚಾಗಿರಬೇಕು. ಕಲಾವಿದರನ್ನು ತುಂಬಾ ಚೆನ್ನಾಗಿ ಅಭಿನಯದಲ್ಲಿ ಪಳಗಿರುವವರು ಬೇಕು ಅಂತೆಲ್ಲಾ ಇರುತ್ತೆ. ಕಮರ್ಷಿಯಲ್, ಸೆಂಟಿಮೆಂಟ್ ಧಾರಾವಾಹಿಗಳ ಮಧ್ಯೆಯೂ ಪೌರಾಣಿಕ ಧಾರಾವಾಹಿಗೂ ಬೇಡಿಕೆ ಹೆಚ್ಚಾಗಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಶನಿ.

ಪ್ರತಿಯೊಬ್ಬರು ಕಾದು ಪ್ರತಿನಿತ್ಯ ತಪ್ಪದೆ ನೋಡುವ ಧಾರಾವಾಹಿ ಶನಿ. ಸೀರಿಯಲ್ ಆರಂಭ ಆದಾಗಿನಿಂದಲೂ ಪ್ರತಿಹಂತದಲ್ಲೂ ಕುತೂಹಲವನ್ನು ಹುಟ್ಟುಸಿಕೊಂಡು ಬಂದಿರುವ ಶನಿ ಧಾರಾವಾಹಿಯ ಕಲಾವಿದರ ಬಗ್ಗೆ ಇತ್ತೀಚಿಗಷ್ಟೆ ಇದೇ ಫಿಲ್ಮೀ ಬೀಟ್ ನಲ್ಲಿ ಓದಿದ್ರಿ. ಅದೇ ರೀತಿಯಲ್ಲಿ ಶನಿ ಪಾತ್ರಧಾರಿ ಸುನೀಲ್ ಬಗ್ಗೆಯೂ ಸಾಕಷ್ಟು ಮಾಹಿತಿಯನ್ನ ನೀಡುತ್ತಾ ಬಂದಿದ್ದೇವೆ.

ಶತದಿನೋತ್ಸವ ಶನಿ ಧಾರಾವಾಹಿಯ ಪಾತ್ರ ಪರಿಚಯ

ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿರುವ ಸುನೀಲ್ ಬೆಳೆದದ್ದು ಎಲ್ಲಿ. ಸುನೀಲ್ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ. ಶನಿ ಪಾತ್ರಕ್ಕೆ ಸುನೀಲ್ ಆಯ್ಕೆ ಆಗಿದ್ದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ದೀನ ಬಂಧು ಮಕ್ಕಳ ಜೊತೆ ಬೆಳೆದ ಸುನೀಲ್

ಸುನೀಲ್ ಚಿಕ್ಕದಿನಿಂದ ಬೆಳೆದಿದ್ದು ಚಾಮರಾಜ ನಗರದ ದೀನ ಬಂಧು ಮಕ್ಕಳ ಆಶ್ರಮದಲ್ಲಿ. ದೀನ ಬಂಧು ಟ್ರಸ್ಟ್ ನವರದ್ದೇ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ.

ದೀನ ಬಂಧು ಮಕ್ಕಳ ಆಶ್ರಮ

ದೀನ ಬಂಧು ಮಕ್ಕಳ ಆಶ್ರಮ ಜಿ ಎಸ್ ಶಿವರುದ್ರಪ್ಪ ಅವರ ಪುತ್ರ ನಡೆಸಿಕೊಂಡು ಬರುತ್ತಿರುವ ಮಕ್ಕಳಿಗಾಗಿ ಇರುವ ಆಶ್ರಮ. ಸುನೀಲ್ ಅವರಂತೆ ಸಾಕಷ್ಟು ಗಂಡು ಮತ್ತು ಹೆಣ್ಣು ಮಕ್ಕಳು ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಅಭಿನಯದಲ್ಲಿ ಸುನೀಲ್ ಆಸಕ್ತಿ

ಸುನೀಲ್ ಚಿಕ್ಕದಿನಿಂದಲೂ ಅಭಿನಯದಲ್ಲಿ ತುಂಬಾ ಆಸಕ್ತಿ ಬೆಳಸಿಕೊಂಡಿರುವಂತಹ ನಟ. ಈಗಾಗಲೇ ಯಕ್ಷಗಾನವನ್ನು ಕಲಿತಿದ್ದು ಆಡಿಷನ್ ಮೂಲಕ ಶನಿ ಧಾರಾವಾಹಿಗೆ ಸುನೀಲ್ ಅವರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.

500 ಜನರಲ್ಲಿ ಆಯ್ಕೆ ಆದ ಸುನೀಲ್

ಸುನೀಲ್ ಸುಮಾರು 500 ಹುಡುಗರಲ್ಲಿ ಶನಿ ಪಾತ್ರಕ್ಕೆ ಆಯ್ಕೆ ಆದ ನಟ. ಕಾಸ್ಟಿಂಗ್ ಡೈರೆಕ್ಟರ್ ದೀಪಕ್ ಕೊಟ್ಟ ಡೈಲಾಗ್ ಅನ್ನು ಮೊದಲ ಬಾರಿಯೇ ತುಂಬಾ ಚೆನ್ನಾಗಿ ಎಲ್ಲರ ಮುಂದೆ ಸುನೀಲ್ ಹೇಳಿ ಬೇಷ್ ಎನ್ನಿಸಿಕೊಂಡರು .

Read more about: colors kannada tv ಟಿವಿ
English summary
Kannada Serial Shani character Sunil Full details. Sunil grew up in Dina Bandhu Children's Ashrama in Chamarajanagar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X