For Quick Alerts
  ALLOW NOTIFICATIONS  
  For Daily Alerts

  ಗಾಂಧಿ ಜಯಂತಿ ಪ್ರಯುಕ್ತ ಸುವರ್ಣ ಸಮಾಗಮ

  By Rajendra
  |

  ಸ್ಟಾರ್ ನೆಟ್‍ ವರ್ಕ್ಸ್ ನ ಸುವರ್ಣ ವಾಹಿನಿಯು ಸದಭಿರುಚಿಯ ಕಾರ್ಯಕ್ರಮಗಳನ್ನು ರೂಪಿಸಿ ಅದೇ ಹಾದಿಯಲ್ಲಿಯೇ ಮುಂದುವರೆಯುತ್ತಿದ್ದು ಕನ್ನಡಿಗರ ಜನಮನ ಗೆದ್ದಿದೆ ಎಂಬುದು ಹೆಮ್ಮೆಯ ಸಂಗತಿ. ವಾಹಿನಿಯು ಗಾಂಧಿ ಜಯಂತಿ ಪ್ರಯುಕ್ತ ಸುವರ್ಣ ಸಮಾಗಮ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ.

  ಇದು ಮಿಲನ ಧಾರಾವಾಹಿಯ ತಂಡದವರು ಚಿಕ್ಕಮಂಗಳೂರಿನ ಜನತೆಯೊಂದಿಗೆ ಇತ್ತೀಚೆಗೆ ನಡೆಸಿದ ಮುಕ್ತ ಸಂವಾದವಾಗಿದೆ. ಕಾರ್ಯಕ್ರಮವು ಇದೇ ಅಕ್ಟೋಬರ್ 2 ರಂದು ಮಧ್ಯಾಹ್ನ 1-30ಕ್ಕೆ ಪ್ರಸಾರವಾಗಲಿದೆ.

  'ಮಿಲನ' ಧಾರಾವಾಹಿಯ ನಿರ್ದೇಶಕರು ಹಾಗೂ ಕಲಾವಿದರುಗಳು ಚಿಕ್ಕಮಂಗಳೂರಿನ ಜನತೆಯೊಂದಿಗೆ ಮಾತನಾಡಿ ಅವರ ಅಭಿಪ್ರಾಯ ಸಲಹೆ ಸೂಚನೆಗಳನ್ನು ಪಡೆದರು ಹಾಗೂ ವೀಕ್ಷಕರಿಗೆ ಧಾರಾವಾಹಿ ಕುರಿತು ಇದ್ದ ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಅವರ ಮುಂದಿನ ನೀರೀಕ್ಷೆಗಳೇನು ಎಂಬುದನ್ನು ತಿಳಿಯಲು ಈ ವೇದಿಕೆ ಸಹಕಾರಿಯಾಯಿತು.

  ಸುವರ್ಣ ಸಮಾಗಮದಲ್ಲಿ ಮಿಲನ ಧಾರಾವಾಹಿಯ ಪಾತ್ರಧಾರಿಗಳಾದ ಸಮರ್ಥಾ, ಪ್ರಾರ್ಥನಾ, ಐಶ್ವರ್ಯಾ ಅವರ ಪಾತ್ರಗಳಿಗೆ ಅನುಗುಣವಾದಂತಹ ಹಾಡುಗಳನ್ನೇ ಆಯ್ಕೆ ಮಾಡಿಕೊಂಡು ಅವುಗಳಿಗೆ ಹೆಜ್ಜೆ ಹಾಕಿದ್ದಾರೆ.

  ಸಮರ್ಥಾ-ಪ್ರಾರ್ಥನಾ ಹಾಗೂ ಐಶ್ವರ್ಯಾ ಜೋಡಿ; ಚಿಂತನಾ - ನಿರಂಜನ್ ಜೋಡಿ; ಸಮರ್ಥಾ-ಐಶ್ವರ್ಯಾ; ಪ್ರಕಾಶ್ -ಚೂಡಾ ಹೀಗೆ ಮಿಲನ ಧಾರಾವಾಹಿಯ ಕಲಾವಿದರ ಬಳಗ ಜೋಡಿ- ಜೋಡಿಯಾಗಿ ಕುಣಿದು ನೆರೆದ ಪ್ರೇಕ್ಷರನ್ನು ರಂಜಿಸಿದರು.

  ಹೀಗೆ ವಾಹಿನಿಯು ಮುಂಚುಣಿ ಸ್ಥಾನವನ್ನು ಪಡೆಯಲು ನೇರವಾಗಿ ವೀಕ್ಷಕರೊಂದಿಗೆ ವಿಚಾರ - ವಿನಿಮಯ ಮಾಡಿ ಅವರ ಅಭಿಪ್ರಾಯಗಳನ್ನು ಸ್ವೀಕರಿಸಿ ದಾಪುಗಾಲಿಡಲು ಸುವರ್ಣ ಸಮಾಗಮ ಸಹಕಾರಿಯಾಗಿದೆ. ನಿಮ್ಮ ನೆಚ್ಚಿನ ಕಲಾವಿದರುಗಳೇ ನಿಮ್ಮೊಂದಿಗೆ ಹಾಡಿ, ಕುಣಿದು ಕುಪ್ಪಳಿಸಿದ ಕ್ಷಣಗಳನ್ನು ತಪ್ಪದೇ ಇದೇ ಅಕ್ಟೋಬರ್ 2 ರಂದು ಪ್ರಸಾರವಾಗುವ ಸುವರ್ಣ ಸಮಾಗಮ ಕಾರ್ಯಕ್ರಮವನ್ನು ವೀಕ್ಷಿಸಿ. (ಒನ್ಇಂಡಿಯಾ ಕನ್ನಡ)

  English summary
  Suvarna Channel will telecast a special programme on Gandhi Jayanthi. The special programme 'Suvarna Samagama' Will telecast on October 2 nd 1-30PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X